ಮನರಂಜನೆ

ಕೋವಿಡ್ ಲಸಿಕೆ ಪಡೆದ ನಟಿ ಮಾಲಾಶ್ರೀ

ಕೋವಿಡ್ ಲಸಿಕೆ ಪಡೆದ ನಟಿ ಮಾಲಾಶ್ರೀ

ಬೆಂಗಳೂರು, ಜೂನ್ 25: ಕೋವಿಡ್ 19 ಎದುರಿಸಲು ಲಸಿಕೆಯೇ ಬ್ರಹ್ಮಾಸ್ತ್ರವಾಗಿದ್ದು, ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಸರ್ಕಾರ ಸೂಚಿಸಿದೆ.  ಅಂತೆಯೇ ಸ್ಯಾಂಡಲ್ ವುಡ್ ನ ಬಹುತೇಕ ಕಲಾವಿದರೂ ಸಹ ಈ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಹಿರಿಯ ನಟ ಅನಂತನಾಗ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಅನೇಕರು ಕೊರೊನಾ ಲಸಿಕೆ ಪಡೆದಿದ್ದಾರೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪರಭಾಷಾ ಕಲಾವಿದರೂ ಸಹ ಲಸಿಕೆ ಹಾಕಿಸಿಕೊಂಡು, ಅಭಿಮಾನಿಗಳಿಗೂ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಇದೀಗ ಸ್ಯಾಂಡಲ್ ವುಡ್ ನಟಿ ಮಾಲಾಶ್ರೀಯವರೂ ಸಹಲ ಕೋವಿಡ್ ವಿರುದ್ಧ ಮೊದಲ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದು, "ವ್ಯಾಕ್ಸಿನೇಟೆಡ್"  ಎಂದು ಬರೆದುಕೊಂಡಿದ್ದಾರೆ.

ಮಾಲಾಶ್ರೀಯವರು ಇತ್ತೀಚೆಗಷ್ಟೆ ಪತಿ ರಾಮು ಅವರನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.  ಕೊರೊನಾ ವೈರಸ್‌ಗೆ ತುತ್ತಾಗಿದ್ದ ರಾಮು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.

ಸುದ್ದಿ ಓದಿ