ಮಹಾಂತೇಶ ಗಡೆನ್ನವರಗೆ ಪಿಎಚ್ಡಿ ಗೌರವ
ಬೈಲಹೊಂಗಲ 13: ಪಟ್ಟಣದ ಕೆಆರ್ಸಿಇಎಸ್ ಶಿಕ್ಷಣ ಸಂಸ್ಥೆಯ ಬಿಎಡ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮಹಾಂತೇಶ ಎಸ್ ಗಡೆಣ್ಣವರ ಅವರಿಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ಪ್ರದಾನ ಮಾಡಿ ಗೌರವಿಸಿದೆ.
ಮಹಾಂತೇಶ ಅವರು ಶಿಕ್ಷಣ ಶಾಸ್ತ್ರದಲ್ಲಿ ಎ ಸ್ಟಡಿ ಆಪ್ ಟೀಚರ್ ಎಜ್ಯುಕೇಟರ್ಸ್ ಪರ್ಸೆಪ್ಪನ್ ಆನ್ ಲೀಡರ್ಶಿಪ್ ಸ್ಟೈಲ್ಸ್ ಆಪ್ ಪ್ರಿನ್ಸಿಪಾಲ್ಸ್ ಆಂಡ್ ಆರ್ಗನ್ಯಾಶನಲ್ ಹೆಲ್ಥ ಆಪ್ ಕಾಲೇಜಿಸ್ ಆಪ್ ಎಜ್ಯುಕೇಶನ್ ಇನ್ ರಿಲೇಶನ್ ಟು ಟೋಟಲ್ ಕ್ವಾಲಿಟಿ ಮ್ಯಾನೇಜಮೆಂಟ್ ಎಂಬ ವಿಷಯ ಮಂಡಿಸಿದ್ದಕ್ಕೆ ಡಾಕ್ಟರ ಆಪ್ ಫಿಲಾಸಫಿ ಪದವಿಗೆ ಪಾತ್ರರಾಗಿದ್ದಾರೆ.
ಇವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಿಕ್ಷಣ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎ.ವಿ.ಕರಬಸನಗೌಡರ ಮಾರ್ಗದರ್ಶನ ಮಾಡಿದ್ದರು.