ಸಾರ್ವಜನಿಕರಿಗೆ ತುರ್ತು ಸೇವೆ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿ
ತುರ್ತು ಪ್ರಗತಿ ಪರಿಶಿಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಿ ಎಸ್ ನಾಡಗೌಡ ಕರೆ
ಮುದ್ದೇಬಿಹಾಳ 28: ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಸರಕಾರಿ ಕಚೇರಿಗಳಲ್ಲಿ ಆಯಾ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರು ಕಚೇರಿಗಳಿಗೆ ಪದೇ ಪದೆ ಅಲೆದಾಡಿಸದೆ ತುರ್ತು ಸೇವೆ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಎಚ್ಚರಿಕೆ ನೀಡಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಮಿನಿ ವಿಧಾನ ಸೌಧದಲ್ಲಿರುವ ತಹಶಿಲ್ದಾರ ಕಚೇರಿಯಲ್ಲಿ ಮಂಗಳವಾರ ತಾಲೂಕಾ ಮಟ್ಟದ ವಿವಿಧ ಅಧಿಕಾರಿಗಳ ತುರ್ತು ಪ್ರಗತಿ ಪರಿಶಿಲನಾ ಸಭೆ ನಡೆಸಿ ಮಾತನಾಡಿದ ಅವರು. ಪಟ್ಟಣದಲ್ಲಿ ಕ್ರೈಂ ಅಪರಾಧಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಉದ್ದೇಶ ಪೂರ್ವಕವಾಗಿ ವಿನಾಕಾರಣ ಸರಕಾರಿ ಕೆಲಸಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂಬುದನ್ನು ಮನೋಲಿಸಿ ತೊಂದರೆಯಾಗದಂತೆ ಜಾಗೃತಿ ವಹಿಸಿ ನಿಜವಾಗಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯಕೊಡಿಸುವಲ್ಲಿ ಪೋಲಿಸ್ ಇಲಾಖೆ ಪ್ರಾಮಾಣಿಕ ಪ್ರಯತ್ನಿಸಬೇಕು ಎಂದು ಪಿಎಸೈ ಸಂಜಯ ತಿಪ್ಪಾರೆಡ್ಡಿಯವರಿಗೆ ಸಲಹೆ ನೀಡಿದರು.
ರಸ್ತೆಗೆ ಹೊಂದಿಕೊಂಡು ಗಿಡಗಳನ್ನು ನಡದೇ ರಸ್ತೆಗಿಂತ ಸ್ವಲ್ಪ ದೂರದ ಸ್ಥಳಗಳಲ್ಲಿ ಗಿಡಗಳನ್ನು ಬೆಳೆಸಿದರೇ ಮುಂದೆ ಪುನಃ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಗಿಡಗಳನ್ನು ಕಡೆದು ಹಾಕುವ ಪ್ರಶ್ನೇಯೇ ಬರೋದಿಲ್ಲ ಜೊತೆಗೆ ರಸ್ತೆ ಪಕ್ಕದಲ್ಲಿ ಪಟ್ಟಣ ಸೇರಿದಂತೆ ಇತರೇ ಗ್ರಾಮಗಳಿಗೆ, ವಾರ್ಡುಗಳ ಬಡಾವಣೆಗಳ ಜನರಿಗೆ ಕುಡಿಯುವ ನೀರು ಪೂರೈಕೆಯ ಪೈಪ್ಲಾಯಿನ್ ಗಳನ್ನು ಕೂಡ ಅಳವಡಿಸಿಸುತ್ತಾರೆ ಅವುಗಳಿಗೂ ಸಹ ಯಾವೂದೇ ತೊಂದರೆಯಾಗದಂತೆ ನೋಡಿಕೊಂಡಂತಾಗುತ್ತದೆ ತಾಲೂಕಾ ಅರಣ್ಯಾಧಿಕಾರಿ ಗಿರಿಶ ಹಲಕುಡೆ ಅವರಿಗೆ ಸೂಚಿಸಿದರು.
ಪಟ್ಟಣ ಹಾಗೂ ಎಲ್ಲ ಗ್ರಾಮಗಳಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಜೊತೆಗೆ ಸಧ್ಯ ಎಲ್ಲಡೆ ಉತ್ತಮ ಮಳೆಯಾಗಿದ್ದರಿಂದ ನದಿಯಲ್ಲಿ ಹೋಸ ನೀರು ಹರಿಯುತ್ತಿರುವುದರಿಂದ ಕಾಯಿಸಿ ಆರಿಸಿ ನೀರನ್ನು ಕುಡಿಯಲು ಜನರಿಗೆ ತಿಳಿಸಬೇಕು. ಜೊತೆಗೆ ಮತಕ್ಷೇತ್ರದ ಎಲ್ಲಡೆ ಈ ಗಾಗಲೇ ಕೈಗೊಂಡಿರುವ ಜಲಜೀವನ ಮಶಿನ್ ಯೋಜನೆಯಡಿಯಲ್ಲಿ, ಜೆಜೆಎಂ ಕಾಮಗಾರಿ ಸರಿಯಾಗು ಗುಣಮಟ್ಟದಿಂದ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ಹಿರೇಗೌಡರವರಿಗೆ ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಉತಾರ,(ಪಹಣಿ ಪತ್ರ) ಹಾತ್ ನಕಾಶೆ ಸೇರಿದಂತೆ ಇತರೇ ಅಗತ್ಯ ಸರಕಾರಿ ಸೇವೆಗಳು ತ್ವರಿತಗತಿಯಲ್ಲಿ ದೊರಕುವಂತೆ ನೋಡಿಕೊಳ್ಳಬೇಕು ಜೊತೆಗೆ ಸಧ್ಯ ಈಗೀರು ಮಿನಿ ವಿಧಾನ ಸೌಧ ಕಟ್ಟಡವೂ ಮಳೆ ಬಂದಾಗ ಸೋರುವುದು ಮಾತ್ರವಲ್ಲದೇ ಕೆಲವು ಕೋಠಡಿಗಳ ಗೋಡೆಗಳು ಬಿರುಕುಬಿಟ್ಟು ಅಪಾಯದ ಸ್ಥಿತಿಯಲ್ಲಿವೇ ಎಂಬುದು ಮಾಹಿತಿ ತಿಳಿದುಬಂದಿದೆ ಕಾರಣ ಮಿನಿ ವಿಧಾನ ಸೌಧ ದುರಸ್ಥಿಗೊಳಿಸಲು ಅಂದಾಜು ವೆಚ್ಚದ ಕ್ರೀಯಾಯೋಜನೆ ಸಿದ್ಧಪಡಿಸಿ ಕೊಟ್ಟರೇ ಸರಕಾರದಿಂದ ವಿಶೇಷ ಹಣ ಬಿಡುಗಡೆ ಮಾಡಿಸಿಕೊಂಡು ಅಭಿವೃದ್ಧಿ ಪಡಿಸುವುದಾಗಿ ತಹಶಿಲ್ದಾರ ಬವಲರಾಮ ಕಟ್ಟಿಮನಿಯವರಿಗೆ ಮಾಹಿತಿ ನೀಡಿದರಲ್ಲದೇ ಎಲ್ಲೇಲ್ಲಿ ಸರಕಾರಿ ಜಾಗೆಗಳಿವೆ ಅವುಗಳ ರಕ್ಷಣೆಗೆ ಕಂದಾಯ ಇಲಾಖೆ ಮುಂದಾಗಬೇಕು ಎಂದರು.
ತಾಲೂಕಿನಲ್ಲಿನ ಮಳೆಯಾಗಿ ಹದಗೆಟ್ಟ ರಸ್ತೆಗಳ ದುರಸ್ಥಿ ಮಾಡುವ ಮೂಲಕ ಆಯಾ ಗ್ರಾಮಗಳ ಜನರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಅದಕ್ಕೆ ಸರಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಇಇ ಸಂಗಮೇಶ ಶಿವನಗುತ್ತಿ ಅವರಿಗೆ ತಿಳಿಸಿದರು.
ತಹಶಿಲ್ದಾರ ಬಲರಾಮ ಕಟ್ಟಿಮನಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಎಸ್ ಮಸಳಿ, ಜಿವಿಕೆಆರ್ ಕಂಪನಿಯ ಮೇಲ್ವಿಚಾರಕ ಬಾಲಕೃಷ್ಣ, ಎ ಎಸೈ ಸಿ ಜಿ ಕುಲಕರ್ಣಿ ಸೇರಿದಂತೆ ಹಲವರು ಇದ್ದರು.