ಬಳ್ಳಾರಿ

ಆಂಬ್ಯುಲೇನ್ಸ್‌ ವಾಹನದ ಸದುಪಯೋಗಪಡಿಸಿಕೊಳ್ಳಿ: ಡಿಹೆಚ್‌ಓ ಡಾ.ಜನಾರ್ಧನ್

ಆಂಬ್ಯುಲೇನ್ಸ್‌ ವಾಹನದ ಸದುಪಯೋಗಪಡಿಸಿಕೊಳ್ಳಿ: ಡಿಹೆಚ್‌ಓ ಡಾ.ಜನಾರ್ಧನ್

ಬಳ್ಳಾರಿ 10: ಕರ್ನಾಟಕ ರಾಜ್ಯ ಸರ್ಕಾರವು ಸಾರ್ವಜನಿಕರ ಜೀವ ಉಳಿಸಲು ತುರ್ತು ಸೇವೆ ನೀಡುವ ಮೂಲಕ ನಗರ ಮಟ್ಟದಲ್ಲಿಯೂ ಸಹ ಎಲ್ಲರಿಗೂ ಅನುಕೂಲವಾಗುವ ಸುಸಜ್ಜಿತ ಆಂಬ್ಯುಲೆನ್ಸ್‌ ಅನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್‌.ಎಲ್ ಜನಾರ್ಧನ ಅವರು ಚಾಲನೆ ನೀಡಿದರು. 


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಕೆವಿಕೆ ಸಂಸ್ಥೆ ಸಹಯೋಗದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದರು. 

ಬಳ್ಳಾರಿ ನಗರ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಿಗೆ ಹಾಗೂ ಹತ್ತಿರದ ಗ್ರಾಮಗಳಿಗೂ ಸಹ ಸಹಕಾರಿಯಾಗುವ ಆಂಬ್ಯುಲೇನ್ಸ್‌ನಲ್ಲಿ ತೀವ್ರ ರೀತಿಯ ಉಸಿರಾಟದ ತೊಂದರೆ ಇರುವ ಅಥವಾ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯಕವಾಗಲು ವೆಂಟಿಲೇಟರ್ ವ್ಯವಸ್ಥೆ ಇದೆ ಮತ್ತು ಹೃದಯ ಸಂಬಂಧಿ ಕಾಯಿಲೆ ಇದ್ದಲ್ಲಿ ಡಿಫಿಬೀಲೇಟರ್ ಹಾಗೂ ಇ.ಸಿ.ಜಿ ಯಂತ್ರವಿದ್ದು ತರಬೇತಿ ಪಡೆದ ಶೂಶ್ರುಷಕ ಅಧಿಕಾರಿಗಳು ಇರುವುದರಿಂದ ಆಂಬ್ಯುಲೇನ್ಸ್‌ ವಾಹನದ ಸೌಲಭ್ಯವನ್ನು ಎಲ್ಲಾ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಅವರು ಸೂಚಿಸಿದರು. 

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್‌.ಬಸರೆಡ್ಡಿ ಮಾತನಾಡಿ ಅಪಘಾತಕ್ಕೊಳಗಾದವರು, ಬೆಂಕಿ ಅವಘಡಗಳಿದವರು ಹಾಗೂ ಹೆರಿಗೆಗಾಗಿ ತುರ್ತಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ವಾಹನವು ತುಂಬಾ ಸಹಕಾರಿಯಾಗಿದೆ. ಅಗತ್ಯವುಳ್ಳವರಿಗೆ ಪ್ರಾಥಮಿಕ ಚಿಕಿತ್ಸೆಯ ಜೋತೆಗೆ ಐಸಿಯು ಘಟಕದಲ್ಲಿ ಒದಗಿಸಬಹುದಾದ ಸೌಲಭ್ಯವನ್ನು ಅಂಬ್ಯುಲೇನ್ಸ್‌ನಲ್ಲಿ ಒದಗಿಸಬಹುದಾಗಿದೆ. ಹಾಗೆಯೇ ಹೆಚ್ಚಿನ ಚಿಕಿತ್ಸೆಗೆ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ  (ಓಪಿಡಿ)ಗೆ ಹಾಗೂ ಜಿಲ್ಲಾ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಬರಲು ಮತ್ತು ವ್ಯಕ್ತಿಯ ಜೀವ ಉಳಿಸಲು ಆಂಬ್ಯುಲೇನ್ಸ್‌ ವಾಹನವು ಸಹಾಯಕವಾಗಿದೆ ಎಂದು ತಿಳಿಸಿದರು. 


ಈ ಸಂದರ್ಭದಲ್ಲಿ ಎನ್‌ಎಮ್‌ಡಿಸಿಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಜೋಯಿಸ್ ಥಾಮಸ್, ಜಿಕೆವಿಕೆ ವಿಭಾಗೀಯ ವ್ಯವಸ್ಥಾಪಕ ಸದಾನಂದ ಬಜಾರ್‌ಮನಿ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಆರ್ ಅನೀಲ್‌ಕುಮಾರ, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್‌.ದಾಸಪ್ಪನವರ, ಸೇವಾ ಅಭಿಯಂತರ ವಿಜಯ್‌ಕುಮಾರ್ ಪಿ, ಜಿ.ಕೆ.ವಿ.ಕೆ ಜಿಲ್ಲಾ ವ್ಯವಸ್ಥಾಪಕರ ವಿನಯ್‌ಕುಮಾರ್, ಜಿಲ್ಲಾ ಸಂಯೋಜಕ ನವೀನ್ ಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ಹಾಗೂ 108 ವಾಹನದ ಸಿಬ್ಬಂದಿ ವರ್ಗದವರು ಇದ್ದರು. 


ಸುದ್ದಿ ಓದಿ