ವಿಜಯಪುರ

ನಾಳೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನ ಪುರಾಣ ಪ್ರಾರಂಭ

ನಾಳೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನ ಪುರಾಣ ಪ್ರಾರಂಭ

ದೇವರಹಿಪ್ಪರಗಿ 03: ತಾಲೂಕಿನ ಡೋಣಿ ಕಡಕೋಳ ಗ್ರಾಮದ ಗುರು ಮಡಿವಾಳೇಶ್ವರ ಗದ್ದುಗೆ ಹಿರೇಮಠದಲ್ಲಿ ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅಮೃತ ಹಸ್ತದಿಂದ ಅಡಿಗಲ್ಲು ಸಮಾರಂಭ, ಲಿಂ, ಹಾನಗಲ್ ಕುಮಾರ ಶಿವಯೋಗಿಗಳ 158ನೇ ಜಯಂತೋತ್ಸವದ ಪ್ರಯುಕ್ತ  ದಿ.5. ರಿಂದ 24ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ದೇವರಹಿಪ್ಪರಗಿ ಪಟ್ಟಣದ ಜಡಿಮಠದ ಜಡೆ ಸಿದ್ದೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನ ಮಹಾಪುರಾಣ ಪ್ರತಿದಿನ ಸಾಯಂಕಾಲ 7ಗೆ ಜರುಗಲಿದೆ ಎಂದು ಗುರು ಮಠದ ಮಡಿವಾಳೇಶ್ವರ ಶ್ರೀಗಳು ತಿಳಿಸಿದ್ದಾರೆ. 

ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಶ್ರೀಗಳು ಮೇ. 20ರಂದು ಬುಧವಾರ ಸಾಯಂಕಾಲ 7 ಗಂಟೆಗೆ ಯುವಜನೋತ್ಸವ, ದಿ.21 ಗುರುವಾರ ಸಾಯಂಕಾಲ 7 ಗಂಟೆಗೆ ರೈತರ ಗೋಷ್ಠಿ, ದಿ.22 ಶುಕ್ರವಾರ ಸಾಯಂಕಾಲ 7 ಗಂಟೆಗೆ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಿಳಾ ಗೋಷ್ಠಿ, ದಿ.23 ಶನಿವಾರ ಸಾಯಂಕಾಲ 7 ಗಂಟೆಗೆ ತುಲಾಭಾರ, ದಿ.24 ರವಿವಾರ ಬೆಳಿಗ್ಗೆ 9 ಗಂಟೆಗೆ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ, ಅಂದು ಬೆಳಗ್ಗೆ 7 ಗಂಟೆಗೆ  ಬಸವೇಶ್ವರ ಕರ್ತೃ ಗದ್ದುಗೆ ಮಹಾ ರುದ್ರಾಭಿಷೇಕ ಬಿಲ್ವಾರ್ಚನೆ ಹಾಗೂ  ಸಾಯಂಕಾಲ 4 ಗಂಟೆಗೆ ಧರ್ಮಸಭೆಯಲ್ಲಿ ಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ,

ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ, ಬಿಜೆಪಿ ಮುಖಂಡರುಗಳಾದ ಬಸನಗೌಡ ಪಾಟೀಲ ಯಡಿಯಾಪೂರ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಭಾಗವಹಿಸುವರು, ಅಂದು ಶ್ರೀಶೈಲ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವದ ಪ್ರಯುಕ್ತ ಆರತಿ, ಕುಂಭ, ಕಳಸ, ಕನ್ನಡಿ, ಡೊಳ್ಳು ಬಾಜಿ ಹಾಗೂ ಭಜಂತ್ರಿ ಯೊಂದಿಗೆ ಅದ್ದೂರಿಯಾಗಿ ದೇವಸ್ಥಾನ ತಲುಪುವುದು ಅಂದು ಗ್ರಾಮಸ್ಥರು, ಶ್ರೀಮಠದ ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ  ಜಗದ್ಗುರುಗಳ ಆಶೀರ್ವಾದ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು. 


ಸುದ್ದಿ ಓದಿ