ಶಿಗ್ಗಾವ್

ಕ್ಷೇತ್ರದ ಜನರ ಆಶೋತ್ತರಗಳ ಪ್ರಣಾಳಿಕೆ ಅಭಿಯಾನಕ್ಕೆ ಚಾಲನೆ : ರವಿ ಕೃಷ್ಣಾರೆಡಿ

ಕ್ಷೇತ್ರದ ಜನರ ಆಶೋತ್ತರಗಳ ಪ್ರಣಾಳಿಕೆ ಅಭಿಯಾನಕ್ಕೆ ಚಾಲನೆ :  ರವಿ ಕೃಷ್ಣಾರೆಡಿ

ಶಿಗ್ಗಾವಿ 15 ಃ ಉಪಚುನಾವಣೆ ನಿಮಿತ್ತ “ಶಿಗ್ಗಾವಿ-ಸವಣೂರು ಜನರ ಆಶೋತ್ತರಗಳ ಪ್ರಣಾಳಿಕೆ” ಅಭಿಯಾನಕ್ಕೆ ನಾಳೆಯಿಂದ ಚಾಲನೆ ನೀಡುತ್ತಿರುವುದಾಗಿ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಶಿಗ್ಗಾವಿ ಮತಕ್ಷೇತ್ರದ ಕೆಆರ್‌ಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿಯವರು ತಿಳಿಸಿದರು. 

ಪಟ್ಟಣದಲ್ಲಿರುವ ತಮ್ಮ ಕಛೇರಿಯಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜಕೀಯ ಪಕ್ಷಗಳು ಜನರ ಅಭಿಪ್ರಾಯಗಳಿಗೆ ಗೌರವ ಕೊಡದೇ, ಸುಳ್ಳು ಮತ್ತು ಅಪ್ರಾಮಾಣಿಕ ಪ್ರಣಾಳಿಕೆಗಳನ್ನು ಹೊರಡಿಸಿ ಜನರನ್ನು ವಂಚಿಸುವ ಕೆಲಸ ಮಾಡುತ್ತಿವೆ, ಈ ಸಂದರ್ಭದಲ್ಲಿ ನೇರವಾಗಿ ಜನರ ಜೊತೆಯೇ ಸಂವಾದಿಸಿ ಅವರ ಅಗತ್ಯಗಳಿಗೆ ಅನುಗುಣವಾಗಿ ಪ್ರಣಾಳಿಕೆ ರಚಿಸುವ ಕೆಲಸಕ್ಕೆ ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್‌ಎಸ್ ಪಕ್ಷ ಮುಂದಾಗಿದೆ, “ಸಂತರ-ಶರಣರ ನಾಡಾದ ಈ ಮತಕ್ಷೇತ್ರದಲ್ಲಿ ಪಕ್ಷವು ಈಗಾಗಲೇ ಸಂಚಲನವನ್ನು ಸೃಷ್ಟಿಸಿದ್ದು, ಪಕ್ಷದ ಕಾರ್ಯಕರ್ತರು ಕ್ಷೇತ್ರದ ಮೂಲೆಮೂಲೆಗೆ ತೆರಳಿ ಪ್ರಚಾರ ಮಾಡಿದ್ದಾರೆ ಮತ್ತು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.  

“ಜನಸಂವಾದ ಕಾರ್ಯಕ್ರಮ ಯಾವ ಮಟ್ಟಿಗೆ ಯಶಸ್ವಿ ಆಗಿದೆಯೆಂದರೆ, ಯಾವೆಲ್ಲಾ ಊರುಗಳಲ್ಲಿ ಈ ಕಾರ್ಯಕ್ರಮ ಆಗಿಲ್ಲವೋ, ಆ ಗ್ರಾಮಗಳ ಗ್ರಾಮಸ್ಥರು ಪಕ್ಷದ ಕಚೇರಿಗೆ ಬಂದು ಅಥವ ಕರೆಮಾಡಿ ನಮ್ಮ ಊರಿನಲ್ಲಿಯೂ ಜನಸಂವಾದ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಈಗಾಗಲೇ ಜನ ಸಂವಾದ ನಡೆದಿರುವ ಜನರ ಮತ್ತು ಗ್ರಾಮಗಳ ಸಮಸ್ಯೆಗಳನ್ನು ಆಲಿಸಿ, ಮತ್ತು ಇತರೆ ಗ್ರಾಮಗಳಲ್ಲಿ ಹಾಗು ಶಿಗ್ಗಾವಿ, ಸವಣೂರು ಮತ್ತು ಬಂಕಾಪುರ ಪಟ್ಟಣಗಳಲ್ಲಿ ನಮಗೆ ಕಂಡು ಬಂದಿರುವ ಸಮಸ್ಯೆಗಳನ್ನು ಪಟ್ಟಿಮಾಡಿಕೊಂಡು ಸಂಬಂದಪಟ್ಟ ಇಲಾಖೆಗಳ ಗಮನಕ್ಕೆ ತರಲಾಗಿದೆ ಮತ್ತು ನೂರಾರು ವ್ಯಯಕ್ತಿಕ ಸಮಸ್ಯೆಗಳು ಬಗೆಹರಿದಿವೆ” ಎಂದು ಹೇಳಿದರು.  

ಈಗಾಗಲೇ ಪಕ್ಷದ ಕಾರ್ಯಕರ್ತರು ಪ್ರಚಾರದ ಸಮಯದಲ್ಲಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಿದ್ದಾರೆ, ಇದೇ ನಿಟ್ಟಿನಲ್ಲಿ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಸಮಗ್ರ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕೆಲಸ ಮಾಡುತ್ತಿದ್ದು, ಈ ಚುನಾವಣೆಯಲ್ಲಿ ಜನರ ಮೂಲಕ ಪ್ರಣಾಳಿಕೆ ತಯಾರಿ ಮಾಡಲಾಗುವುದು. ತಮ್ಮ ಕ್ಷೇತ್ರದ ಶಾಸಕರಿಂದ ಏನನ್ನು ಬಯಸುತ್ತಾರೆ ಮತ್ತು ಕ್ಷೇತ್ರದ ಸವಾಂರ್ಗೀಣ ಅಭಿವೃದ್ಧಿಗೆ ಅವರ ಪ್ರಕಾರ ಯಾವೆಲ್ಲಾ ಯೋಜನೆಗಳು ಅನುಷ್ಠಾನವಾಗಬೇಕು ಎಂದು ಕೇಳಿ, ಇದಕ್ಕೆ ಜನರು ನೀಡುವ ಅಭಿಪ್ರಾಯಗಳನ್ನು ವಿಡಿಯೋ ಚಿತ್ರೀಕರಿಸಿಕೊಳ್ಳಲಿದ್ದಾರೆ. ಜನರೂ ಸಹ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಬರಹದಲ್ಲಿ ಅಥವ ವಿಡಿಯೋ ಮಾಡಿ ಕೆಆರ್‌ಎಸ್ ಪಕ್ಷದ ಸಹಾಯವಾಣಿ ಸಂಖ್ಯೆ 88617-75862 ಗೆ ಕರೆ ಮಾಡಬಹುದು. 

ಈ ಸಂದರ್ಭದಲ್ಲಿ ರಾಜ್ಯಾ ಕಾರ್ಯದರ್ಶಿ ರಘುಪತಿ ಭಟ್ಟ್‌,  ಜಿಲ್ಲಾಧ್ಯಕ್ಷ ಧರ್ಮರಾಜ ಬಿಂದಲಗಿ ಉಪಸ್ಥಿತರಿದ್ದರು. 


ಸುದ್ದಿ ಓದಿ