ಮುಂದಗೋಡ

ಮಹಾಶಿವರಾತ್ರಿ: ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ

ಮಹಾಶಿವರಾತ್ರಿ: ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ

ಮುಂಡಗೋಡ:ಮಹಾಶಿವರಾತ್ರಿ ಅಂಗವಾಗಿ ತಾಲೂಕಿನಾದ್ಯಂತ ಶಿವನ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣದ ಆನಂದ ನಗರದ ಈಶ್ವರ ದೇವಾಲಯ, ಬಂಕಾಪುರ ರಸ್ತೆಯ ಪಾರ್ವತಿ ಪರಮೇಶ್ವರ ದೇವಸ್ಥಾನ, ಹಳೂರ ಓಣಿ, ಕೊಪ್ಪ(ಇಂದಿರಾನಗರ), ಇಂದೂರಿನ ಕಲ್ಮೇಶ್ವರ ದೇವಾಲಯ, ಕಿಲ್ಲೆ ಓಣಿಯ ಈಶ್ವರ ದೇವಸ್ಥಾನ, ನಂದಿಕಟ್ಟಾ ಹಾಗೂ ವಿವಿಧ ಗ್ರಾಮದ  ದೇಗುಲಗಳಿಗೆ ಭಕ್ತರು ಪೂಜೆ ಸಲ್ಲಿಸಿ, ನೈವೇದ್ಯ ಅರ​‍್ಿಸಿ ಪರಶಿವನ ಕೃಪೆಗೆ ಪಾತ್ರರಾದರು.    

ಆನಂದನಗರದಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕುಂಕುಮಾರ್ಚನೆ, ವಿಶೇಷ ಪೂಜೆ ಸಲ್ಲಿಸಿದರು. ಬಂಕಾಪುರ ರಸ್ತೆಯ ಪಾರ್ವತಿ ಪರಮೇಶ್ವರ ದೇವಸ್ಥಾನದ ಎದುರಿಗೆ ಇರುವ ಗಿಡಗಳಿಂದ ಬಿಲ್ವಪತ್ರೆ ತಂದು ದೇವರ ಪಾದಕ್ಕೆ ಅರ​‍್ಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಬೇಡಿಕೊಂಡರು. ಉಪವಾಸ ವೃತ ಆಚರಣೆ ಮಾಡಿ ಶಿವನ ಧ್ಯಾನ ಮಾಡುತ್ತಾ ಭಜನೆ ಮಾಡಿದರು. ಈ ಬಾರಿ ಗ್ರಾಮ ದೇವಿಯ ಜಾತ್ರೆ ಜರುಗಿದ ಕಾರಣ ಪಟ್ಟಣದಲ್ಲಿ ಶಿವರಾತ್ರಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು. 


ಸುದ್ದಿ ಓದಿ