ಮಾ. 5ರಂದು ರೇಣುಕಾಚಾರ್ಯರ ಜಯಂತಿ ಆಚರಿಸಲು ಒತ್ತಾಯ
ಬಳ್ಳಾರಿ ಫೆ 28: ರೇಣುಕಾಚಾರ್ಯರ ಜಯಂತಿಯನ್ನು ಮಾರ್ಚ್ 5ರಂದೇ ಆಚರಿಸಬೇಕೆಂದು ಜಿ. ಮಹಾಲಿಂಗಯ್ಯ ಅವರು ಆಗ್ರಹಿಸಿದರು.
ಪತ್ರಿಕೆ ಭವನದಲ್ಲಿ ವೀರಶೈವ ಲಿಂಗಾಯತ ಸಮಾಜ ಬಾಂಧವರ ವತಿಯಿಂದ ಏರಿ್ಡಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2022-23ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಆಚರಿಸಲಾಗುವ ಜಯಂತಿಗಳ ವಿವರ ಪಟ್ಟಿಯಲ್ಲಿ ರೇಣುಕಾಚಾರ್ಯರ ಜಯಂತಿ ದಿ.16.03.2023 ಎಂದು ಮುದ್ರಿತವಾಗಿದೆ. ಆದರೆ, ಆಪ್ತ ಕಾರ್ಯದರ್ಶಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರು ಹೊರಡಿಸಿರುವ ಆದೇಶದ ಮೇರೆಗೆ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ಪ್ರತಿವರ್ಷ ಪಾಲ್ಗುಣ ಶುದ್ಧ ತ್ರಯೋದಶಿ ದಿನದಂದು ಆಚರಿಸುವಂತೆ ಆದೇಶ ಮಾಡಿರುವ ಕಾರಣ ಆ ರೇಣುಕಾಚಾರ್ಯರ ಜಯಂತಿಯನ್ನು ಆಗುತ್ತದೆ. ಆದುದರಿಂದ ದಿ. 16.03.2023ರ ಬದಲಾಗಿ 05.03.2023ರಂದೇ ರೇಣುಕಾಚಾರ್ಯರ ಜಯಂತಿಯನ್ನು ಜಿಲ್ಲಾಡಳಿತದಿಂದ ಆಚರಿಸಲು ಬಳ್ಳಾರಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ನಂತರ ನಾವು ಪ್ರತಿ ವರ್ಷವೂ ಖಾಸಗಿಯಾಗಿ ಈ ಜಯಂತಿಯನ್ನು ಆಚರಣೆ ಮಾಡುತ್ತಿದ್ದೆವು. ಆದರೆ ಇದೇ ವರ್ಷ ಪ್ರಥಮ ಬಾರಿಗೆ ಸರ್ಕಾರ ವತಿಯಿಂದ ಆದೇಶ ಹೊರಡಿಸಲಾಗಿದೆ. ಸರ್ಕಾರವು ಎಲ್ಲಾ ಜಯಂತಿ ಉತ್ಸವಗಳನ್ನು ಮಾಡುತ್ತಾರೆ ಆದರೆ ಈ ಜಯಂತಿ ಯಾಕೆ ಮಾಡಬಾರದು ಎಂದು ಪ್ರಶಂಸಿದರು. ವೀರಶೈವ ಲಿಂಗಾಯತ ಸಮಾಜದವರು ಒಟ್ಟಾರೆಯಾಗಿ ಸೇರಿಕೊಂಡು ರೇಣುಕಾಚಾರ್ಯರ ಜಯಂತಿಯನ್ನು ಆಚರಿಸುತ್ತೇವೆ. ಪ್ರಸಿದ್ಧ ಸ್ಥಳಗಳಾದ ರಂಭಾಪುರಿ ಉಜ್ಜಯಿನಿ, ಕಾಶಿ, ಒಬ್ಬೊಬ್ಬ ಸಂತರು, ದಾರ್ಶನಿಕರು, ಜಗದ್ಗುರುಗಳು ಪಂಚಮಸಾಲಿ ಐದು ಜನ ಸಂಶೋಧಕ ವತಿಯಿಂದ ಒಪ್ಪಿಗೆ ನೀಡಿದೆ. ಅದೇ ರೀತಿಯಾಗಿ ಹೈದರಾಬಾದಿನಲ್ಲಿ ಕೂಲಿ ಪಾದಲ್ಲಿ ಅಲ್ಲಿ ದೀಕ್ಷೆ ತೆಗೆದುಕೊಂಡು ಮೊದಲನೇ ಬಾರಿಗೆ ಅಲ್ಲಿ ವೀರಶೈವ ಲಿಂಗಾಯತ ಉಗಮವಾಯಿತು. ಆದರೆ ಇನ್ನು ಹೆಚ್ಚಿನ ರೀತಿಯಲ್ಲಿ ವಿಷಯವಿದೆ ಎಂದು ಹೇಳಿದರು.ಆದುದರಿಂದ ರೇಣುಕಾಚಾರ್ಯರ ಜಯಂತಿಯನ್ನು ಮಾರ್ಚ್ 5ರಂದು ಆಚರಣೆ ಮಾಡಬೇಕೆಂದು ವೀರಶೈವ ಲಿಂಗಾಯತ ಸಮಾಜ ಮುಖಂಡ ಮಹಾಲಿಂಗಯ್ಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮೀನಳ್ಳಿ ಚಂದ್ರಶೇಖರ, ಎಸ್ ಎಂ ಪ್ರಕಾಶ, ಅಮರೇಶ, ಬಸನಗೌಡ, ವಿಘ್ನೇಶ, ಪಿ ಬಸವರಾಜ, ಸಮುದಾಯದ ಮುಖಂಡರು ಇತರರು ಭಾಗವಹಿಸಿದ್ದರು.