ವಿಜಯಪುರ

ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಮಳಿಯಪ್ಪ ಆಯ್ಕೆ

ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಮಳಿಯಪ್ಪ ಆಯ್ಕೆ

ಕೊಲ್ಹಾರ 14: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಾಗರ ಜೀ ಬಣ ಗ್ರಾಮ ಶಾಖೆ ಕೋರವಾರ ಕೊಡಮಾಡುವ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಟ್ಟಣದ ಶಿಕ್ಷಕ ಮಳಿಯಪ್ಪ ಅಂತರಗೊಂಡ ಆಯ್ಕೆಯಾಗಿದ್ದಾರೆ. 

ಸದ್ಯ ದೇವರಹಿಪ್ಪರಗಿ ತಾಲ್ಲೂಕಿನ ಯಾಳವಾರ ಎಂ ಪಿ ಎಸ್ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಸ್ಸುತ್ತೀರುವ ಮಳಿಯಪ್ಪರವರು, ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಎ.19 ರವಿವಾರದಂದು ದೇವರಹಿಪ್ಪರಗಿ ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಜರಗುವ ಡಾ ಬಾಬಾಸಾಹೇಬ ಅಂಬೇಡ್ಕರವರ 135 ನೇ ಜಯಂತ್ಯೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಶಸ್ತಿ ಪ್ರಧಾನ ಸಮೀತಿ ಅಧ್ಯಕ್ಷ ಅರುಣ ಕೋರವಾರ ತಿಳಿಸಿದ್ದಾರೆ. 


ಸುದ್ದಿ ಓದಿ