ಜಗತ್ತಿಗೆ ಶಾಂತಿ ಬೋಧಿಸಿದ ಧರ್ಮವೇ ಜೈನಧರ್ಮ: ಡಾ. ರಮೇಶ
ಬಳ್ಳಾರಿ 25: ಮಹಾವೀರರು ಇಡೀ ದೇಶಕ್ಕೆ ನೀಡಿದ ಕೊಡುಗೆಯ ವಿವರವನ್ನು ಜೈನ ಪುರಾಣದಲ್ಲಿ ಬರುವ ಗ್ರಂಥಗಳಲ್ಲಿ ವಿವರಿಸಲಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಡಾ. ಸ.ಚಿ.ರಮೇಶ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಗಣಕ ಕೇಂದ್ರದಲ್ಲಿ ಅಭೇರಾಜ್ ಬಲ್ಡೋಟ ಜೈನ ಅಧ್ಯಯನ ಪೀಠದ ವತಿಯಿಂದ ಮಹಾವೀರರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಆನ್ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದುವರೆದು ಮಾತನಾಡುತ್ತ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹಾವೀರ ಅವರ ಕೊಡುಗೆ ಅಪಾರವಾದದು. ಮಹಾವೀರ ಅವರ ಜೀವನವನ್ನು ನೋಡಿದಾಗ ಅವರು ಪಟ್ಟ ಕಷ್ಟ, ಅಪಮಾನ, ಅವಮಾನ ಹಾಗೂ ಆ ಕಾಲದ ಜಿಡ್ಡುಗಟ್ಟಿದ ವ್ಯವಸ್ಥೆ, ಒಂದು ಸುಂದರ ಸಮಾಜದ ನಿರ್ಮಾಣಕ್ಕಾಗಿ ಮಹಾವೀರರು ಎಷ್ಟು ಕಷ್ಟಪಟ್ಟರೆಂಬುದು ತಿಳಿಯುತ್ತದೆ. ಕುವೆಂಪು ಅವರ ವಿಚಾರಧಾರೆಯಂತೆ ಜಾತಿ-ಮತಗಳ ಜಗಳ ಬಿಟ್ಟು ವಿಶ್ವಮಾನವರಾಗಿ ಬದುಕುವುದನ್ನು ಕಲಿಯಬೇಕು. ಮಾನವ ಸಂಬಂಧಗಳನ್ನು ಬೆಸೆಯುವುದು ಮುಖ್ಯ ಎಂದು ತಿಳಿಸಿದರು. ಈ ನಾಡನ್ನು ಭವ್ಯವಾಗಿ ಕಟ್ಟಬೇಕು. ಹಿಂಸೆಯನ್ನು ಬಿಡಬೇಕು, ಮನುಷ್ಯರಂತೆ ಪ್ರಾಣಿಗಳನ್ನು ಕಾಣಬೇಕು. ಹಿಂಸೆಯನ್ನು ತ್ಯಜಿಸಬೇಕು, ಪ್ರಕೃತಿಯನ್ನು ಉಳಿಸಬೇಕು ಆ ಮೂಲಕ ಮನುಷ್ಯ ಆರೋಗ್ಯಪೂರ್ಣವಾಗಿರಲು ಸಾಧ್ಯ. ಅರಿಷಡ್ವರ್ಗಗಳನ್ನು ಯಾರು ತ್ಯಜಿಸುತ್ತಾರೆ. ಅವನು ಆರೋಗ್ಯಪೂರ್ಣನಾಗಿರುತ್ತಾನೆ. ಎಲ್ಲಿ ಮಹಿಳೆಯರಿಗೆ ಗೌರವ ಇರುತ್ತದೆಯೋ ಅಲ್ಲಿ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದು ಮಹಾವೀರರು ನಂಬಿದ್ದರು. ಅದೇ ರೀತಿ ಈ ನಾಡನ್ನು ಭವ್ಯವಾಗಿ ಕಟ್ಟಬೇಕಾದರೆ ವಿದ್ಯಾರ್ಥಿಗಳನ್ನು ಸಮಗ್ರವಾಗಿ ಬೆಳೆಸುವ ಕೆಲಸವನ್ನು ಅಧ್ಯಾಪಕರು ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಹಾವೀರನ ಆಲೋಚನೆಗಳನ್ನು, ತತ್ವಗಳನ್ನು, ಸಿದ್ಧಾಂತಗಳನ್ನು ಎಲ್ಲಾ ಜನರಿಗೆ ಪುಸ್ತಕದ ರೂಪದಲ್ಲಿ ತಲುಪಿಸಬೇಕಾದ ಕೆಲಸ ವಿಶ್ವವಿದ್ಯಾಲಯದ ಮೇಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಹಾವೀರನ ಅಹಿಂಸಾಹಿವಾದವೇ ಗಾಂಧೀಜಿಯವರಿಗೆ ಪ್ರೇರಣೆಯಾಗಿ ಕೊನೆಗೆ ಅಹಿಂಸೆಯಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂಬುದು ತಿಳಿಯುತ್ತದೆ. ಮನುಷ್ಯ ತಾನು ಬದುಕಿ ಇನ್ನೊಬ್ಬರನ್ನು ಬದುಕಿಸುವುದೇ ಧರ್ಮ ಎಂಬುದು ಮಹಾವೀರರ ನಿಲುವಾಗಿತ್ತು.
ಕಾರ್ಯಕ್ರಮವನ್ನು ಆಲ್ಲೈನ್ನಲ್ಲಿ ಉದ್ಘಾಟಿಸಿ ಮಾತನಾಡಿ ನಾಡೋಜ ಡಾ.ಹಂಪ ನಾಗರಾಜಯ್ಯ ಪ್ರಾಕೃತದಲ್ಲಿ ಮಹಾವೀರನನ್ನು ಜ್ಞಾನಿ, ತತ್ವಜ್ಞಾನಿ, ಸರ್ವಜ್ಞ, ಎಲ್ಲವನ್ನು ತಿಳಿದವನು ಎಂದು ಹೇಳಿದರು. ಸರ್ವಜೀವರಾಶಿಗೂ ಧರ್ಮೋಪದೇಶವನ್ನು ಮಾಹಾವೀರರು ಮಾಡಿದರು. ಉತ್ಕೃಷ್ಠವಾದ ಅಂಶಗಳನ್ನು ಉಪದೇಶಿಸಿದವರು ಮಹಾವೀರರು. ಜೈನರು ಇಡೀ ಜಗತ್ತಿನಾದ್ಯಂತ ಇಂದು ಜಯಂತಿಯನ್ನು ಆಚರಿಸುತ್ತಿದ್ದಾರೆ. ಇಂತಹ ಮಹತ್ವವಾದ ಕಾರ್ಯಕ್ರಮವನ್ನು ಹಂಪಿ ವಿಶ್ವವಿದ್ಯಾಲಯ ಆಯೋಜಿಸಿದೆ. ಈ ಅಧ್ಯಯನ ಪೀಠದ ಕೆಲಸ ಕಾರ್ಯಗಳನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಯಾವಾಗಲೂ ತುಂಬಾ ಅಚ್ಚುಕಟ್ಟಾಗಿ ನಡೆಸುತ್ತಿರುತ್ತಾರೆ. ಹಾಗೂ ಜೈನ ಸಂಪುಟಗಳನ್ನು ಹೊರ ತರುತ್ತಿರುವುದು ಅವರ ದಕ್ಷ ಆಡಳಿತಕ್ಕೆ ಸಾಕ್ಷಿಯಾಗಿದೆ ಅವರ ಕಾಳಜಿಗೆ ಅಭಿನಂದನೆಗಳು ಎಂದು ಈ ಸಂದರ್ಭದಲ್ಲಿ ಹೇಳಿದರು.
ಆನ್ಲೈನ್ ವಿಶೇಷ ಉಪನ್ಯಾಸ ನೀಡಿದ ಲೇಖಕಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು ಕನ್ನಡ ಸಲಹಾ ಸಮಿತಿ, ನವದೆಹಲಿ ಡಾ.ಪದ್ಮಿನಿ ನಾಗರಾಜ ಅವರು ಜೈನ ಧರ್ಮ ವಿಶ್ವಧರ್ಮ. ಈ ಕಾರ್ಯಕ್ರಮವನ್ನು ಮೆರಗು ನೀಡಿದ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರಿಗೆ ವಂದನೆಗಳು ಎಂದು ಹೇಳಿದರು. ಧರ್ಮ ಎಂದರೆ ಹಿಂಸೆ ಇಲ್ಲದಿರುವುದು. ಅದುವೇ ಜೈನಧರ್ಮ. ಮನುಷ್ಯ ಜಾತಿ ತಾನೊಂದೆ ವಲಂ ಎಂದು ಹೇಳಿರುವಾಗ ಮನುಷ್ಯ ಧರ್ಮದ ಹೆಸರಿನಲ್ಲಿ ಮನುಷ್ಯ ಬೇಡವಾದ್ದನ್ನು ಮಾಡಲು ಹೊರಟಿದ್ದಾನೆ. ಅದರ ಪ್ರತಿಫಲವಾಗಿ ಇಂದು ಜಗತ್ತು ಕೋವಿಡ್-19ನಿಂದ ನಲುಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು. ಇಂದ್ರಿಯಗಳನ್ನು ಗೆದ್ದವನೆ ಜಿನ. ಅದುವೇ ಜೈನಧರ್ಮ. ಗುಣ, ಆಚಾರ, ವಿಚಾರ, ಅಹಿಂಸೆ ಇವುಗಳೇ ಧರ್ಮ ಎಂದು ಹೇಳಿದರು.
ಅಭೇರಾಜ್ ಬಲ್ಡೋಟ ಜೈನ ಅಧ್ಯಯನ ಪೀಠದ ಸಂಚಾಲಕ ಡಾ.ಎಲ್.ಶ್ರೀನಿವಾಸ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ ವಂದನಾರೆ್ಣ ಮಾಡಿದರು. ಈ ಸಂದರ್ಭದಲ್ಲಿ ದರ್ಣ ಗಣಕ ಕೇಂದ್ರದ ಸಹಾಯಕ ನಿರ್ದೇಶಕ ವಿಜಯೇಂದ್ರ ಎಸ್.ಕೆ. ಹಾಗೂ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಉಪಸ್ಥಿತರಿದ್ದರು.