ಮುಂದಗೋಡ

ಮಳೆಯಿಂದ ಮಾವಿನ ಕಾಯಿಗಳ ಮೇಲೆ ಚುಕ್ಕೆ, ಕಟಾವು ಮಾಡದೆ ಹಾನಿ

ಮಳೆಯಿಂದ ಮಾವಿನ ಕಾಯಿಗಳ ಮೇಲೆ ಚುಕ್ಕೆ, ಕಟಾವು ಮಾಡದೆ ಹಾನಿ

ಶಶಿಧರ ಕುಲಕರ್ಣಿ  

ಮುಂಡಗೋಡ:ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಮಾವಿನ ತೋಟದ ರೈತನೊಬ್ಬ ಮಾವಿನ ಕಾಯಿಗಳ ಕಟಾವಿನ ವೇಳೆಯಲ್ಲಿ ಆದ ಮಳೆಯಿಂದ ಮಾವಿನ ಕಾಯಿಗಳ ಮೇಲೆ ಚುಕ್ಕೆ ಬಿದ್ದು  

ಪ್ಪು ಬಣ್ಣಕ್ಕೆ ತಿರುಗಿ ಕಾಯಿಗಳನ್ನು ಕಟಾವು ಮಾಡಲು ಆಗದೆ ಹಾನಿ ಅನುಭವಿಸಿ ಸಂಕಷ್ಟದಲ್ಲಿದ್ದಾರೆ.  

ಚನ್ನವೀರಯ್ಯ(ಉದಯ) ಹಿರೇಮಠ ಹಾನಿ ಅನುಭವಿಸಿದ ರೈತ. ಇವರು ತಮ್ಮ ಒಂದು ಎಕರೆ ತೋಟದಲ್ಲಿ ತೋತಾಪೂರಿ ಮತ್ತು ಬೇನಿಶಾ ತಳಿಯ ಮಾವಿನ ಗಿಡಗಳನ್ನು ಬೆಳೆದಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಮಾವಿನ ಗಿಡಗಳು ಚೆನ್ನಾಗಿ ಕಾಯಿಗಳನ್ನು ಬಿಟ್ಟಿದ್ದವು. ಕಾಯಿಗಳು ಚೆನ್ನಾಗಿ ಬಲಿತು ಇನ್ನೇನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಸತತ ಮಳೆ ಬಿದ್ದ ಕಾರಣದಿಂದ ಮಾವಿನ ಕಾಯಿಗಳ ಮೇಲೆ ಚುಕ್ಕೆ ಬಿದ್ದು ಕಪ್ಪು ಬಣ್ಣಕ್ಕೆ ತಿರುಗಿವೆ. ಇದರಿಂದ ಖರೀದಿದಾರರು ತೋಟಕ್ಕೆ ಬಂದು ಕಾಯಿಗಳನ್ನು ನೋಡಿ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಕಾಯಿಗಳನ್ನು ಕಟಾವು ಮಾಡದೆ ಹಾಗೆಯೇ ಬಿಟ್ಟಿರುವುದರಿಂದ ಅವು ಗಿಡದ ಬುಡದಲ್ಲಿಯೆ ಉದುರಿ ಬಿದ್ದು ತುಂಬಾ ನಷ್ಟ ಅನುಭವಿಸಿದ್ದಾರೆ. ಕರೊನಾ ಕಾರಣದಿಂದ ಕಳೆದ ಎರಡು ವರ್ಷ ಹಾನಿಯಾಯಿತು. ಈ ಬಾರಿ ಕಟಾವು ಮಾಡುವ ವೇಳೆ ಮಳೆಯಿಂದ ಹಾನಿ ಅನುಭವಿಸಬೇಕಾಗಿ ಬಂತು ಎಂದು ಚನ್ನವೀರಯ್ಯ ತಮ್ಮ ಸಂಕಟ ತೋಡಿಕೊಂಡರು.  

ಚನ್ನವೀರಯ್ಯ(ಉದಯ) ಹಿರೇಮಠ, ರೈತ: ನಮ್ಮ ತಂದೆಯವರು ನೆಟ್ಟ ಮಾವಿನ ಗಿಡಗಳು. ಪ್ರತಿ ವರ್ಷ ತುಂಬಾ ಚೆನ್ನಾಗಿ ಕಾಯಿ ಬಿಡುತ್ತವೆ. ಉತ್ಪನ್ನ ಚೆನ್ನಾಗಿದೆ. ಸುಮಾರು 80ಸಾವಿರದಿಂದ 1ಲಕ್ಷ ರೂ.ವರೆಗೆ ಆದಾಯ ಬರುತ್ತಿತ್ತು. ಈ ಬಾರಿ ಆದ ಮಳೆಯಿಂದ ಚುಕ್ಕೆ ಬಿದ್ದು ಕಪ್ಪು ಬಣ್ಣಕ್ಕೆ ತಿರುಗಿವೆ. ಇಲ್ಲಿಯವರೆಗೆ ಕೇವಲ ಮೂರು ಟ್ರೇಗಳಷ್ಟು ಕಾಯಿಗಳನ್ನು ಮಾತ್ರ ಗಿಡದಿಂದ ತೆಗೆದಿದ್ದೇನೆ. ಮಾರಲು ದರ ಸಿಗುವುದಿಲ್ಲ. ಗಿಡದಿಂದ ನೆಲಕ್ಕೆ ಬಿದ್ದ ಕಾಯಿಗಳನ್ನು ದನ-ಕರುಗಳಿಗೆ ತಿನ್ನಲು ಬಿಟ್ಟಿದ್ದೇನೆ. ಬಹಳ ನಷ್ಟವಾಗಿದೆ. 


ಸುದ್ದಿ ಓದಿ