ಬಳ್ಳಾರಿ

ಮಹರ್ಷಿ ವಾಲ್ಮೀಕಿಯವರ ರಾಮಾಯಣ ವಿಶ್ವಮಾನ್ಯ: ಪ್ರೊ. ಸಿದ್ದು ಆಲಗೂರ

ಮಹರ್ಷಿ ವಾಲ್ಮೀಕಿಯವರ ರಾಮಾಯಣ ವಿಶ್ವಮಾನ್ಯ: ಪ್ರೊ. ಸಿದ್ದು ಆಲಗೂರ

ಲೋಕದರ್ಶನ ವರದಿ 

ಬಳ್ಳಾರಿ 20: ವಾಲ್ಮೀಕಿ ಮಹಾಕವಿ ಬರೆದ ರಾಮಾಯಣವು ವಿಶ್ವಮಾನ್ಯವಾದುದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿದ್ದು ಪಿ. ಆಲಗೂರರವರು ಅಭಿಮತ ವ್ಯಕ್ತಪಡಿಸಿದರು.  


ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಘಟಕದ ವತಿಯಿಂದ ಆಚರಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯವರು ತಮ್ಮ ರಾಮಾಯಣ ಮಹಾಕಾವ್ಯದ ಮೂಲಕ ಜಗತ್ತಿಗೆ ನೀಡಿದ ಕೊಡುಗೆಯು ಅನನ್ಯವಾದುದು, ರಾಮನ ಆದರ್ಶವನ್ನು ಹಾಗೂ ಇನ್ನಿತರ ಪಾತ್ರ ಸನ್ನಿವೇಶಗಳನ್ನು ಪ್ರತಿಮಾ ದೃಷ್ಟಿಯಿಂದ ಇಂದಿಗೂ ವಿಭಿನ್ನ ನೆಲೆಗಳಲ್ಲಿ ನಿಷ್ಕರ್ಷೆಗೆ ಒಳಪಡಿಸುವ ಮತ್ತು ಅರ್ಥೈಸುವ ಪ್ರಕ್ರಿಯೆಗಳು ನೆಡೆದಿದೆ. ರಾಮಾಯಣವನ್ನು ಜಾನಪದ, ನಾಟಕ, ಗೀತೆ ಶಾಸ್ತ್ರೀಯ ಗಾಯನಗಳ ಮೂಲಕ ಅರ್ಥೈಸಿಕೊಳ್ಳುವ ಆ ಮೂಲಕ ಅನಕ್ಷರಸ್ಥರಿಂದ ವಿದ್ವಾಂಸರವರೆಗೂ ರಾಮಯಣವನ್ನು ಚಿರಪರಿಚಿತಗೊಳಿಸಿರುವ ಕೀರ್ತಿ ಮಹರ್ಷಿ ವಾಲ್ಮೀಕಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. 


ಕುಲಸಚಿವರಾದ ಪ್ರೊ. ಎಸ್‌. ಸಿ. ಪಾಟೀಲ್ ಮತ್ತು ಕುಲಸಚಿವರು ಮೌಲ್ಯಮಾಪನ ಪ್ರೊ. ಶಶಿಕಾಂತ್ ಎಸ್‌. ಉಡಿಕೇರಿ ಹಾಗೂ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಘಟಕದ ಸಂಯೋಜಕ ಡಾ, ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ