ಶಿಗ್ಗಾವ್

ಮಾಮಲೇ ದೇಸಾಯಿ ಮಹಾವಿದ್ಯಾಲಯದ ಫಲಿತಾಂಶ ಶೇ 80ರಷ್ಟು

ಮಾಮಲೇ ದೇಸಾಯಿ ಮಹಾವಿದ್ಯಾಲಯದ ಫಲಿತಾಂಶ ಶೇ 80ರಷ್ಟು

ಶಿಗ್ಗಾವಿ : ಶಿಗ್ಗಾವಿ ಪಟ್ಟಣದ ಮಾಮಲೇ ದೇಸಾಯಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು 2021-22ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಒಟ್ಟು 176 ವಿದ್ಯಾರ್ಥಿಗಳು ಹಾಜರಾಗಿದ್ದು 136 ವಿಧ್ಯಾರ್ಥಿಗಳು ಪಾಸಾಗಿದ್ದು, ಶಾಲೆಯ ಫಲಿತಾಂಶ ಶೇ 80 ಅ ರಷ್ಟು ಆಗಿದೆ ಅದರಲ್ಲಿ ಅತ್ಯುನ್ನತ ಶ್ರೇಣಿ 20, ಉನ್ನತ ಶ್ರೇಣಿ 76, ದ್ವಿತೀಯ ಸ್ಥಾನದಲ್ಲಿ 40 ವಿಧ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.  

ವಿದ್ಯಾರ್ಥಿ ಕುಮಾರಿ ಅನುಷಾ ಮುದೇನಾಯ್ಕರ  (98.4) ಅ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದರೆ, ದ್ವಿತೀಯ ಸ್ಥಾನವನ್ನು ಸಹನಾ ಮಾದರ (93.1) ಅ ಮತ್ತು ವಿನೂತಾ ಮುಂಡಗೋಡ (92.8) ಅ ಪ್ರತಿಶತದೊಂದಿಗೆ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.   

ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಡಾ. ನಂದಕುಮಾರ ಮಾಮಲೇದೇಸಾಯಿ, ಉಪಾಧ್ಯಕ್ಷ ದತ್ತಣ್ಣಾ ವೇರ್ಣೇಕರ, ಕಾರ್ಯದರ್ಶಿ ಎಸ್‌.ಪಿ.ಜೋಶಿ ಪ್ರಾಚಾರ್ಯ ರಮಾಕಾಂತ ಭಟ್, ಉಪ ಪ್ರಾಚಾರ್ಯ ಕೆ.ಬಿ.ಚನ್ನಪ್ಪ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ