ಲೇಖನಗಳು

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತ ಬಂಧು ಅಭಿಯಾನ

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತ ಬಂಧು ಅಭಿಯಾನ

ರೈತರ ಮಿತ್ರ, ರೈತನ ಬಂಧು ಎಂದೇ ಕರೆಯಲ್ಪಡುವ ಎರೆಹುಳು ರೈತನಂತೆ ಭೂಮಿಯಲ್ಲಿ ನಿರಂತರವಾಗಿ ಕೆಲಸ ಮಾಡುವ ಜೀವಿಯಾಗಿರುತ್ತದೆ. ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಎರೆಹುಳುಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೃಷಿಯಲ್ಲಿ ಹೆಚ್ಚು ಇಳುವರಿ ಪಡೆಯಲು ಸೂಕ್ತ ಪ್ರಮಾಣದಲ್ಲಿ ನೀರು ಗೊಬ್ಬರ ಪೂರೈಕೆ ಅತ್ಯಂತ ಅವಶ್ಯಕ. ರಾಸಾಯನಿಕ ಗೊಬ್ಬರ, ಕೀಟನಾಶಕ ಹಾಗೂ ಶೀಲಿಂಧ್ರ ನಾಶಕಗಳ ಯಥೇಚ್ಛ ಬಳಕೆಯಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತದೆ. ಇದರಿಂದ ವಾತಾವರಣ ಕಲುಷಿತವಾಗುತ್ತದೆ ಹಾಗೂ ಕೃಷಿ ಉತ್ಪನ್ನಗಳಲ್ಲಿ ರಾಸಾಯನಿಕ ಗೊಬ್ಬರ ಬಳಕೆಯಿಂದ ಉತ್ಪನ್ನಗಳ ಗುಣಮಟ್ಟ ಕಡಿಮೆಯಾಗುತ್ತಿದೆ. ಆದ ಕಾರಣ ಇತ್ತೀಚಿನ ದಿನಗಳಲ್ಲಿ ರೈತರು "ಸಾವಯುವ ಕೃಷಿ" ಯತ್ತ ಮರಳುತ್ತಿದ್ದಾರೆ. ಸಾವಯುವ ಕೃಷಿಯಲ್ಲಿ ಎರೆಹುಳು ಗೊಬ್ಬರದ ಬಳಕೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಎರೆಹುಳು ಗೊಬ್ಬರವನ್ನು ರೈತರು ತಮ್ಮಲ್ಲಿ ಲಭ್ಯವಿರುವ ಕೃಷಿ ಬೆಳೆಗಳ ಕಸಕಡ್ಡಿ,ತ್ಯಾಜ್ಯ ವಸ್ತುಗಳು ಮತ್ತು ಬಯೋ ಗ್ಯಾಸ್ ಸ್ಲರಿ ಸಹ ಬಳಸಿಕೊಂಡು ತಯಾರಿಸಿಕೊಳ್ಳಬಹುದು.

     ರೈತ ಬಂಧು ಅಭಿಯಾನ: ರೈತರು ಎರೆಹುಳು ಗೊಬ್ಬರ ತಯಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಅಗಸ್ಟ್ 15 ರಿಂದ ಅಕ್ಟೋಬರ್ 15 ರವರೆಗೆ 02 ತಿಂಗಳ ಅವಧಿಯ ರೈತ ಬಂಧು ಅಭಿಯಾನವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಅಭಿಯಾನದ ಅಡಿಯಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಕನಿಷ್ಠ 25 ಎರೆಹುಳು ತೊಟ್ಟಿಗಳನ್ನು ನಿಮರ್ಿಸಿಲು ಉದ್ದೇಶಿಸಲಾಗಿದೆ.

ಉದ್ದೇಶಗಳು: ಆಥರ್ಿಕ ಸ್ಥಿರತೆ- ರಾಸಾಯನಿಕ ಗೊಬ್ಬರದ ಬದಲಾಗಿ ಎರೆಹುಳು ಗೊಬ್ಬರದ ಉಪಯೋಗದಿಂದ ಉತ್ಪಾದನೆ ವೆಚ್ಚ ಕಡಿಮೆಯಾಗುವುದರಿಂದ ರೈತರ ಆದಾಯ ಹೆಚ್ಚಿಸಲು ಅನುಕೂಲವಾಗುತ್ತದೆ. ತ್ಯಾಜ್ಯ ವಸ್ತುಗಳ ಸದ್ಬಳಕೆಯಿಂದ (ಕೃಷಿ, ಡೈರಿ) ಪರಿಸರ ಮಾಲಿನ್ಯ ಕಡಿಮೆಗೊಳಿಸಿ ಸ್ವಚ್ಛ ಪರಿಸರ ಸೃಷ್ಠಿಸಲು ಅನುಕೂಲವಾಗುತ್ತದೆ. ರೈತರಲ್ಲಿ ಎರೆಹುಳು ಗೊಬ್ಬರ ಉತ್ಪಾದನೆ, ಅದರ ಉಪಯುಕ್ತತತೆ ಹಾಗೂ ಸಾವಯುವ ಕೃಷಿ ಉತ್ತೇಜಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಹಾಗೂ ರೈತರಿಗೆ ಎರೆಹುಳು ಗೊಬ್ಬರದ ಉತ್ಪಾದನೆ ಹಾಗೂ ಉದ್ಯಮಶೀಲತೆಯ ಅವಕಾಶಗಳ ಬಗ್ಗೆ ಪೂರಕ ಮಾಹಿತಿ ನೀಡಿ ಪ್ರೋತ್ಸಾಹಿಸಲಾಗುತ್ತದೆ.

ಎರೆಹುಳು ಗೊಬ್ಬರ ಬಳಕೆಯಿಂದ ಉಪಯೋಗಗಳು: ಕಪ್ಪು ಬಂಗಾರವೆಂದೇ ಕರೆಯಲ್ಪಡುವ ಎರೆಹುಳು ಗೊಬ್ಬರ ಒಂದು ಸ್ಥಿರವಾದ ಸಾವಯುವ ಗೊಬ್ಬರವಾಗಿದ್ದು, ಇದರ ಬಳಕೆಯಿಂದ ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳು ಪೂರೈಕೆಯಾಗುವುದಲ್ಲದೆ ಮಣ್ಣಿನ ಗುಣಮಟ್ಟ ಮತ್ತು ಸೂಕ್ಷ್ಮಾಣು ಜೀವಗಳನ್ನು ಹೆಚ್ಚಿಸುತ್ತದೆ. ಎರೆಹುಳು ಗೊಬ್ಬರದ ಪೋಷಕಾಂಶಗಳ ಮಟ್ಟವು ಎರೆಹುಳು ತಿನ್ನಲು ಉಪಯೋಗಿಸುವ ತ್ಯಾಜ್ಯ ವಸ್ತುಗಳ ಮೇಲೆ ಅವಲಂಬಿತವಾಗಿರುತ್ತದೆ. ಸರಾಸರಿಯಾಗಿ ಸಾರಜನಕ 0.8-1.5%, ರಂಜಕ 0.5-1.3%, ಪೋಟ್ಯಾಷ್ 0.8-1.8%, ಕ್ಯಾಲ್ಸಿಯಂ 1.0-1-5%, ಮೇಗ್ನೇಷಿಯಮ್ 0.5%, ಸಲ್ಫರ್ 0.4-05%, ಕಬ್ಬಿಣ 1.0-1.4%, ಮ್ಯಾಂಗನೀಸ್ 700-730 ಪಿಪಿಎಂ, ತಾಮ್ರ 1175-1315 ಪಿಪಿಎಂ, ಝಿಂಕ್ 21-30 ಪಿಪಿಎಂ ಹೊಂದಿರುತ್ತದೆ.

ಕೃಷಿ ಬೆಳೆಯಲ್ಲಿ ಪ್ರತಿ ಎಕರೆಗೆ ಸರಾಸರಿ 6 ರಿಂದ 8 ಸಾವಿರ ರೂ. ಗಳ ಉದ್ಪಾದನೆ ವೆಚ್ಚವಿದ್ದು, ಇದರಲ್ಲಿ ರಾಸಾಯನಿಕ ಗೊಬ್ಬರಕ್ಕೆ ಸುಮಾರು 1500 ರಿಂದ 2000 ಸಾವಿರ ರೂ.ಗಳಷ್ಟು ಖಚರ್ು ಭರಿಸಬೇಕಾಗುವುದು. ಒಂದು ವೇಳೆ ಎರೆಹುಳು ಗೊಬ್ಬರ ಸ್ವಂತ ಉತ್ಪಾದನೆ ಮಾಡಿ ಉಪಯೋಗಿಸುವುದರಿಂದ ಶೇಕಡ 25-30% ಉತ್ಪಾದನೆೆ ವೆಚ್ಚವನ್ನು ಕಡಿಮೆಗೊಳಿಸಬಹುದಾಗಿದೆ. ಎರೆಹುಳು ಗೊಬ್ಬರದ ಜೊತೆಗೆ ಜೈವಿಕ ಗೊಬ್ಬರದ ಮಿಶ್ರಣ ದಿಂದ ರೋಗ ಉಂಟು ಮಾಡುವ ಸೂಕ್ಷ್ಮ ಜೀವಿಗಳನ್ನು ನಿಯಂತ್ರಿಸಬಹದು. ಎರೆಹುಳು ಕೃಷಿ ಅಳವಡಿಕೆಯಿಂದ ಮಣ್ಣಿನ ರಚನೆ, ನೀರು ಹೀರುವ, ಗಾಳಿಯಾಡುವ ಗುಣ ಮತ್ತು ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ. 

ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಗಳನ್ನು ಹೆಚ್ಚಿಸುತ್ತದೆ. ಎರೆಹುಳು ಗೊಬ್ಬರದ ಸತತ ಬಳಕೆಯಿಂದ ಮಣ್ಣಿನಲ್ಲಿರುವ ಹಾನಿಕಾರಕ ಲವಣಗಳ ಪ್ರಮಾಣ ಕಡಿಮೆಯಾಗುತ್ತದೆ. ಎರೆಹುಳು ಗೊಬ್ಬರದಲ್ಲಿ ಇಂಗಾಲ ಮತ್ತು ಸಾರಜನಕಗಳ ಅನುಪಾತ ಕಡಿಮೆ ಇರುವುದರಿಂದ ಪೋಷಕಾಂಶಗಳು ಬೆಳೆಗಳಿಗೆ ತ್ವರಿತವಾಗಿ ಲಭ್ಯವಾಗುತ್ತವೆ. ತ್ಯಾಜ್ಯ ಮತ್ತು ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆಯಾಗುವುದರೊಂದಿಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು. ಎರೆಹುಳು ಗೊಬ್ಬರ ತೊಟ್ಟಿ ಅಳವಡಿಸಿಕೊಳ್ಳಲು ಸುಲಭ, ಕಡಿಮೆ ಖಚರ್ು ಹಾಗೂ ಕಡಿಮೆ ಶ್ರಮ ಹೊಂದಿರುತ್ತದೆ ಹಾಗೂ ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆಯಾಗುತ್ತದೆ. ಎರೆಹುಳು ಗೊಬ್ಬರದ ಉಪಯೋಗದಿಂದ ಉತ್ಪನ್ನಗಳ ಗುಣಮಟ್ಟ ಮತ್ತು ಶೇಖರಣೆ ಅವಧಿಯು ಹೆಚ್ಚುವುದು.

ಎರೆಹುಳು ಪ್ರಭೇದಗಳು : ಯೂಡ್ರಿಲಸ್ ಯೂಜಿನಿಯಾ (ಆಫ್ರಿಕನ್ ನಿಶಾಚಾರಿ), ಐಸೀನಿಯಾ ಪ್ಯೂಟಿಡಾ ಮತ್ತು ಪೆರಿಯೋನಿಕ್ಸ್ ಎಕ್ಸ್ಕವೇಟಿಸ್ ಎರೆ ಕೃಷಿಗೆ ಸೂಕ್ತವಾದ ಪ್ರಭೇದಗಳು.  

ಎರೆಹುಳು ಗೊಬ್ಬರ ತಯಾರಿಕೆಗೆ ಗಮನಿಸಬೇಕಾದ ಮುಖ್ಯ ಅಂಶಗಳು :  ತೊಟ್ಟಿಯನ್ನು ತಣ್ಣಗಿರಿಸಲು ನೆರಳಿರುವ ಮತ್ತು ಎತ್ತರದ ಜಾಗದಲ್ಲಿ ನಿಮರ್ಿಸಬೇಕು ಹಾಗೂ ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಚಪ್ಪರವನ್ನು ನಿಮರ್ಿಸಬೇಕು. ಎರೆಹುಳು ಗೊಬ್ಬರ ಉತ್ಪಾದನೆಗೆ ಕೃಷಿ ತ್ಯಾಜ್ಯ ಪದಾರ್ಥಗಳು, ಅರಣ್ಯ ಮತ್ತು ತೋಟದ ಎಲೆ, ಪ್ರಾಣಿಗಳ ಸಗಣಿ ಮತ್ತು ಹಿಕ್ಕೆ, ಬಯೋಗ್ಯಾಸ್ ಸ್ಲರಿ, ಅಡಿಗೆ ಮನೆ ತ್ಯಾಜ್ಯ, ಕೃಷಿ ಉದ್ದಿಮೆ ತ್ಯಾಜ್ಯ, ರೇಷ್ಮೆ ಕೃಷಿ ತ್ಯಾಜ್ಯ, ಮಾರುಕಟ್ಟೆ ನಿರುಪಯುಕ್ತ ತ್ಯಾಜ್ಯ ಪದಾರ್ಥಗಳನ್ನು ಉಪಯೋಗಿಸಬಹುದು. 

ಎರೆಹುಳು ಕೃಷಿಯಲ್ಲಿ ಇರುವೆ, ಗೆದ್ದಿಲು ಮತ್ತು ಚಪ್ಪಟಡ ಹುಳು (ಪ್ಲ್ಯಾಟ್ ವರ್ಮ) ಗಳು ಎರೆ ಹುಳುವಿನ ಮುಖ್ಯವಾದ ಶತೃಗಳು ಆಗಿರುವುದರಿಂದ ತೊಟ್ಟಿಯ ಸುತ್ತಲೂ ಇರುವೆ ಬಲೆ ನಿಮರ್ಿಸಬೇಕು. ಪ್ರತಿ ಕಿಲೋ ಗ್ರಾಮ ತ್ಯಾಜ್ಯ ಪದಾರ್ಥಕ್ಕೆ 20 ಗ್ರಾಂ ಭಜೆ ಪುಡಿಯನ್ನು (ಅಕೋರಸ್ ಕ್ಯಾಲಮಸ್ ರೈಜೋಮ್) ಅಥವಾ ಬೇವಿನ ಹಿಂಡಿಯನ್ನು ಎರೆಹುಳು ಮಡಿಗಳಲ್ಲಿ ಕೂಡುವುದರಿಂದ ಸ್ವಾಭಾವಿಕ ಶತೃಗಳನ್ನು ನಿಯಂತ್ರಿಸಬಹುದಾಗಿದೆ.

ತೊಟ್ಟಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕುವಾಗ ಪ್ಲಾಸ್ಟಿಕ್, ರಾಸಾಯನಿಕ, ಕೀಟನಾಶಕ, ಗಾಜಿನ ತುಂಡು ಮತ್ತು ಕಬ್ಬಿಣದ ತುಂಡು ಇರದಂತೆ ಎಚ್ಚರ ವಹಿಸಬೇಕು. ತೊಟ್ಟಿಯಲ್ಲಿ 60-70% ರಷ್ಟು ತೇವಾಂಶವಿರುವಂತೆ ನೋಡಿಕೊಳ್ಳಬೇಕು. ಕೀಟ ತಿನ್ನುವ ಪಕ್ಷಿ ಮತ್ತು ಇಲಿಗಳಿಂದ ಎರೆಹುಳುಗಳನ್ನು ಕಾಪಾಡಲು ತೊಟ್ಟಿಯನ್ನು ತಂತಿಯ ಜಾಲರಿಯಿಂದ ಮುಚ್ಚುವುದು.

ಎರೆಹುಳು ಗೊಬ್ಬರ ತಯಾರಿಕೆ ತೊಟ್ಟಿ ಮಾದರಿಗಳು:  ಎರೆಹುಳು ಗೊಬ್ಬರ ತಯಾರಿಕೆಗೆ ತೊಟ್ಟಿ ವಿಧಾನವು ಹೆಚ್ಚು ಬಳಕೆಯಲ್ಲಿರುವುದರಿಂದ, ಮಾಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2 ಮಾದರಿಯ ಎರೆಹುಳು ಘಟಕದ ತೊಟ್ಟಿಯನ್ನು ಅನುಮೋದಿಸಿದ್ದು, ಅವುಗಳ ಅಂದಾಜು ಪಟ್ಟಿ ಹಾಗೂ ವಿನ್ಯಾಸಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

ಘಟಕ 1: ಗೊಬ್ಬರ ತಯಾರಿಕೆ ತೊಟ್ಟಿ ಅಳತೆ 5.5ಘಿ2.7ಘಿ1.0 ತೊಟ್ಟಿಗೆ 5874 ರೂ. ಕೂಲಿ, 21126 ರೂ. ಸಾಮಗ್ರಿ ವೆಚ್ಚ ಸೇರಿ ಒಟ್ಟು 27000 ವೆಚ್ಚದಲ್ಲಿ 20.33 ಮಾನವ ದಿನಗಳನ್ನು ಸೃಜಿಸಬಹುದಾಗಿದೆ. ಘಟಕ 2 : ಗೊಬ್ಬರ ತಯಾರಿಕೆ ತೊಟ್ಟಿ ಅಳತೆ  3.6ಘಿ2.7ಘಿ1.0  ತೊಟ್ಟಿಗೆ 4891 ರೂ. ಕೂಲಿ, 16109 ರೂ. ಸಾಮಗ್ರಿ ವೆಚ್ಚ ಸೇರಿ 21000 ವೆಚ್ಚದಲ್ಲಿ 16.93 ಮಾನವ ದಿನಗಳನ್ನು ಸೃಜಿಸಬಹುದಾಗಿದೆ 

ರೈತರು ಸಕರ್ಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಎರೆಹುಳು ತೊಟ್ಟಿಯನ್ನು ನಿಮರ್ಿಸಿ, ಆಥರ್ಿಕ ಸದೃಡ ಹೊಂದುವದರ ಜೊತೆಗೆ ಕೃಷಿ ಭೂಮಿ ಹಾಗೂ ಪರಿಸರದ ಕಾಳಜಿ ವಹಿಸಬೇಕು.

- ಗಣೇಶ ಬಡೆಪ್ಪನವರ

ಧಾರವಾಡ

ಮೊ: 973121979 

ಸುದ್ದಿ ಓದಿ