ಕಡ್ಡಾಯವಾಗಿ ರೆರಾ ಕಾಯ್ದೆ ಪಾಲನೆ ಅಗತ್ಯ: ಸೋಮಶೇಖರ ರೆಡ್ಡಿ
ಲೋಕದರ್ಶನ ವರದಿ
ಬಳ್ಳಾರಿ 27: ಬಿಲ್ಡರ್ಸ್ ಮತ್ತು ಡೆವಲಪರ್ಸ್ಗಳು ಸರ್ಕಾರ ಈಗ ಬಳ್ಳಾರಿಗೂ ಅನ್ವಯವಾಗುವಂತೆ ಜಾರಿಗೆ ತಂದಿರುವ ರೆರಾ (ರಿಯಲ್ ಎಸ್ಟೇಟ್ ರೆಗ್ಯೂಲೇಟರಿ ಆಕ್ಟ್) ಕಾಯ್ದೆಯನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ನಗರ ಶಾಸಕ ಸೋಮಶೇಖರ ರೆಡ್ಡಿ ಹೇಳಿದರು.
ನಗರದ ನಕ್ಷತ್ರ ಹೊಟೇಲ್ನ ಅತಿಥಿ ಸಭಾಂಗಣದಲ್ಲಿ ಬಳ್ಳಾರಿಯ ಇಂಜೀನೀಯರ್ಸ್ ಅಂಡ್ ಡೆವಲಪರ್ಸ್ ಕೌನ್ಸಿಲ್ನ್ನು ಉದ್ಘಾಟಿಸಿ ಮಾತನಾಡಿದರು ನಗರಗಳು ದಿನೇ ದಿನೇ ಬೆಳೆಯುತ್ತಿವೆ, ಜೊತೆಗೆ ನಗರದಲ್ಲಿ ಬೃಹತ್ ಲೇ ಓಟ್ಗಳು, ಬೃಹತ್ ಕಟ್ಟಡಗಳು ನಿರ್ಮಾಣವಾಗುತ್ತವೆ ಅದಕ್ಕೆ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ರೂಪಿಸಿರುವ ನಿಯಮಗಳ ಪಾಲನೆ ಅಗತ್ಯ, ಅದಕ್ಕಾಗಿ ಬಿಲ್ಡ್ರ್ಸ್ಗಳು ಸಂಬಂಧಿಸಿದ ಪ್ರಾಧಿಕಾರಗಳ ಅನುಮತಿ ಅಗತ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸಂಜೀವ ಪ್ರಸಾದ್ ನಮ್ಮ ಸಂಸ್ಥೆ ಡೆವಲಪರ್ಸ್ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ. ಕಟ್ಟಡಗಳ, ಲೆಓಟ್, ರಸ್ತೆ ಮೊದಲಾದವುಗಳ ಸ್ವರೂಪ, ಮೂಲ ಸೌಕರ್ಯ, ನಗರ ಸುಂದರೀಕರಣ ಮೊದಲಾದವುಗಳ ಬಗ್ಗೆ ರೇರ ಕಾಯ್ದೆಯನ್ವವ ರೂಪಿಸಿಕೊಡಲಿದೆ. ಆ ಕುರಿತು ಇಂದು ನಡೆಯುವ ವಿಚಾರ ಸಂಕಿರಣದಲ್ಲಿ ಡೆವಲಪರ್ಸ್ ಮತ್ತು ಬಿಲ್ಡರ್ ಗಳಿಗೆ ತಿಳಿಸಿಕೊಡಲಿದೆಂದು ಹೇಳಿದರು.ರಿಯಲ್ ಎಸ್ಟೇಟ್ ರೆಗ್ಯೂಲೇಟರಿ ಆಕ್ಟ್ ಬಗ್ಗೆ ಕಾಯ್ದೆಯ ಸಲಹೆಗಾರ ಮತ್ತು ಲೆಕ್ಕ ಪರಿಶೋಧಕ ವಿನಯ್ ತ್ಯಾಗರಾಜ್, ಮತ್ತು ನ್ಯಾಯವಾದಿ ಈ.ಸುಹೀಲ್ ಅಹಮ್ಮದ್ ವಿಚಾರ ಸಂಕಿರಣದಲ್ಲಿ ತಿಳಿಸಿಕೊಟ್ಟರು. ಸಭೆಯಲ್ಲಿ ಬುಡಾ ಅಧ್ಯಕ್ಷ ಪಿ.ಪಾಲಣ್ಣ, ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ರಾವ್, ಕಾರ್ಯದರ್ಶಿ ಯಶವಂತ್ ರಾಜ್ , ಮಾಜಿ ಅಧ್ಯಕ್ಷ ಡಾ.ರಮೇಶ್ ಗೋಪಾಲ್, ವಿಕಾಸ್ ಜೈನ್ ಮೊದಲಾದವರು ಇದ್ದರು.