ಪೊಲೀಸರು ರೈತರನ್ನು ನಾಯಿಗಳಂತೆ ನೋಡುತ್ತಿದ್ದಾರೆ: ಮಲ್ಲಿಕಾರ್ಜುನ ರೆಡ್ಡಿ
ಬಳ್ಳಾರಿ 12: ನಾವು ಹಳ್ಳಿಗಳ ಜಮೀನುಗಳಲ್ಲಿ ಕೆಲಸ ಮಾಡೋದು ಬಿಟ್ಟು, ಈ ನಗರಗಳಿಗೆ ನಾವ್ಯಾಕೆ ಬರಬೇಕು ಸರ್? ನೀವೆ ನಮ್ಮ ಹಳ್ಳಿಗಳಿಗೆ ಬಂದ್ ಏನೇನು ಸಮಸ್ಯೆ ಇದೆ ಅಂತ ಕೇಳಬಹುದಿತ್ತು ಅಲ್ವಾ. ನೀವು ಅಲ್ಲಿಗೂ ಬಾರದ ಕಾರಣ, ನಾವು ಸಿಟಿಗೆ ಎತ್ತು ಬಂಡಿಗಳನ್ನು ಕಟ್ಟಿಕೊಂಡು ಬಂದರೆ ಪೆÇಲೀಸರು ಮಾತ್ರ ನಮ್ಮನ್ನು ನಾಯಿಗಳಂತೆ ನೋಡುತ್ತಿದ್ದಾರೆ ಸರ್. ಏನ್ ಮಾಡಬೇಕು ನೀವೆ ಹೇಳಿ? ಇವು ಚಾಗನೂರು-ಸಿರಿವಾರ ನೀರಾವರಿ ಭೂ ರಕ್ಷಣಾ ಹೋರಾಟ ಸಮಿತಿ ಸಂಚಾಲಕ ಚಾಗನೂರು ಮಲ್ಲಿಕಾರ್ಜುನ ರೆಡ್ಡಿಯವರ ನೋವಿನ ನುಡಿಗಳು.
ಹೌದು, ರೈತರಿಗೆ ಮರಣ ಶಾಸನವಾಗಿರುವ ಕಾಯ್ದೆಗಳನ್ನು ಹಿಂಪಡೆಯಲು ಹಾಗೂ ಜಿಲ್ಲಾ, ತಾಲೂಕು ಕೇಂದ್ರ ಹಾಗೂ ಹೋಬಳಿ ಮಟ್ಟದಲ್ಲಿ ವಿವಿಧ ಬೆಳೆಗಳ ಖರೀದಿ ಕೇಂದ್ರ ಆರಂಭಿಸುವಂತೆ ಬಳ್ಳಾರಿ ನಗರದಲ್ಲಿ ಬುಧವಾರ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅಧಿಕಾರಿಗೆ ಅಹವಾಲು ಸಲ್ಲಿಸುವಾಗ ಮಾತನಾಡಿದ ಅವರು, ನೀವ್ಯಾಕೆ ಬಿಸಿಲಲ್ಲಿ ಸಿಟಿಗೆಬರ್ತಿರಾ, ನಾವು ಸಮಸ್ಯೆ ಬಗೆಹರಿಸುತ್ತೀವಿ ಅಂತ ರೈತ ಮುಖಂಡರ ಜತೆ ಚರ್ಚೆ ನಡಿಸಿದ್ದರೆ ರೈತರು ಕೂಡ ಬಳ್ಳಾರಿಗೆ ಬರ್ತಾ ಇರಲಿಲ್ಲ. ಯಾಕೆಂದ್ರೆ, ನಾವು ಶೋಕಿಗಾಗಿ ಹೋರಾಟ ಮಾಡುತ್ತಿಲ್ಲ.ಪಬ್ಲಿಸಿಟಿಗಾಗಿ ಹೋರಾಟ ಮಾಡುತ್ತಿಲ್ಲ. ಹೊಟ್ಟೆ ಕಿಚ್ಚಿಗಾಗಿ ಮಾಡುತ್ತಿದ್ದೇವೆ. ನಾವು ಎರಡು ದಿನ ಮೊದಲೇ ಸುದ್ದಿಗೋಷ್ಠಿ ಮಾಡಿದ್ದೇವೆ. ಅದೂ ತಮ್ಮ ಗಮನಕ್ಕೆ ಇರುತ್ತದೆ. ಪೆÇಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಅವರು ನಿಮ್ಮ ಗಮನಕ್ಕೆ ತಂದಿರುತ್ತಾರೆ. ಇದರಿಂದ ನೀವೆ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬಹುದಿತ್ತು ಸರ್...., ಸರ್... ಸರ್ಕಾರದ ಜತೆ ಚರ್ಚೆ ನಡೆಸಿ, ಬೆಂಬಲ ಬೆಲೆಗೆ ಬೆಳೆಗಳನ್ನು ಖರೀದಿ ಮಾಡ್ರಿ ಸರ್ ಅಂಥ ಕೈ ಮುಗಿದು ಬೇಡುತ್ತಿರುವ ದೃಶ್ಯ ನೋಡುತ್ತಿದ್ದರೆ ಛೇ...ಇಡೀ ದೇಶಕ್ಕೆ ಅನ್ನ ನೀಡುವ ರೈತನ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ನೋಡಿ.ಮುಂದುವರಿದು, ‘ನಾವೇ ಸಿಟಿಗೆ ಬಂದರೆ, ಪೆÇಲೀಸರು ಮಾತ್ರ ನಮ್ಮನ್ನು ಹೀನವಾಗಿ ನೋಡುತ್ತಾರೆ ಸರ್’. ‘ಹೇ ನನ್ ಮಗನೆ ಸ್ಟ್ರೈಕ್ ಮಾಡ್ತಿಯೇನೋ? ಇಲ್ಲಿ ಜನರಿಗೆ ತೊಂದರೆ ಆಗುತ್ತದೆ’ ಅಂತ ಬಯ್ಯ್ತರೆ. ಆದರೆ, ರೈತರಿಗೆ ತೊಂದರೆಯಾದರೆ ಎಲ್ಲಿಗೆ ಬರಬೇಕು ಸರ್. ಡಿಸಿ ಕಚೇರಿ, ಮುಖ್ಯಮಂತ್ರಿ ಕಚೇರಿಗಳು ನಮ್ಮ ಹಳ್ಳಿಗಳಲ್ಲಿ ಇದ್ರೆ ನಾವು ಖಂಡಿತವಾಗಿ ನಿಮ್ ಸಿಟಿ ಬರಲ್ಲ, ನಿಮಗೆ ತೊಂದರೆ ಕೊಡಲ್ಲ. ಹೋಗ್ಲಿ ನೀವಾದರೂ ಹಳ್ಳಿಗಳಿಗೆ ಬರ್ತೀರಾ? ನಾನು ನೋವಿನಿಂದ ಹೇಳಿಕೊಳ್ತಿನಿ, ನಮ್ ಮಾತು ಕಹಿ ಅನಿಸಿದರೂ ಕೂಡ ನಮ್ಮ ಮಾತು ಕೇಳಲೇಬೇಕು ಈ ಸಂದರ್ಭದಲ್ಲಿ. ಖರೀದಿ ಕೇಂದ್ರಗಳು ಯಾವಾಗ ತೆರೆಯೋದು? ನಾವು ಪ್ರತಿಸಲ ಹೋರಾಟ ಮಾಡಿ, ಹೋರಾಟ ಮಾಡಿ ನಿಮ್ಮ ಕಣ್ಣು ತೆರೆಸಬೇಕಾ ಹೇಳಿ ಸರ್? ಸಾಹೇಬ್ರೆ, ಕಳೆದ ಸಲ ಆರಂಭಿಸಿದರೂ ಅರ್ಧದಷ್ಟು ರೈತರು ಬೆಳೆ ಮಾರಾಟ ಮಾಡಿದ್ದರು.
ಈ ಸಲವಾದ್ರೂ ಬೇಗ ಆರಂಭಿಸಿ ಕಡಲೆ, ಜೋಳ, ಭತ್ತ ಎಲ್ಲ ಬೆಳೆಗಳು ಬರುತ್ತಿವೆ ಖರೀದಿ ಮಾಡಿ. ಗೋದಾಮುಗಳಲ್ಲಿ ಇಡೋಣ ಅಂದ್ರೆ ಹಳ್ಳಿ ಹಳ್ಳಿಗಳಲ್ಲಿ ಸರ್ಕಾರದವರು ಗೋದಾಮುಗಳನ್ನು ಕಟ್ಟಿಸಿಲ್ಲ ಏನ್ ಮಾಡೋಣ ಅಧಿಕಾರಿಯನ್ನು ಪ್ರಶ್ನಿಸಿದರು. ನಾವು ಈ ಸವಸ್ಯೆಯನ್ನು ಆಸ್ಪತ್ರೆಯಲ್ಲಿ ಹೇಳಿಕೊಳ್ಳಲು ಆಗಲ್ಲ. ಆದ್ದರಿಂದ ನಿಮ್ಮ ಹತ್ತಿರ ಬಂದೀವಿ. ಸರ್ಕಾರದ ಅಧಿಕಾರಿ ನೀವೇ ಇರೋದ್ರಿಂದ ನಿಮ್ಮ ಹತ್ತಿರ ಕೇಳ್ತ ಇದ್ದೇವೆ. ಶೀಘ್ರ ಖರೀದಿ ಕೇಂದ್ರ ಆರಂಭಿಸಲು ಕೈ ಮುಗಿದು ಕೇಳುತ್ತ ಅಧಿಕಾರಿಗೆ ಮನವಿ ಸಲ್ಲಿಸಿದರು.
ರೈತನಾಯಕ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಆರ್.ಮಾಧವರೆಡ್ಡಿ ಕರೂರು, ಜಿಲ್ಲಾ ಉಪಾಧ್ಯಕ್ಷ ತಿಮ್ಮನಗೌಡ, ಸಿರಗುಪ್ಪ ತಾಲೂಕು ಅಧ್ಯಕ್ಷ ವಾ.ಹುಲುಗಯ್ಯ ಸೇರಿ ವಿವಿಧ ಹಳ್ಳಿಗಳ ರೈತ ಮುಖಂಡರು ಇದ್ದರು.