ಬಾಳು ಮತ್ತು ಬಾಳಲೂ ಬಿಡು ಎಂಬ ಸಂದೇಶ ಸಾರಿದ ಮಹಾವೀರರು
ಸಮಸ್ತ ಪೃಥ್ವಿಯೊಳಗೆ ವಿಶೇಷವಾಗಿ ಭಾರತೀಯರ ಇತಿಹಾಸದಲ್ಲಿಯೇ ಸುಮಾರು ಎರೆಡು ಸಾವಿರದ ಐನೂರು ವರ್ಷಗಳ ಕಾಲದಿಂದ ಇಂದಿನ ವರೆಗೂ ಜೈನ ಧರ್ಮದ ಅಧ್ಯಯನ ದಲ್ಲಿ ಮಾತ್ರ ನಮಗೆ ಗೋಚರಿಸುವ ಸಂಪೂರ್ಣ ನಿಖರವಾದ ಸಾರವೆಂದರೆ, ಇಡೀಯ ವಿಶ್ವ ಮನು ಸಮೂಹವೇ ಸ್ವಯಂ ಪ್ರೇರಣೆಯ ಇಚ್ಛಾ ಶಕ್ತಿಯಿಂದ ಈ ಧರ್ಮದಲ್ಲಿ ಅಡಗಿರುವಂತಹ ತತ್ವ ಸಿದ್ಧಾಂತಗಳನ್ನು ಸಹಜವಾಗಿಯೇ ಒಪ್ಪಿಕೊಳ್ಳುವಷ್ಟರ ಮಟ್ಟಿಗೆ ಮೌಲ್ಯವರ್ಧಿತವಾಗಿದೆ.
ಈ ಸೃಷ್ಟಿಯ ಜೀವ ಸಂಕುಲದ ಎಂಬತ್ನಾಲ್ಕು ಲಕ್ಷ ಜೀವರಾಶಿಯ ಪ್ರತಿಯೊಂದು ಜೀವಾತ್ಮದಲ್ಲಿಯೂ ಅಡಗಿರುವ ದಯಾಗುಣದ ಸಕಾರಾತ್ಮಕ ಚಿಂತನೆಗಳ ಸ್ವಭಾವದಿಂದ ಪ್ರತಿಯೊಂದು ಜೀವಾತ್ಮಕ್ಕೂ ಪರಮಾತ್ಮನ ಪ್ರವಭಾವದ ಅಮೂಲ್ಯವಾದ ಅನುಕರಣೆಯ ಅತ್ಮಾನಂದವನ್ನು ಪಡೆಯಬಹುದಾಗಿದ್ದು, ನಮ್ಮ ದೈನಂದಿನ ಸಾಮಾಜಿಕ ಬದುಕಿನ ಪರಸ್ಪರ ವ್ಯವಸ್ಥೆಯಲ್ಲಿ ದಯೆವೇ ಧರ್ಮದ ಮೂಲ ಎಂಬರ್ಥವು ನಮಗೆ ಈ ಜೈನ ಧರ್ಮದ ಸಿದ್ಧಾಂತಗಳಲ್ಲಿ ಸಕಾರಾತ್ಮಕವಾಗಿ ಮನವರಿಕೆಯಾಗುತ್ತದೆ. ಇಂದಿನ ಜಗತ್ತಿನಲ್ಲಿರುವ ಅಸಂಖ್ಯಾತ ವಿವಿಧ ಪ್ರಕಾರದ ಧರ್ಮಗಳ ಸಂಕ್ರಮಣದಲ್ಲಿಯೂ ಈ ಜೈನ ಧರ್ಮವನ್ನು ಹತ್ತು ಹಲವಾರು ವಿಶ್ವವಿದ್ಯಾಲಯಗಳಲ್ಲಿ ತರ್ಕಬದ್ಧವಾಗಿ ಅಧ್ಯಯನದ ಮಾಧ್ಯಮವಾಗಿ ಅಳವಡಿಸಲಾಗಿದ್ದರಿಂದ ಇದೊಂದು ವಿಶ್ವದ ಶ್ರೇಷ್ಠ ಧರ್ಮಗಳಲ್ಲಿಯೇ ಅಗ್ರ ಸ್ಥಾನವನ್ನು ಅಲಂಕರಿಸಿದೆ.
ಇತಿಹಾಸದ ಕ್ರಿಸ್ಥ ಪೂರ್ವ ಕಾಲದ ಒಂದು ಸಮಯದಲ್ಲಿ ಇಡೀಯ ವಿಶ್ವದಲ್ಲೆಡೆ ಬಹುಪಾಲು ಮನುಕುಲದ ಸಾಮಾಜಿಕ ವ್ಯವಸ್ಥೆಯಲ್ಲಿ ತನ್ನದೇ ಆದ ವಿಶಿಷ್ಟ ಧಾರ್ಮಿಕ ವೃತಾಚರಣೆಯ ಜೀವನ ಶೈಲಿಯೊಂದಿಗೆ ಉತ್ತುಂಗ ಸ್ಥಿತಿಯಲ್ಲಿ ಮೆರೆದು ಅಪಾರ ಅನುಯಾಯಿಗಳನ್ನು ಹೊಂದಿದ್ದ, ಈ ಜೈನ ಧರ್ಮವು ಕಾಲಾನಂತರ ಹಂತ ಹಂತವಾಗಿ ಹಲವಾರು ವಿದೇಶಿ ಕ್ರೂರ ಮತಾಂಧ ಸಮ್ರಾಜ್ಯ ಶಾಹೀ ದಾಳಿಕೋರರ ಹಾಗೂ ಸ್ಥಾನೀಯ ಅನ್ಯ ಧರ್ಮಿಯರಿಂದಾದ ನಿರಂತರ ದೌರ್ಜನ್ಯಮಯ ದುಷ್ಟ ಕೃತ್ಯಗಳಿಂದ ದಿನೇ ದಿನೇ ತೀವ್ರ ಕ್ಷೀಣತೆಯತ್ತ ಸವೆಯುತ್ತಾ ಇಂದಿನ ಪ್ರಚಲಿತ ಸಮಯಕ್ಕೆ ಭಾರತ ದೇಶ ಸೇರಿ ಇಡೀಯ ವಿಶ್ವದ ಜನಸಂಖ್ಯೆಯಲ್ಲಿಯೇ ಕೇವಲ ಶೇಕಡಾ ಮೂರು ಪ್ರತಿಶತಕ್ಕಿಂತಲೂ ಕಡಿಮೆ ಪ್ರಮಾಣಕ್ಕೆ ಬಂದಿಳಿದಿದ್ದು, ಈ ಸಮುದಾಯಕ್ಕೇ ತೀವ್ರ ಆಘಾತಕಾರಿ ದುಃಖದ ಸಂಗತಿಯಾಗಿದೆ.
ಈ ಧರ್ಮದಲ್ಲಿರುವ ಕರ್ಮ ಸಿದ್ಧಾಂತಗಳ ಮಾರ್ಗ ದರ್ಶನಗಳನ್ನು ಸುಕ್ಷ-್ಮವಾಗಿ ಅವಲೋಕಿಸುತ್ತ ಬದುಕಿನಲ್ಲಿ ಅಳವಡಿಸಿದಾಗ ನಮಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿಯೂ ಸೃಷ್ಟಿಯ ಯಾವುದೇ ಜೀವರಾಶಿಯೊಂದಿಗೆ ಒಟ್ಟಾರೆ ಹಿಂಸೆಯ ಪ್ರಯೋಗವಿಲ್ಲದೇ ಯಾವುದೇ ಯುದ್ಧವನ್ನು ಮಾಡದೇ ಇಡೀಯ ಲೋಕವನ್ನೇ ಜಯಿಸಿದರೂ ಕೂಡ, ಕೇವಲ ಅಹಿಂಸೆ, ಅಪರಿರ್ಗಹ, ಹಾಗೂ ಅನೇಕಾಂತದ ತತ್ವಗಳೊಂದಿಗೆ ಅಚ್ಚುಕಟ್ಟಾದ ಸರಳ ಭಾಷೆಯ ಜೀವನ ಶೈಲಿಯು ಕೇವಲ ಸೀಮಿತ ಸಾಮಾಜಿಕ ವ್ಯವಸ್ಥೆಗೆ ಮಾತ್ರವಲ್ಲದೇ ಸಮಗ್ರ ವಿಶ್ವ ಮನುಕುಲಕ್ಕೇ ಗೋಚರಿಸುತ್ತದೆ.
ಜೈನ ಧರ್ಮದಲ್ಲಿ ಒಟ್ಟಾರೆ ಇಪ್ಪತ್ನಾಲ್ಕು ತೀರ್ಥಂಕರರನ್ನು ಅತ್ಯಗ್ರ ಶ್ರೇಣಿಯಲ್ಲಿ ಪೂಜಿಸಲಾಗುತ್ತದೆ. ಇವರೆಲ್ಲರೂ ಸಾಮಾನ್ಯ ಮನುಕುಲದಲ್ಲಿಯೇ ಜನ್ಮತಾಳಿಯೂ ಅತೀ ವಿರಳ, ವಿಶಿಷ್ಟ ಹಾಗೂ ಧೀರ್ಘವಾದ ಸ್ವಯಂ ಆತ್ಮ ಸಾಧನೆಯ ತಪಷ್ಚರ್ಯದಿಂದ ಸಮಗ್ರ ಪೃಥ್ವಿಯಲ್ಲಿ ಅಡಗಿರುವ ಪಂಚಭೂತ ಗಳೊಂದಿಗೆ ಸೂಕ್ಷಾ-್ಮತಿ ಸೂಕ್ಷ-್ಮದಿಂದ ಧೀರ್ಘಾತಿ ಧೀರ್ಘ ಸ್ಥಿತಿಗತಿಯ ಚಲನಾ ವಲನೆಯಲ್ಲಿರುವ ಚರಾಚರ ಜೀವರಾಶಿಯ ಭೂತ, ವರ್ತಮಾನ ಹಾಗೂ ಭವಿಷ್ಯದ ಆಗು ಹೋಗುಗಳ ಅಘಾಧ ಜ್ಞಾನೋದಯದ ಬಳುವಳಿಯನ್ನು ಹೊಂದಿರುತ್ತಾರೆ.
ಇಂತಹ ತ್ರಿಕಾಲ ಜ್ಞಾನಿ ಗಳಾದ ತೀರ್ಥಂಕರರ ದೈವೀಯ ಶಕ್ತಿಯ ಪ್ರಭಾವದಿಂದಲೇ ನಮ್ಮವಿಶಾಲ ಮನುಕುಲಕ್ಕೆ ಇಂದಿಗೂ ಶಾಂತಿ ಮತ್ತು ಆಹಿಂಸೆಯ ಸತ್ಯ ಸಾರವುಳ್ಳ ಸಹಜ ಮತ್ತು ಸರಳವಾದ ಮಾರ್ಗದರ್ಶನವನ್ನು ನೀಡಿರುವಂತಹ ಈ ಮಹಾನ್ ಮೇಧಾವಿ ಪುರುಷೋತ್ತಮ, ಇಪ್ಪಾತನಾಲ್ಕನೇಯ ತೀರ್ಥಂಕರ ಆಗಿರುವ ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಮಾರ್ಗದರ್ಶನವು ಇಡೀಯ ಜಗತ್ತಿಗೆ ಶಾಂತಿಯ ಮತ್ತು ಅಹಿಂಸೆಯ ಸಂದೇಶವನ್ನು ತಿಳಿಸುತ್ತದೆ..
ಈ ಧರ್ಮದಲ್ಲಿ ಅಡಗಿರುವ ಅತ್ಯದ್ಭುತವಾದ ಶಕ್ತಿಯನ್ನು ಸಾರಿದ ಭಗವಾನ್ ಶ್ರೀಮಹಾವೀರಸ್ವಾಮಿಯ ಸ್ಮರಣೆಯ ಜನ್ಮ ಕಲ್ಯಾಣೋತ್ಸವ ದೇಶದಾದ್ಯಂತ ಆಚರಿಸಲಾಗುತ್ತಿದ್ದು, ನಮ್ಮ ಭಾರತೀಯ ಸನಾತನ ಪಂಚಾಂಗದ ಪ್ರಕಾರ ನಮ್ಮೆಲ್ಲರಿಗೆ ಪ್ರತಿ ವರ್ಷಕ್ಕೊಮ್ಮೆ ಚೈತ್ರ ಶುಕ್ಲ ತ್ರಯೋದಶಿಯ ಈ ಸುದಿನವು ಹೊಸ ಹರ್ಷಭರಿತ, ಉತ್ಸಾಹ, ಉಲ್ಲಾಸಗಳೊಂದಿಗೆ ಎಲ್ಲಿಲ್ಲದ ಸಂಭ್ರಮ ಸಡಗರವನ್ನು ಅನುಭವಿಸುವ ಸುವರ್ಣಾವಕಾಶದ್ದಾಗಿದೆ.
ಬನ್ನಿ ನಾವೆಲ್ಲಾ ಇಂತಹ ಮಹಾನ್ ಪುರುಷೋತ್ತಮನ ನಾಮ ಸ್ಮರಣೆಯ ಪ್ರತೀಕವಾಗಿ ಕೋಟಿ-ಕೋಟಿ ಅಭಿನಂದನಾರೆ್ಣಯ ವಂದನೆಗಳನ್ನು ಸಲ್ಲಿಸುತ್ತಾ ಈ ಸಂದರ್ಭದಲ್ಲಿ ಪರಮಾತ್ಮನೊಂದಿಗೆ ವಿಶಾಲ, ನಿಷ್ಪಕ್ಷ ಮತ್ತು ನಿರ್ಮಲವಾದ ಭಕ್ತಿಯ ಸದೃಡತೆಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತ ನಮ್ಮೆಲ್ಲರ ಮನೆಯ ಪ್ರಾಂಗಣಗಳಲ್ಲಿ ಶುದ್ಧ ಶೃದ್ಧಾ ಭಕ್ತಿಯೊಂದಿಗೆ ಸದೈವ ಜ್ಞಾನೋದಯದ ಪ್ರತೀಕವಾಗಿ ಒಂದೊಂದು ಬೆಳಕಿನ ದೀಪವನ್ನು ಪ್ರಜ್ವಲಿಸಿ ಜೈನ ಧರ್ಮದ ಈ ಮೂಲ ಧ್ಯೇಯ ವಾಖ್ಯೆಯಾದ ಬಾಳು ಮತ್ತು ಬಾಳಲೂ ಬಿಡು ಇಂತಹ ಅರ್ಥ ಗರ್ಭಿತವಾದ ಜನಹಿತ ಸಂದೇಶವನ್ನು ಸಾಕಾರಗೊಳಿಸುತ್ತ ಮಹಾವೀರ ಜಯಂತಿಯನ್ನು ಆಚರಿಸೋಣ.
- ಶ್ರೇಣಿಕ ಕುಮಾರ್ ಜೈನ್
ಕೊಪ್ಪಳ
- * * * -