ಲೇಖನಗಳು

ಮದ್ರಾಸ್ ಐ : ಕಣ್ಣಿನ ಜ್ವರ ವೈರಸ್ ಕುರಿತು ಮುನ್ನೆಚ್ಚರಿಕೆ ಇರಲಿ ಆತಂಕ ಬೇಡ

ಮದ್ರಾಸ್ ಐ : ಕಣ್ಣಿನ ಜ್ವರ ವೈರಸ್ ಕುರಿತು ಮುನ್ನೆಚ್ಚರಿಕೆ ಇರಲಿ ಆತಂಕ ಬೇಡ

ಸಾಂಕ್ರಾಮಿಕ ಕಾಂಜಂಕ್ಟಿವಿಟಿಸ್ ಸಾಮಾನ್ಯವಾಗಿ ವೈರಸ್‌ನಿಂದ ಉಂಟಾಗುತ್ತದೆ.  ಬ್ಯಾಕ್ಟೀರಿಯಾದ ಸೋಂಕುಗಳು, ಅಲರ್ಜಿಗಳು, ಇತರ ಉದ್ರೇಕಕಾರಿಗಳು ಮತ್ತು ಶುಷ್ಕತೆಗಳು ಸಹ ಸಾಮಾನ್ಯ ಕಾರಣಗಳಾಗಿವೆ. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳೆರಡೂ ಸಾಂಕ್ರಾಮಿಕವಾಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ಹಾದುಹೋಗುತ್ತದೆ ಅಥವಾ ಕಲುಷಿತ ವಸ್ತುಗಳು ಅಥವಾ ನೀರಿನ ಮೂಲಕ ಹರಡುತ್ತದೆ. ಕಲುಷಿತ ಬೆರಳುಗಳ ಸಂಪರ್ಕವು ಕಾಂಜಂಕ್ಟಿವಿಟಿಸ್ನ ಸಾಮಾನ್ಯ ಕಾರಣವಾಗಿದೆ. ಬ್ಯಾಕ್ಟೀರಿಯಾಗಳು ಕಣ್ಣುರೆಪ್ಪೆಗಳ ಅಂಚುಗಳು ಮತ್ತು ಸುತ್ತಮುತ್ತಲಿನ ಚರ್ಮದ, ನಾಸೊಫಾರ್ನೆಕ್ಸ್‌ನಿಂದ, ಸೋಂಕಿತ ಕಣ್ಣಿನ ಹನಿಗಳು ಅಥವಾ ಕಾಂಟ್ಯಾಕ್ಟ್‌ ಲೆನ್ಸ್‌ಗಳಿಂದ, ಜನನಾಂಗಗಳು ಅಥವಾ ರಕ್ತಪ್ರವಾಹದಿಂದ ಕಾಂಜಂಕ್ಟಿವಾವನ್ನು ತಲುಪಬಹುದು. ವೈರಲ್ ಕಾಂಜಂಕ್ಟಿವಿಟಿಸ್ ಪ್ರಕರಣಗಳಲ್ಲಿ 65ಅ ರಿಂದ 90ಅ ರಷ್ಟು ಮಾನವ ಅಡೆನೊವೈರಸ್ನಿಂದ ಸೋಂಕು ಉಂಟಾಗುತ್ತದೆ. 

ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮದ್ರಾಸ್ ಐ ಸಮಸ್ಯೆ ಹೆಚ್ಚುತ್ತಿದೆ. ಮಕ್ಕಳಲ್ಲಿ ಈ ಸಮಸ್ಯೆ ಅತಿಯಾಗಿ ಕಾಡುತ್ತಿದೆ. ಮದ್ರಾಸ್ ಐ ಸಮಸ್ಯೆ ಹರಡುವ ಬಗ್ಗೆ ಹಲವರಲ್ಲಿ ಹಲವು ಗೊಂದಲಗಳಿವೆ. ಸೋಂಕಿತರ ಕಣ್ಣನ್ನು ನೋಡುವುದರಿಂದ ಇದು ಹರಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಹಾಗಾದರೆ ಇದು ನಿಜವೇ? ಈ ಬಗ್ಗೆ ತಜ್ಞರ ಏನು?  

ನಿರಂತರ ಮಳೆ, ಪ್ರವಾಹ ಹಾಗೂ ಜಲಾವೃತದಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಮದ್ರಾಸ್ ಐ ಸಮಸ್ಯೆ ಹೆಚ್ಚುತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಈ ಸಮಸ್ಯೆ ಉಲ್ಬಣವಾಗಿರುವುದು ಕಾಣಬಹುದು. ಅದರಲ್ಲೂ ಮಕ್ಕಳಲ್ಲಿ ಇದು ಹೆಚ್ಚು ಹರಡುತ್ತಿದೆ. ಮದ್ರಾಸ್ ಐ ಪ್ರಕರಣಗಳು ಹೆಚ್ಚಿದ ಕಾರಣದಿಂದ ಅರುಣಾಚಲ ಪ್ರದೇಶದಲ್ಲಿ ಕೆಲವು ದಿನಗಳ ಕಾಲ ಶಾಲೆಗಳಿಗೆ ರಜೆ ನೀಡಲಾಗಿದೆ. 

ಈ ಪಿಂಕ್ ಐ ಅಥವಾ ಮದ್ರಾಸ್ ಸಮಸ್ಯೆಯಿಂದ ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗುವುದು, ತುರಿಕೆ ಮತ್ತು ನೀರು ಸೋರುವುದು ಉಂಟಾಗುತ್ತದೆ. ಅಲ್ಲದೆ ಕೆಲವರಿಗೆ ಕಣ್ಣು ತೆರೆಯುವುದು ಕಷ್ಟವಾಗಬಹುದು. ಕಣ್ಣುಗಳು ಊದಿಕೊಳ್ಳುವುದು ಹಾಗೂ ಬೆಳಕಿಗೆ ಕಣ್ಣುಗಳನ್ನು ಒಡ್ಡಲು ಕಷ್ಟವಾಗುವುದು ಆಗಬಹುದು. 

ಕಾಂಜಂಕ್ಟಿವಿಟಿಸ್ ಸಮಸ್ಯೆಯು ಹೆಚ್ಚಾಗಿ ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕು ಅಥವಾ ಅಲರ್ಜಿಯಿಂದ ಉಂಟಾಗುತ್ತದೆ. ಆದರೆ ಇದರಿಂದ ದೃಷ್ಟಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸೂಕ್ತ ಚಿಕಿತ್ಸೆಯ ನಂತರ ಕಣ್ಣುಗಳು ಸಂಪೂರ್ಣವಾಗಿ ಗುಣಮುಖ ಹೊಂದುತ್ತವೆ. 

ಮದ್ರಾಸ್ ಐ ಸಮಸ್ಯೆ ಬೇಗನೆ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಇದು ಕಾಣಿಸಿದ ವ್ಯಕ್ತಿಯು ತಮ್ಮ ಕಣ್ಣನ್ನು ಮುಟ್ಟಿ ಅದೇ ಕೈಯಿಂದ ಬೇರೆ ಜಾಗವನ್ನು ಮುಟ್ಟಿದರೆ ಅಲ್ಲಿ ಸೋಂಕು ಉಳಿಯಬಹುದು. ಅದೇ ಜಾಗದಲ್ಲಿ ಅಥವಾ ಆ ವ್ಯಕ್ತಿ ಬಳಿಸಿದ ವಸ್ತುಗಳನ್ನು ಇನ್ನೊಬ್ಬ ವ್ಯಕ್ತಿ ಬಳಸುವುದರಿಂದ ಇದು ಹರಡುತ್ತದೆ. ಈ ಸೋಂಕು ಯಾವುದೇ ಮೇಲ್ಮೈಗಳಲ್ಲಿ ದೀರ್ಘಕಾಲದವರೆಗೆ ಇರುತ್ತದೆ. ಇದರಿಂದ ಬಳಲುತ್ತಿರುವ ವ್ಯಕ್ತಿಗಳು ತಾವು ಬಳಸಿದ ವಸ್ತುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಬೇಕು. 

ಈ ಬಗ್ಗೆ ಇನ್ನಷ್ಟು ಪ್ರಶ್ನೆಗಳು ನಮ್ಮಲ್ಲಿ  ಓಡುತ್ತಿರಬಹುದು. ಇದಕ್ಕಾಗಿ ವಿಶೇಷವಾಗಿ ಉತ್ತರಿಸಿದ್ದಾರೆ ಶಾರ​‍್್‌ ಸೈಟ್ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ. ವಿಜಯ್ ಮಾಥೂರ್‌. ಇವರು ಎಚ್‌ಟಿ ಡಿಜಿಟಲ್‌ಗೆ ನೀಡಿದ ಸಂದರ್ಶನ ಇಲ್ಲಿದೆ. 

ಸೋಂಕಿತರ ಕಣ್ಣನ್ನು ನೋಡುವುದರಿಂದ ನಮಗೂ ಮದ್ರಾಸ್ ಐ ಸಮಸ್ಯೆ ಬರಬಹುದೇ?:  

ಮದ್ರಾಸ್ ಐ ಸಮಸ್ಯೆ ಇರುವ ವ್ಯಕ್ತಿಯ ಕಣ್ಣುಗಳನ್ನು ದಿಟ್ಟಿಸಿ ನೋಡುವುದರಿಂದ ಇದು ಹರಡುತ್ತದೆ ಎಂಬುದು ಸಾಮಾನ್ಯ ತಪ್ಪು ಕಲ್ಪನೆ. ಇದು ಖಂಡಿತ ನಿಜವಲ್ಲ. ಸೋಂಕಿತ ವ್ಯಕ್ತಿಯ ಕಣ್ಣುಗಳಿಂದ ಸ್ರವಿಸುವ ದ್ರವದೊಂದಿಗೆ ನೇರ ಸಂಪರ್ಕ ಹೊಂದುವುದರಿಂದ ಮದ್ರಾಸ್ ಐ ಸಮಸ್ಯೆ ಹರಡುತ್ತದೆ. ಇದನ್ನು ಕಂಜಂಕ್ಟಿವಿಟಿಸ್ ಎಂದೂ ಕರೆಯುತ್ತಾರೆ. ಸುಮ್ಮನೆ ಸೋಂಕಿತರ ಕಣ್ಣುಗಳನ್ನು ದಿಟ್ಟಿಸಿ ನೋಡುವುದರಿಂದ ಈ ಸಮಸ್ಯೆ ಹರಡಲು ಸಾಧ್ಯವಿಲ್ಲ. ಎನ್ನುತ್ತಾರೆ ವೈದ್ಯರು. 

ಮದ್ರಾಸ್ ಐ ಸೋಂಕು ಗಾಳಿಯ ಮೂಲಕ ಹರಡುತ್ತದೆಯೇ? : 

ಇತ್ತೀಚಿನ ಅಧ್ಯಯನಗಳ ಪ್ರಕಾರ ಮದ್ರಾಸ್ ಐ ಸಮಸ್ಯೆಯು ಗಾಳಿಯ ಕಣಗಳ ಮೂಲಕ ಹರಡುತ್ತದೆ ಎಂಬುದನ್ನು ಸಾಬೀತು ಪಡಿಸಿದೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್ ಎದುರಿಗಿನ ವ್ಯಕ್ತಿಯ ದೇಹ ಅಥವಾ ಕಣ್ಣುಗಳನ್ನು ಸೇರುವ ಸಾಧ್ಯತೆ ಹೆಚ್ಚು. ಇದು ಸೋಂಕು ಹರಡಲು ಕಾರಣವಾಗಬಹುದು. ನೇರವಾಗಿ ಗಾಳಿಯ ಮೂಲಕ ಹರಡುವುದು ಪ್ರಾಥಮಿಕ ಹಂತ ಅಲ್ಲದೇ ಇದ್ದರೂ, ಇದನ್ನು ಕಡಿಮೆ ಮಾಡಲು ಫೇಸ್ ಮಾಸ್ಕ್‌ ಧರಿಸುವುದು, ಉಸಿರಾಟದ ನೈರ್ಮಲ್ಯವನ್ನು ಕಾಪಾಡುವುದು ಮುಖ್ಯವಾಗುತ್ತದೆ. 

ಮದ್ರಾಸ್ ಐ ಸಾಂಕ್ರಾಮಿಕವಾಗಲು ಕಾರಣ; ಅದು ಹೇಗೆ ಹರಡುತ್ತದೆ? :  

ಸೋಂಕಿತ ವ್ಯಕ್ತಿಯು ತನ್ನ ಕಣ್ಣನ್ನು ಮುಟ್ಟಿ ಅದೇ ಕೈಗಳಿಂದ ಮುಟ್ಟಿದ ಮೇಲ್ಮೈಗಳಲ್ಲಿ ಸೋಂಕು ಬಹಳಷ್ಟು ಹೊತ್ತು ಇರುತ್ತದೆ. ಅದೇ ಜಾಗದಲ್ಲಿ ಇನ್ನೊಬ್ಬ ವ್ಯಕ್ತಿ ಮುಟ್ಟಿ, ಮುಖ ಕಣ್ಣುಗಳನ್ನು ಮುಟ್ಟಿದರೆ ಸೋಂಕು ಹರಡಬಹುದು. ಸೋಂಕಿತ ವ್ಯಕ್ತಿಯ ಕಣ್ಣಿನಿಂದ ಸೋರಿಕೆಯಾದ ದ್ರವವು ನೇರವಾಗಿ ಅಥವಾ ಪರೋಕ್ಷವಾಗಿ ಇನ್ನೊಬ್ಬ ವ್ಯಕ್ತಿಗೆ ತಾಕುವುದು ಸೋಂಕು ಹರಡಲು ಮುಖ್ಯ ಕಾರಣವಾಗುತ್ತದೆ. ಬಾಗಿಲಿನ ಹಿಡಿ, ಟವಲ್‌ಗಳು, ಬೆಡ್‌ಶೀಟ್‌ಗಳು, ದಿಂಬು ಇಂತಹವುಗಳ ಮೇಲೆ ವೈರಸ್ ಹರಡುವ ಪ್ರಮಾಣ ಅಧಿಕ. ಇದು ಸುಲಭವಾಗಿ ಒಬ್ಬೊರಿಂದೊಬ್ಬರಿಗೆ ಹರಡಲು ಕಾರಣವಾಗುತ್ತದೆ. ಇದರೊಂದಿಗೆ ಜನನಿಬಿಡ ಪ್ರದೇಶ, ಸೋಂಕಿತ ವ್ಯಕ್ತಿಗೊಳೊಂದಿಗೆ ನಿಟಕ ಸಂಪರ್ಕ ಹೊಂದುವುದು ಕೂಡ ತ್ವರಿತವಾಗಿ ಸೋಂಕು ಹರಡಲು ಕಾರಣವಾಗುತ್ತದೆ. 

ಈ ಸಮಸ್ಯೆಯ ಆರಂಭಿಕ ಲಕ್ಷಣ ಯಾವುದು? ಇದರ ರೋಗ ಲಕ್ಷಣಗಳು 

ಕಣ್ಣಿನ ಜ್ವರ ಅಥವಾ ಮದ್ರಾಸ್ ಐನ ಆರಂಭಿಕ ಲಕ್ಷಣಗಳು ಎಂದರೆ ಕಣ್ಣು, ಕೆಂಪಾಗುವುದು, ತುರಿಕೆ, ಅತಿಯಾಗಿ ನೀರು ಸೋರುವುದು ಹಾಗೂ ಕಣ್ಣುಗಳಲ್ಲಿ ಚುಚ್ಚಿದಂತಹ ಅನುಭವ. ಈ ಸೋಂಕಿನ ಪ್ರಭಾವ ಹೆಚ್ಚಾದಂತೆ ಕಣ್ಣುಗಳನ್ನು ಬೆಳಕಿಗೆ ತೆರೆದುಕೊಳ್ಳುವುದು ಕಷ್ಟವಾಗಬಹುದು ಮತ್ತು ಕಣ್ಣುಗಳಲ್ಲಿ ಬಿಳಿ ಬಣ್ಣದ ಹಿಕ್ಕೆ ಸೋರಬಹುದು. ಇದರ ಪ್ರಮುಖ ಲಕ್ಷಣಗಳು ಎಂದರೆ ಕಣ್ಣುಗಳಲ್ಲಿ ಅತಿಯಾಗಿ ನೋವು ಕಾಣಿಸುವುದು, ದೃಷ್ಟಿ ಕಡಿಮೆಯಾಗುವುದು ಮತ್ತು ಕಾರ್ನಿಯಾದ ಸುತ್ತಲೂ ಕೆಂಪಾಗುವುದು ಅಥವಾ ಕಣ್ಣಿನ ಬಿಳಿ ಭಾಗ ಗುಲಾಬಿ ಬಣ್ಣಕ್ಕೆ ತಿರುಗುವುದು. 

ಮದ್ರಾಸ್ ಐ ಕಣ್ಣಿನ ಜ್ವರ ಸೋಂಕಿನ  ಹರಡುವಿಕೆಯನ್ನು ತಡೆಗಟ್ಟಲು ಕೆಳಗಿನ ಮುನ್ನೆಚ್ಚರಿಕಾ ಕ್ರಮ ಅನುಸರಿಸುವುದು ಅಗತ್ಯ 

1. ಮದ್ರಾಸ್ ಐ ಲಕ್ಷಣವಿದ್ದರೆ ಇತರರೊಂದಿಗೆ ನಿಕಟ ಸಂಪರ್ಕ ಹೊಂದುವುದನ್ನು ತಪ್ಪಿಸುವದು  

2. ಕೈಗಳನ್ನು ನಿರಂತರವಾಗಿ ಸೋಪು ಹಾಗೂ ನೀರಿನಿಂದ ತೊಳೆಯುವದು  

3. ವೈರಸ್  ಕಣ್ಣುಗಳನ್ನು ಪ್ರವೇಶಿಸುವುದನ್ನು ತಡೆಯಲು ಕಣ್ಣುಗಳನ್ನು ಆಗಾಗ ಮುಟ್ಟುತ್ತಿರುವುದು ಮತ್ತು ಉಜ್ಜುವುದನ್ನು ಮಾಡಬಾರದು  

4. ಟವೆಲ್, ದಿಂಬುಗಳು, ಕಣ್ಣಿನ ಮೇಕಪ್ ಸಾಮಗ್ರಿಗಳು ಹಾಗೂ ಕಾಂಟ್ಯಾಕ್ಟ್‌ ಲೆನ್ಸ್‌ಗಳಂತಹ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳಬಾರದು 

5. ಸೋಂಕು ನಿವಾರಣೆಯಾಗುವ ತನಕ ಕಾಂಟಾಕ್ಟ್‌ ಲೆನ್ಸ್‌ ಬದಲು ಕನ್ನಡಕ ಬಳಸುವದು  

6. ಹೆಚ್ಚು ಜನರಿರುವ ಪ್ರದೇಶದಲ್ಲಿ ಓಡಾಡುವಾಗ ಸೋಂಕು ಹರಡುವುದನ್ನು ತಪ್ಪಿಸಲು ಫೇಸ್ ಮಾಸ್ಕ್‌ ಬಳಸುವದು  

7. ಮದ್ರಾಸ್ ಐ ಲಕ್ಷಣಗಳಿದ್ದರೆ ಅಥವಾ ಸೋಂಕಿನ ಪ್ರಮಾಣ ಹೆಚ್ಚುವ ಸಾಧ್ಯತೆ ಕಂಡರೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯುವದು ಅಗತ್ಯವಿದೆ. 

- ರಾಘವೇಂದ್ರ ಪಾಲನಕರ  

ಗದಗ 

- * * * - 


ಸುದ್ದಿ ಓದಿ