ನಟಿ, ನಿರೂಪಕಿ ಮಂದಿರಾ ಬೇಡಿ ಪತಿ, ನಿರ್ಮಾಪಕ ರಾಜ್ ಶೌಶಲ್ ವಿಧಿವಶ
ಮುಂಬೈ, ಜೂನ್ 30: ಪ್ರಮುಖ ಬಾಲಿವುಡ್ ನಟಿ, ಟಿವಿ ನಿರೂಪಕಿ ಮಂದಿರಾ ಬೇಡಿ ಪತಿ ರಾಜ್ ಕೌಶಲ್ ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾಜ್ ಕೌಶಲ್ ಬಾಲಿವುಡ್ ನಲ್ಲಿ ಹಲವು ಸಿನಿಮಾಗಳ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದರು. "ಪ್ಯಾರ್ ಮೇ ಕಬಿ ಕಬಿ", "ಶಾದಿ ಕಾ ಲಡ್ಡು " ಮುಂತಾದ ಸಿನಿಮಾಗಳನ್ನು ನಿರ್ಮಿಸಿದ್ದರು,
ಕೆಲ ವರ್ಷಗಳ ಹಿಂದೆ ಮಂದಿರಾ ಬೇಡಿ ಅವರನ್ನು ವಿವಾಹ ವಾಗಿದ್ದರು. ಈ ದಂಪತಿಗೆ ಒಬ್ಬ ಪುತ್ರನಿದ್ದಾನೆ. ಕಳೆದ ವರ್ಷ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿದ್ದರು. ಇನ್ನೂ ಮಂದಿರಾ ಬೇಡಿ ಹಲವು ಹಿಂದಿ ಚಿತ್ರಗಳ ಜತೆಗೆ, ಕಿರುತೆರೆ ಧಾರಾವಾಹಿಗಳು, ವೆಬ್ ಸಿರೀಸ್ ಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಶಿಂಬು ಜೊತೆ ಮನ್ಮಥಡು, ಪ್ರಭಾಸ್ ಜೊತೆ ಸಾಹೋ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜ್ ಕೌಶಲ್ ನಿಧನಕ್ಕೆ ಬಾಲಿವುಡ್ ಗಣ್ಯರು ಅಘಾತ ವ್ಯಕ್ತಪಡಿಸಿದ್ದು, ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.