ಸಾಂಸ್ಕೃತಿ ವೇದಿಕೆಯಲ್ಲಿ ಜರುಗಿದನ ಪ್ರವಚನ ಮಂಗಲೋತ್ಸವ ಕಾರ್ಯಕ್ರಮ
ಮುಂಡರಗಿ 04: ಈ ಮಠವು ಪ್ರತಿವರ್ಷ ಮೂಲ ಪುರುಷರ ಚರಿತ್ರೆ ಕುರಿತು ಪ್ರವಚನ ಹಾಗೂ ಪುರಾಣನ್ನು ನಡೆಸುವ ಮೂಲಕ ಭಕ್ತರ ಮನಸ್ಸಿನಲ್ಲಿ ಚೈತನ್ಯ ಹಾಗೂ ಜೀವನದ ಪ್ರೇರಣೆಗೆ ಸಾಕ್ಷಿಯಾಗುತ್ತಿದೆ ಎಂದು ಡಾ.ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು.
ಸ್ಥಳಿಯ ಜಗದ್ಗುರು ಅನ್ನದಾನೀಶ್ವರ ಸಾಂಸ್ಕೃತಿ ವೇದಿಕೆಯಲ್ಲಿ ಜರುಗಿದನ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ ಮಾತನಾಡಿದ ಅವರು, ಈ ಮಠವು ಪ್ರತಿಯೊಂದು ಬೆಳವಣಿಗೆಯಾಗಬೇಕಾದರೆ ಹಲವಾರು ಜನತೆಯ ಬೆವರು ಇದೆ. ಅಲ್ಲದೇ ಮಠದ ವಿದ್ಯಾರ್ಥಿಗಳು ಬಹಳಷ್ಟು ಶ್ರಮಿಸಿದರು. ಬೆಳನಿಣಿಗೆ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ ಮಠದ ಅಭಿವೃದ್ಧಿ ಮಾಡಲಾಯಿತು. ಇಂದು ಈ ಮಠದ ವ್ಯವಸ್ಥೆ ಉತ್ತಮವಾಗಿ ಬೆಳೆದು ನಿಂತಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಬೆಳವಣಿಗೆಯನ್ನು ಕಾಣಬಹುದು.
ವಿಶೇಷವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮುಂಡರಗಿ ಮಠವನ್ನು ಆಯ್ಕೆ ಮಾಡಿ ವಿದ್ಯಾಭ್ಯಾಸ ಮಾಡಿ ಅನೇಕರು ಡಾಕ್ಟರೇಟ್ ಪದವಿಯನ್ನು ಸಹ ಪಡೆಯುವ ಮೂಲಕ ಈ ಮಠದ ವೈಶಿಷ್ಟತೆ ಅನೇಕ ಕಡೆ ಪರಿಚಯವಾಗಿದೆ. ಶ್ರೀಮಠದ ಇಂತಹ ಸೇವೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಈ ವೇಳೆ ಹಿರಿಯ ಸಾಹಿತಿ ಆರ್.ಎಲ್.ಪೋಲೀಸ್ ಪಾಟೀಲ್ ಮಾತನಾಡಿ, ಮಾಹಾನುಭವರನ್ನು ನೆನೆಯುವುದರಿಂದ ಈಡೀ ಜೀವನವನ್ನು ಶಾಂತಿ, ಸಂತೋಷ ಹಾಗೂ ನೆಮ್ಮದಿಭರಿತನಾಗಬಹುದು. ಅಲ್ಲದೇ ಮಹಾನುಭವರ ನಾಮಸ್ಮರಣೆ ಮಾಡುವುದರಿಂದ ಜೀವನದ ಸಾರ್ಥಕತೆ ಕಂಡುಕೊಳ್ಳಬಹುದಾಗಿದೆ. ಬಾಲ್ಯದಿಂದ ಹಿಡಿದು ಇಂದಿನ ಜಗದ್ಗುರು ಅನ್ನದಾನೀಶ್ವರ ಪೂಜ್ಯರು ಅನೇಕ ಲೀಲೆಗಳನ್ನು ಮಾಡುತ್ತಾ ಬಂದಿದ್ದಾರೆ. ಸಾಹಿತ್ಯದ ಕೃಷಿಯನ್ನು ಮಾಡುವ ಇವರು ನಾಡಿನುದ್ದಕ್ಕೂ ಸಾಹಿತ್ಯವನ್ನು ಉಣಬಡಿಸಿದ್ದಾರೆ ಎಂದು ಹೇಳಿದರು.
ಪ್ರವಚನ ಕಮೀಟಿ ಅಧ್ಯಕ್ಷ ಮಂಜುನಾಥ ಮುಧೋಳ ಮಾತನಾಡಿದರು. ನಂತರ ಪ್ರವಚನದಂದು ಪ್ರತಿದಿನ ಪ್ರಸಾದ ಸೇವೆಗೆ ಸಹಾಯ ಮಾಡಿದವರಿಗೆ ಹಾಗೂ ತಿಂಗಳ ಪರ್ಯಂತ ಭಕ್ತರಿಗೆ ಅಡುಗೆ ಮಾಡಿದಂತ ಸಾಧಕರಿಗೆ, ಹಿರಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಂಜುನಾಥ ಸ್ವಾಮೀಜಿ, ನರಸಾಪೂರ ಶ್ರೀಗಳು, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ನಾಗರಾಜ ಕೊರ್ಲಹಳ್ಳಿ, ನಾಗರಾಜ ಮುಖ್ಯೆ, ಮುತ್ತು ಬಳ್ಳಾರಿ ಹಾಗು ನೂರಾರು ಸದ್ಬಕ್ತರು ಪಾಲ್ಗೊಂಡಿದ್ದರು.