ಗದಗ

ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ


ಶಿರಹಟ್ಟಿ 17:  ಶಿರಹಟ್ಟಿಯಿಂದ ಲಕ್ಷ್ಮೇಶ್ವರಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ವೊಂದು ರಸ್ತೆ ಬಿಟ್ಟು ಪಕ್ಕದ ಹೊಲಕ್ಕೆ ನುಗ್ಗಿದ ಘಟನೆ ಗುರುವಾರ ನಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದ್ದು, ಬಸ್ನಲ್ಲಿದ್ದ 90 ಪ್ರಯಾಣಿಕರಿಗೆ  ಯಾವುದೇ  ಗಾಯಗಳಾಗಿಲ್ಲ ಎಂದು ್ತ್ಛ್ತಿ್ದುೈದ್ತಿ್ಪ್ಞ್ತ್ಘ್ಡುಳ್ಲಿಳ್ತಿಹಿ ಮಾಗಡಿ ಮಾರ್ಗದಲ್ಲಿ ಬಸ್ ಸಂಚರಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣದಲ್ಲಿದ್ದ ಬಸ್ ಮುಂದೆ ದನಗಳು ಏಕಾಏಕಿ ರಸ್ತೆಯಲ್ಲಿ ಬಂದ ಕಾರಣ ಪರಿಸ್ಥಿತಿಯನ್ನು ಅರಿತ ಚಾಲಕ ತಕ್ಷಣವೇ ಸಮಯ ಪ್ರಜ್ಞೆಯಿಂದ ಬಸ್ನ್ನು ನಿಯಂತ್ರಿಸಲು ಪ್ರಯತ್ನಿಸಿದ್ದರಿಂದ ಬಸ್ನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.ಘಟನೆಯಿಂದ ಕೆಲಕಾಲ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಾಯ ಸಂಭವಿಸಿಲ್ಲ. ಎಂದು ತಿಳಿದು ಬಂದಿದೆನಂತರ ನಮ್ಮೊಂದಿಗೆ ಮಾತನಾಡಿದ ಸಾರ್ವಜನಿಕರು ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ರಸ್ತೆಯಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು  ಒತ್ತಾಯಿಸಿದ್ದಾರೆ. 


ಸುದ್ದಿ ಓದಿ