ಗಳಿಕೆಯ ಹಣದಲ್ಲಿ ಸೇವಾ ಕಾರ್ಯದಿಂದ ಸದ್ಬಳಕೆ ಮಾಡಿಕೊಳ್ಳಿ : ಡಾ.ಅನ್ನದಾನೀಶ್ವರಶ್ರೀ
ಪತ್ರಕರ್ತ ಅರಸನಾಳರಿಗೆ ಜಗದ್ಗುರು ಅನ್ನದಾನೀಶ್ವರ ಮಾಧ್ಯಮ ಪ್ರಶಸ್ತಿ
ಮುಂಡರಗಿ 19: ಪತ್ರಕರ್ತರು ಸಾಮಾಜ ಭಾಗವಾಗಿ ಸದಾ ನಾಡಿದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮಾಜ ಸೇವೆ ಮಾಡುವಲ್ಲಿ ನಿರತರಾಗಿರುತ್ತಾರೆ. ಈ ನಿಟ್ಟಿನಲ್ಲಿ ಮುಂಡರಗಿ ಪತ್ರಕರ್ತರು ನಿಷ್ಠೆಯಿಂದ ಪತ್ರಿಕೆಯ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿ ವರ್ಷ ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರೊಬ್ಬರಿಗೆ ್ರ್ರಥಮಬಾರಿಗೆ 10ಸಾವಿರ ನಗದು ಹಾಗೂ ಜಗದ್ಗರು ಅನ್ನದಾನೀಶ್ವರ ಮಾಧ್ಯಮ ಪ್ರಶಸ್ತಿ ಪುರಸ್ಕಾರ ನೀಡಲಾಗುತ್ತಿದೆ. ಪ್ರಸ್ತುತ ವರ್ಷ ಹಿರಿಯ ಪತ್ರಕರ್ತ ಸಿ.ಎಸ್.ಅರಸನಾಳ ಅವರಿಗೆ ಶ್ರೀಮಠದಿಂದ ಪುರಸ್ಕಾರ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಗಳವರು ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ಕ.ರಾ.ಬೆಲ್ಲದ ಪದವಿ ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮುಂಡರಗಿ ತಾಲೂಕು ಘಟಕದಿಂದ ಹಮ್ಮಿಕೊಂಡಿರುವ ಪತ್ರಿಕಾ ದಿನಾಚರಣೆ ಹಾಗೂ ಶ್ರೀ ಜಗದ್ಗುರು ಅನ್ನದಾನೀಶ್ವರ ಮಾಧ್ಯಮ ಪ್ರಶಸ್ತಿ ಪುರಸ್ಕಾರ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ನಾವು ಗಳಿಸುವ ಆಸ್ತಿ, ಅಂತಸ್ತು, ಧನ, ಕನಕಗಳು ಸದ್ಬಳಕೆಯಾಗಬೇಕೆಂಬ ಸದುದ್ದೇಶದಿಂದ ಜಗದ್ಗುರು ಅನ್ನದಾನೀಶ್ವರ ಮಠದಿಂದ ಪ್ರತಿ ವರ್ಷ ತಾಲ್ಲೂಕಿನ ನೂರಾರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಪ್ರಸ್ತುತ ವರ್ಷದಿಂದ ಪತ್ರಕರ್ತರಿಗೆ, ಶಿಕ್ಷಕರಿಗೆ, ಸೈನಿಕರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಅನ್ನದಾನೀಶ್ವರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಪ್ರಸ್ತುತ ಸನ್ನಿದಿಯಿಂದ ಮುಂಡರಗಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಒಂದು ಲಕ್ಷ ರೂ.ಗಳನ್ನು ಹಣವನ್ನು ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ 10 ಸಾವಿರ ರೂ. ನಗದು ಹಣವನ್ನು ಹಾಗೂ ಜಗದ್ಗುರು ಅನ್ನದಾನೀಶ್ವರ ಮಾಧ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಸುಶೀಲೇಂದ್ರಾಚಾರ್ಯ ಕುಂದರಗಿ ಮಾತನಾಡಿ, ಪತ್ರಿಕೆಗಳು ಹಾಗೂ ಪತ್ರಕರ್ತರ ನಡುವೆ ಗುಂಪುಗಾರಿಕೆ ಹೆಚ್ಚಾಗಿದ್ದು, ಒಬ್ಬರಿಗೊಬ್ಬರು ಕಾಲೆಳೆಯುವ ಪ್ರವೃತ್ತಿ ಹೆಚ್ಚಾಗಿದೆ. ಹಾಗೂ ಬದುಕಿನ ಸತ್ಯ ಹಾಗೂ ಮೌಲ್ಯಗಳನ್ನು ನಿರ್ಧರಿಸಲು ಪತ್ರಿಕಾ ಮಾಧ್ಯಮ ಗೊಂದಲಮಯವಾಗಿದೆ. ಸಮಾಜಮುಖಿ ಚಿಂತನೆಗಳನ್ನು ಇಟ್ಟುಕೊಂಡು ಮಾಹಿತಿಯನ್ನು ರವಾನಿಸುವ ಜವಾಬ್ದಾರಿ ಪತ್ರಕತ್ರರಿಗೆ ಇರುತ್ತದೆ. ಹಾಗೂ ಮೌಲ್ಯವನ್ನು ಎತ್ತಿ ಹಿಡಿಯುವದರೊಂದಿಗೆ ಮಾನವೀಯತೆ ಮೌಲ್ಯಗಳನ್ನು ಕಂಡುಕೊಳ್ಳುವ ಸಾಮಾಜಿಕ ಸೇವೆಯನ್ನು ಪತ್ರಿಕೆ ಮಾಡುತ್ತಿದೆ. ಆದರೆ ಸಾಮಾಜಿಕ ಮಾಧ್ಯಮ ಜಾಲತಾಣದಲ್ಲಿ ಈ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಯಾವುದನ್ನು ಎಷ್ಟು ಬರೆಯಬೇಕು ಅಷ್ಠೆ ಬರೆಯಬೇಕು. ಹೊರತು ತಮಗೆ ತಿಳಿದ ಹಾಗೆ ಬರೆಯುವದಲ್ಲ. ಹೀಗಾಗಿ ಎಲ್ಲಾ ಪತ್ರಕರ್ತರು ಪ್ರಗತಿಪರ ಹೋರಾಟಗಳ ಪ್ರಸಾರ ಹಾಗೂ ಉತ್ತಮ ಮೌಲ್ಯಗಳನ್ನು ಪತ್ರಿಕೆಯಲ್ಲಿ ಬಿಂಬಿಸಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಘಟಕದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹು.ಬಾ.ವಡ್ಡಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾಗೂ ಜಿಲ್ಲಾ ಘಟಕದ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ರಾಜು ಹೆಬ್ಬಳ್ಳಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ, ಮುಂಡರಗಿ ಮಂಡಲದ ಬಿಜೆಪಿ ಅಧ್ಯಕ್ಷ ಹೇಮಗೀರೀಶ ಹಾವಿನಾಳ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ.ಮೋರನಾಳ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಎಲಿವಾಳ, ಪ್ರಶಸ್ತಿ ಪುರಸ್ಕೃತ ಸಿ.ಎಸ್.ಅರಸನಾಳ ಮಾತನಾಡಿದರು. ಈ ವೇಳೆ ಸುಮಾರು ವರ್ಷಗಳಿಂದ ಪ್ರತಿ ಮನೆಮನೆಗೆ ಪತ್ರಿಕೆಗಳನ್ನು ವಿತರಿಸುತ್ತಿರುವ ಪತ್ರಿಕಾ ವಿತರಕ ಪ್ರಕಾಶ ಅತ್ತರವಾಲ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ತಹಶೀಲ್ದಾರ್ ಧನಂಜಯ ಎಂ, ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ, ಪ್ರಾಚಾರ್ಯ ಡಾ.ಡಿ.ಸಿ.ಮಠದ, ಜಿಲ್ಲಾ ಸಂಘದ ನಾಮನಿರ್ದೇಶಿತ ಸದಸ್ಯ ಶರಣು ಸೊಲಗಿ, ಮಲ್ಲಿಕಾರ್ಜುನಗೌಡ ಪಾಟೀಲ, ಮಂಜುನಾಥ ಜಾಗಟಗೇರಿ ಇತರರು ಇದ್ದರು.
ಸಿ.ಕೆ.ಗಣಪ್ಪನವರ ಸ್ವಾಗತಿಸಿದರು. ಕಾಶೀನಾಥ ಬಿಳಿಮಗ್ಗದ ಪ್ರಸ್ತಾವಿಕವಾಗಿ ಮಾತನಾಡಿದರು. ಸಂತೋಷ ಮುರುಡಿ ನಿರೂಪಿಸಿದರು. ಶಿವು ಹೊಂಬಳಗಟ್ಟಿ ವಂದಿಸಿದರು.