ಮುಂದಗೋಡ

ಭೂಲೋಕದಲ್ಲಿ ಹುಟ್ಟಿ ಪ್ರತಿಯೊಂದನ್ನೂ ಗೆದ್ದು ಬಂದಾಗಲೇ ಮುಕ್ತಿ: ಮಾತೆ ಬಸವೇಶ್ವರಿ

ಭೂಲೋಕದಲ್ಲಿ ಹುಟ್ಟಿ ಪ್ರತಿಯೊಂದನ್ನೂ ಗೆದ್ದು ಬಂದಾಗಲೇ ಮುಕ್ತಿ: ಮಾತೆ ಬಸವೇಶ್ವರಿ

ಮುಂಡಗೋಡ 03: ದೇವರ ಸೃಷ್ಟಿ ಅದ್ಭುತ ಮನುಷ್ಯ ಜನ್ಮದಿಂದ ಮಾತ್ರ ಮುಕ್ತಿ ಪಡೆಯಲು ಸಾಧ್ಯ ಬದಲಾವಣೆ ಜಗತ್ತಿನ ನಿಯಮ ಜಗತ್ತನ್ನು ನಾವು ಗೆಲ್ಲಬೇಕು ಎಂದು ತಾಲೂಕಿನ ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಹೇಳಿದರು. 

ಹುಣ್ಣಿಮೆ ಪ್ರಯುಕ್ತ ಪಟ್ಟಣದ ನಂದೀಶ್ವರ ನಗರದ ಉಮೇಶ ಗಾಣಿಗೇರ ಅವರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ ಮನೆಯಲ್ಲಿ ಮಹಾಮನೆ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸತ್ಯವಂತರ ಸಂಗ ಸತ್ಸಂಗ. ಸತ್ಯವಂತರ ಸಂಗ ಅಥವಾ ದುರ್ಜನರ ಸಂಗ ಮಾಡುವ ಆಯ್ಕೆ ನಿಮಗೆ ಬಿಟ್ಟಿದ್ದು. ಬಿರುಗಾಳಿ, ಸುಂಟರಗಾಳಿ ಹಾಗೆಯೇ ತಂಗಾಳಿಯೂ ಇದೆ. ಹರಿಯುವ ನೀರು, ಕೊಚ್ಚಿಕೊಂಡು ಹೋಗುವ ನೀರು, ಅಂತೆಯೇ ಬಾಯಾರಿಕೆ ಇಂಗಿಸಿ ತೃಪ್ತಿ ನೀಡುವ ನೀರೂ ಇದೆ. ಸಾತ್ವಿಕ ಇರುವೆ ಇದೆ ಕ್ರೂರ ಇರುವೆಯೂ ಇದೆ. ಭೂಲೋಕದಲ್ಲಿ ಹುಟ್ಟಿ ಪ್ರತಿಯೊಂದನ್ನೂ ಗೆದ್ದು ಬಂದಾಗಲೇ ಮುಕ್ತಿ. ದೇವರು ಒಳ್ಳೆಯದು ಕೆಟ್ಟದ್ದು ಎಲ್ಲವನ್ನೂ ಕೊಟ್ಟಿದ್ದಾನೆ ಆಯ್ಕೆ ನಮಗೆ ಬಿಟ್ಟಿದ್ದಾನೆ ಎಂದರು.  

ಸತ್ಸಂಗ ವಿಷಯದ ಕುರಿತು ಚಿಂತಕರಾದ ನಂದಿಕಟ್ಟಾ ಗ್ರಾಮದ ಸಿದ್ದನಗೌಡ ಬಸನಗೌಡ್ರ ಮತ್ತು ಶಿಕ್ಷಕ ಸಾಹಿತಿ ಪಿ.ನಾಗೇಂದ್ರ ಚಿಂತನ-ಮಂಥನ ನಡೆಸಿದರು. ಇದೇ ಸಂದರ್ಭದಲ್ಲಿ ಮಾತೆ ಬಸವೇಶ್ವರಿ ಅವರನ್ನು ಉಮೇಶ ಗಾಣಿಗೇರ ಕುಟುಂಬದವರು ಸನ್ಮಾನಿಸಿ ಗೌರವಿಸಿದರು. ನಂದೀಶ್ವರ ನಗರದ ಸಾರ್ವಜನಿಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ