ಬಳ್ಳಾರಿ

ಮಹಾತ್ಮಗಾಂಧಿ ಜಯಂತ್ಯೋತ್ಸವ: ಸ್ವಚ್ಛತಾ ಕಾರ್ಯಕ್ರಮ

ಮಹಾತ್ಮಗಾಂಧಿ ಜಯಂತ್ಯೋತ್ಸವ: ಸ್ವಚ್ಛತಾ ಕಾರ್ಯಕ್ರಮ

ಲೋಕದರ್ಶನ ವರದಿ 

ಬಳ್ಳಾರಿ 02: ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತ್ಯೋತ್ಸವ ಅಂಗವಾಗಿ ಇಂದು ಬೆಳಿಗ್ಗೆ ನಗರದ 22ನೇ ವಾರ್ಡ್‌ನ ಎಸ್‌.ಬಿ.ಐ. ಕಾಲೋನಿಯಲ್ಲಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಸ್ವಚ್ಚತಾ ಕಾರ್ಯಕ್ರಮ ಪಾಲ್ಗೊಂಡು ಸುತ್ತಮುತ್ತಲ್ಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಾತ್ಮಗಾಂಧಿ ಜಯಂತಿಯ ಅಂಗವಾಗಿ ರಾಷ್ಟ್ರಾದ್ಯಂತ ಇಂದು ಸ್ವಚ್ಛ ಸೇವೆಯನ್ನು ಹಮ್ಮಿಕೊಳ್ಳುತ್ತಿದ್ದು, ಅದೇರೀತಿ ನಾವು ಸಹ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಸ್ವಚ್ಛತಾ ಆಂದೋಲನವನ್ನು ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗುರುಲಿಂಗನಗೌಡ, ಜಿಲ್ಲಾಧ್ಯಕ್ಷ ಗಣಪಾಲ್ ಐನಾಥರೆಡ್ಡಿ, ಪಾಲಿಕೆ ಸದಸ್ಯ ಹನುಮಂತ, ಮೋತ್ಕರ್ ಶ್ರೀನಿವಾಸ್, ವೇಮಣ್ಣ, ಬಳ್ಳಾರಿ ನಗರ ರೈತ ಮೋರ್ಚಾ ಅಧ್ಯಕ್ಷ ನಾರಾಯಣ, ರಿಟೈರ್ಡ್‌ ಬ್ಯಾಂಕ್ ಮ್ಯಾನೇಜರ್ ರವಿ ದೇಸಾಯಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ