ಮಹಾದೇವಿಗೆ ಬಸವ ಭೂಷಣ ಪ್ರಶಸ್ತಿ
ಲೋಕದರ್ಶನ ವರದಿ
ತಾಳಿಕೋಟೆ 3: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಸಮೀಪದ ದೇವರ ಹುಲಗಬಾಳದ ಶಿಕ್ಷಕಿ ಮಹಾದೇವಿ ಗುರುಲಿಂಗಪ್ಪ ವಾಲಿ(ಕಿಣಗಿ) ಅವರಿಗೆ ಸನ್ 2017-18ನೇ ಸಾಲಿನ ರಾಜ್ಯಮಟ್ಟದ ಬಸವ ಭೂಷಣ ಪ್ರಶಸ್ತಿಯನ್ನು ಈಚೇಗೆ ಬ.ಬಾಗೇವಾಡಿಯಲ್ಲಿ ನೀಡಿ ಗೌರವಿಸಲಾಗಿದೆ.
ಮಹಾದೇವಿ ವಾಲಿ(ಕಿಣಗಿ) ಅವರು ಶರಣರ ಸಂದೇಶಗಳನ್ನು ಮಹಾಮನೆಯ ಮೂಲಕ ಕಳೆದ 14 ವರ್ಷಗಳಿಂದ ಸಕ್ರಿಯ ಕಾರ್ಯಕತರ್ೆಯಾಗಿ ಮುಟ್ಟಿಸುವಲ್ಲಿ ನಿರತರಾಗಿದ್ದಾರೆ. ಅವರಿಗೆ ಈಚೇಗೆ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.