ಬಳ್ಳಾರಿ

ಶ್ರೇಯಸ್ಕರವಾಗಿ ಸಾಗಲು ಮಾನವನಿಗೆ ಸಂಸ್ಕಾರ ಅಗತ್ಯ: ನಾಗರಾಜ್

ಶ್ರೇಯಸ್ಕರವಾಗಿ ಸಾಗಲು ಮಾನವನಿಗೆ ಸಂಸ್ಕಾರ ಅಗತ್ಯ: ನಾಗರಾಜ್
ಲೋಕದರ್ಶನ ವರದಿ ಬಳ್ಳಾರಿ, ಸೆ.16: ಸಂಸ್ಕಾರವೆಂದರೆ ಪರಿವರ್ತನೆ, ಪರಿವರ್ತನೆ ಪ್ರಕೃತಿಯ ಧರ್ಮ. ಪಶು ಪಕ್ಷಿ ಪ್ರಾಣಿಗಳ ಬದುಕು ನಿಸರ್ಗ ಸಹಜ ಗುಣದಂತೆ ಬದಲಾಗುತ್ತದೆ. ಆದರೆ ಮಾನವ ತನ್ನ ವಿವೇಕದಿಂದ ಬದುಕನ್ನು ಬದಲಾಯಿಸಿಕೊಳ್ಳಬಲ್ಲ. ಈ ಬದಲಾವಣೆ ಆರೋಗ್ಯಪೂರ್ಣ ಮತ್ತು ಶ್ರೇಯಸ್ಕರವಾಗಿ ಸಾಗಲು ಮಾನವನಿಗೆ ಸಂಸ್ಕಾರ ಅಗತ್ಯವೆಂದು ರಾಷ್ಟ್ರೀಯ ಬಸವದಳದ ಜಿ.ಆರ್‌.ನಾಗರಾಜ್ ನುಡಿದರು. ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಅಚ್ಚಪ್ಪ ನಾಗರಾಜ ರವರ ಮನೆಯಲ್ಲಿ ಏರಿ​‍್ಡಸಿದ್ದ 255ನೇ ಮಹಾಮನೆ "ಲಿಂ. ಅಚ್ಚಪ್ಪ ಸೋಮಪ್ಪ ಹಂಪಮ್ಮ ದತ್ತಿ" ಕಾರ್ಯಕ್ರಮದಲ್ಲಿ "ಶರಣ ಸಂಸ್ಕಾರಗಳು" ವಿಷಯ ಕುರಿತು ಮಾತನಾಡುತ್ತಾ, ಜಗತ್ತಿನ ಎಲ್ಲಾ ಧರ್ಮಗಳಲ್ಲೂ ಸಂಸ್ಕಾರ ವಿಧಿಗಳಿವೆ. ಸಂಸ್ಕಾರವಿಲ್ಲದ ಮಾನವ ಪಶು ಸಮಾನ ಎಂದರು. ಕಾರ್ಯಕ್ರಮದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕೃಷಿ ವಿಜ್ಞಾನಿ ಡಾ. ವಿ.ಎಸ್‌.ವೀರಣ್ಣನವರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪಶು ವೈದ್ಯಕೀಯ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಡಾ. ಎ.ಐ.ಬಸವರಾಜರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ದೇಹಭಾವದಿಂದ ಜೀವಭಾವಕ್ಕೆ, ಜೀವಭಾವದಿಂದ ದೇಹಭಾವಕ್ಕೆ ಸಾಗುವ ಆಧ್ಯಾತ್ಮದ ಪ್ರಯಾಣಕ್ಕೆ ಸಂಸ್ಕಾರಗಳು ಅತಿ ಅಗತ್ಯ ಎಂದರು. ಡಾ. ಗೌತಮಿ ಪ್ರಾರ್ಥನೆ ಮಾಡಿದರು. ಅಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ದತ್ತಿ ಧಾತೃಗಳ ಪರಿಚಯ ಮಾಡಿ ಶರಣ ಸಮರೆ​‍್ಣ ಮಾಡಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳದ ಶರಣರು ಅಚ್ಚಪ್ಪ ನಾಗರಾಜರ ಎರಡನೇ ಮೊಮ್ಮಗಳ ನಾಮಕರಣ ನಡೆಸಿಕೊಟ್ಟರು. ವೇದಿಕೆಯ ಗಣ್ಯರನ್ನು ಸನ್ಮಾನಿಸಲಾಯಿತು. ದಾಸೋಹದೊಂದಿಗೆ ಕಾರ್ಯಕರಮ ಮಂಗಳವಾಯಿತು.

ಸುದ್ದಿ ಓದಿ