ಮುಂಡರಗಿ

ಕನ್ನಡ ಮಾತೃ ಭಾಷೆ ಕಡ್ಡಾಯಗೊಳಿಸಿದ್ದು ಸ್ವಾಗತಾರ್ಹ

ಕನ್ನಡ ಮಾತೃ ಭಾಷೆ ಕಡ್ಡಾಯಗೊಳಿಸಿದ್ದು ಸ್ವಾಗತಾರ್ಹ

ಮುಂಡರಗಿ 26:  ಕರ್ನಾಟಕ ಸರ್ಕಾರವು ಆಡಳಿತದಲ್ಲಿ ಕನ್ನಡ ಮಾತೃ ಭಾಷೆಯನ್ನು ಕಡ್ಡಾಯಗೊಳಿಸಿದ್ದು ಸ್ವಾಗತಾರ್ಹ ಎಂದು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ತಿಳಿಸಿದ್ದಾರೆ. 

ಆಡಳಿತದಲ್ಲಿ ಕನ್ನಡ ಮಾತೃಭಾಷೆಯನ್ನು ಕಡ್ಡಾಯಗೊಳಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶೀರ್ವಾದ ಗೈಯುತ್ತೇವೆ. ಕನ್ನಡಕ್ಕೆ ಶಾಸನಾತ್ಮಕ ಬಲ ತಂದ ವಿಧೇಯಕವು ಅತ್ಯಂತ ಮಹತ್ವ ಪೂರ್ಣವಾಗಿದೆ. ಕನ್ನಡವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಪರಿಗಣಿಸಿ ಅನೇಕ ವರ್ಷಗಳೇ ಕಳೆದರೂ ಇದೀಗ ಆಡಳಿತಕ್ಕೆ ಕಡ್ಡಾಯಗೊಳಿಸಿರುವುದು ಭಾರತದ ಅಮೃತ ಮಹೋತ್ಸವ ಸಂದರ್ಭದಲ್ಲಿ ಘೋಷಣೆ ಆಗಿರುವುದು ಐತಿಹಾಸಿಕ ಘಟನೆಯಾಗಿದೆ.  

ಕನ್ನಡ ಭಾಷೆಯು ವಿಶೇಷವಾದ ಸ್ಥಾನ ಮಾನವನ್ನು ಹೊಂದಿದ್ದು 8ಜನ ಜ್ಞಾನಪೀಠದ ವಿಶೇಷ ಗೌರವ ಪಡೆದಿರುವುದು ಕನ್ನಡದ ಖ್ಯಾತಿಯಾಗಿದೆ. ಇದು ವಿಜಯದಶಮಿಯ ಪರ್ವದಲ್ಲಿ ವಿಜಯೋತ್ಸಾಹದಾಯಕ ಎನ್ನುಬಹುದು. ಈ ವಿಧೇಯಕವು ಅವಿರೋಧವಾಗಿ ಜಾರಿಗೆ ಬರಲೆಂದು ಆಶಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ