ಶಿಗ್ಗಾವ್

ಶಿಶುನಾಳ ಶರೀಫರ ಪ್ರತಿಮೆ ಸ್ಥಾಪನೆಗೆ ಮಂಜುನಾಥ್ ಆಗ್ರಹ

ಶಿಶುನಾಳ ಶರೀಫರ ಪ್ರತಿಮೆ ಸ್ಥಾಪನೆಗೆ ಮಂಜುನಾಥ್ ಆಗ್ರಹ

ಶಿಗ್ಗಾವಿ 25: ಗಂಡುಮೆಟ್ಟಿನ ನಾಡು ಚೆನ್ನಮ್ಮ ರಾಯಣ್ಣ ನೆಲೆಬೀಡು ಕುಂದಾನಗರಿ ಬೆಳಗಾವಿಯ ಸುವರ್ಣಸೌಧದ ಎದುರು ಚನ್ನಮ್ಮಾಜಿ ಮತ್ತು ರಾಯಣ್ಣನವರ ಪುತ್ಥಳಿಗಳ ಸ್ಥಾಪನೆ ಮಾಡುವ ನಿರ್ಧಾರ ಸ್ವಾಗತಾರ್ಹ ಜೊತೆಗೆ ಸಾಮರಸ್ಯದ ಕೊಂಡಿ ಜಾನಪದ ಕಲಿ ಶಿಶುನಾಳ ಶರೀಫ ಹಾಗೂ ಗುರು ಗೋವಿಂದರ ಪುತ್ಥಳಿ ಸ್ಥಾಪನೆ ಆಗಲೇಬೇಕು ಮುಖ್ಯಮಂತ್ರಿಗಳಿಗೆ  ಸಾಮಾಜಿಕ ಹೋರಾಟಗಾರ ಹಾಗೂ ಶಿಗ್ಗಾವ್ ತಾಲೂಕಾ ಕಾಂಗ್ರೆಸ್ ಪಕ್ಷದ  ಮುಖಂಡ ಮಂಜುನಾಥ್ ಮಣ್ಣಣ್ಣವರ ಆಗ್ರಹ ಮಾಡಿದರು. 

ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿ ಬೆಳಗಾವಿ ಸುವರ್ಣ ಸೌಧ ಅಧಿವೇಶನದಲ್ಲಿ ಚನ್ನಮ್ಮ ಹಾಗೂ ರಾಯಣ್ಣ ನವರ ಪುತ್ಥಳಿ ನಿರ್ಮಾಣಕ್ಕೆ ತೆಗೆದುಕೊಂಡ  ಮುಖ್ಯಮಂತ್ರಿಗಳ ನಿರ್ಧಾರ ಸ್ವಾಗತಾರ್ಹವಾಗಿದೆ ಜೊತೆಗೆ ಐತಿಹಾಸಿಕ ಹಾಗೂ ಜಾನಪದ ಕತೃ ಸಮಾಜದ ಸಾಮರಸ್ಯದ ಬೆಳಕಾಗಿರುವ ಶಿಶುನಾಳ ಶರೀಫರ ಹಾಗೂ ಗುರು ಗೋವಿಂದರ ಪುತ್ಥಳಿಗಳನ್ನು ಸುವರ್ಣಸೌಧದ ಎದುರು ಸ್ಥಾಪಿಸುವ ಕೆಲಸವಾಗಬೇಕು ನಿರ್ಧಾರ ಆದಷ್ಟು ಬೇಗನೆ ಕಾರ್ಯಗತವಾಗಬೇಕು ಕನ್ನಡಿಗರ ಮೇಲೆ ಪದೇಪದೇ ಇಲ್ಲಸಲ್ಲದ ಸಮಸ್ಯೆ ಮಾಡುತ್ತಿರುವ ಎಂಇಎಸ್ ಸಂಘಟನೆಯ ನಿರ್ಬಂಧಕ್ಕೆ ಖಂಡನಾ ನಿರ್ಣಯ ಕೈಗೊಂಡಿರುವುದು ಸಾಕಾಗುವುದಿಲ್ಲ ಅವರ ಉಪಟಳವನ್ನು ಹತ್ತಿಕ್ಕಲು ಕಾನೂನು ಜಾರಿ ಮಾಡಿ ಕ್ರಮ ಕೈಗೊಳ್ಳಬೇಕು  ಎಂದಿದ್ದಾರೆ. 

ಸುದ್ದಿ ಓದಿ