ತಾಳಿಕೋಟಿ

ಮಹಾರಾಣಾ ಪ್ರತಾಪ್‌ಸಿಂಹ ಜಯಂತಿ: ರಕ್ತದಾನ ಶಿಬಿರ

ಮಹಾರಾಣಾ ಪ್ರತಾಪ್‌ಸಿಂಹ ಜಯಂತಿ: ರಕ್ತದಾನ ಶಿಬಿರ

ತಾಳಿಕೋಟಿ: ಶ್ರೀ ಮಹಾರಾಣಾ ಪ್ರತಾಪ್‌ಸಿಂಹ ಅವರ 483 ನೇಯ ಜಯಂತಿ ಅಂಗವಾಗಿ ತಾಳಿಕೋಟಿ ರಾಜಪೂತ್ ಸಮಾಜದ ವತಿಯಿಂದ ಬಳಗಾನೂರ ಗ್ರಾಮದಲ್ಲಿ ರಕ್ತದಾನ ಶಿಬಿರ ಜರುಗಿತು. ಶಿಬಿರವನ್ನು ಉದ್ಘಾಟಿಸಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಽಽ ಶ್ರೀಶೈಲ ಹುಕ್ಕೇರಿ ಅವರು ಮಾತನಾಡಿ ಮನುಷ್ಯನ ಬದುಕಿಗೆ ಅತ್ಯಗತ್ಯವಾಗಿರುವ ರಕ್ತವು ಸರಿಯಾದ ಸಮಯಕ್ಕೆ ಸಿಗದೆ ಹೋದಲ್ಲಿ ಪ್ರಾಣಹಾನಿ ಆಗುವ ಸಂಭವವಿರುತ್ತದೆ. ಅದನ್ನು ತಪ್ಪಿಸಲು ಇಂಥಹ ಶಿಬಿರಗಳು ಸಹಕಾರಿಯಾಗುತ್ತವೆ. ರಾಜಪೂತ್ ಸಮಾಜ ಭಾಂದವರ ಈ ಸೇವೆ ಇತರರಿಗೂ ಅನುಕರಣೀಯವಾಗಿದೆ. 

ರಾಜಪೂತ್ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ ಅವರು ಮಾತನಾಡಿ ಮಹಾನ್ ದೇಶಭಕ್ತ ಹಿಂದೂ ಸಂಸ್ಕ್ರತಿಯ ರಕ್ಷಕ ವೀರಪುತ್ರ ಶ್ರೀ ಮಹಾರಾಣಾ ಪ್ರತಾಪಸಿಂಹ ರವರ ಬದುಕಿನ ಆದರ್ಶಗಳು ಎಲ್ಲರಿಗೂ ಮಾದರಿಯಾಗಿವೆ. ತ್ಯಾಗ ಪ್ರಾಮಾಣಿಕತೆ ಹಾಗೂ ವಚನ ಪಾಲನೆ ಅವರ ಜೀವನದ ಮೂಲ ತತ್ವಗಳಾಗಿದ್ದವು. ಅವರ ಈ ತ್ಯಾಗಮಯ ಬದುಕೆ ನಮಗೆ ಪ್ರೇರಣೆಯಾಗಿದೆ ಎಂದರು. ರಾಜಪೂತ್ ಸಮಾಜದ ವಿಠಲಸಿಂಗ್ ಹಜೇರಿ, ದೀಲೀಪ್ ಹಜೇರಿ, ಸಂತೋಷ ಹಜೇರಿ, ಸೀತಾರಾಮ್ ವಿಜಾಪುರ, ಮತ್ತಿತರರು ರಕ್ತದಾನ ಮಾಡಿದರು. ಈ ಸಮಯದಲ್ಲಿ ರತನಸಿಂಗ್ ಕೊಕಟನೂರ, ಸುರೇಶ ಹಜೇರಿ, ವಿಠಲ್‌ಸಿಂಗ್ ಬಸವಂತಸಿಂಗ್ ಹಜೇರಿ, ರತನ್‌ಸಿಂಗ್ ದೇವಿ, ಕೇಸರಸಿಂಗ್ ಹಜೇರಿ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಬಳಗಾನೂರ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ