ಮಾ. 1ರಿಂದ ಜಿಲ್ಲಾ ಕನ್ನಡ ಪರಿಷತ್ ಸಾಹಿತ್ಯ ಸಮ್ಮೇಳನ
ಬಳ್ಳಾರಿ ಫೆ 22: ಅಖಂಡ ಬಳ್ಳಾರಿ ಜಿಲ್ಲೆಯ 22ನೆಯ ಜಿಲ್ಲಾ ಕನ್ನಡ ಪರಿಷತ್ ಸಾಹಿತ್ಯ ಸಮ್ಮೇಳನ ಮಾ.1 ಮತ್ತು 2 ರಂದು ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ನಿಷ್ಠಿರುದ್ರ್ಪ ತಿಳಿಸಿದರು.
ನಗರದ ಜಿಲ್ಲಾಧಿಕರಿಗಳ ಕಛೇರಿ ಆವಣದಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೊದಲ ದಿನ ಬೆಳಗ್ಗೆ 7.30ಕ್ಕೆ ಮೇಯರ್ ರಾಜೇಶ್ವರಿ ಅವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸುವರು. ನಂತರ ಬೆಳಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷ, ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಶಾಸಕ ಸೋಮಶೇಖರ ರೆಡ್ಡಿ ಮೆರವಣಿಗೆ ಚಾಲನೆ ನೀಡುವರು ಎಂದು ಅವರು ಮಾಹಿತಿ ನೀಡಿದರು.ಮೆರವಣಿಗೆ ಕಮ್ಮಾ ಭವನದಿಂದ ಗಡಗಿ ಚೆನ್ನಪ್ಪ ವೃತ್ತ, ಮೀನಾಕ್ಷಿ ವೃತ್ತ, ಕಾಳಮ್ಮ ವೃತ್ತ, ಬ್ರೂಸ್ ಪೇಟೆ ವೃತ್ತ, ತೇರು ಬೀದಿ, ಬಸವೇಶ್ವರ ವೃತ್ತ, ರೈಲು ನಿಲ್ದಾಣ ಮಾರ್ಗವಾಗಿ ರಾಘವ ಕಲಾಮಂದಿರ ತಲುಪಲಿದೆ . ಬೆಳಗ್ಗೆ 10.30ಕ್ಕೆ ಸಮ್ಮೇಳನದ ಉದ್ಘಾಟನೆ ನೆರವೇರಲಿದೆ. ಕಸಾಪ ರಾಜ್ಯಾಧ್ಯಕ್ಷ ಡಾ. ನಾಡೋಜ ಮಹೇಶ್ ಜೋಶಿ ಸಮ್ಮೇಳನ ಉದ್ಘಾಟಿಸುವರು.ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಬಸವ ಲಿಂಗ ಸ್ವಾಮಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅಧ್ಯಕ್ಷತೆ ವಹಿಸುವರು. ಶಾಸಕರಾದ ಸೋಮಶೇಖರ ರೆಡ್ಡಿ, ನಾಗೇಂದ್ರ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಿದ್ದಾರೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯ, ವಚನ ಸಾಹಿತ್ಯ, ಜನಪದ ಸಾಹಿತ್ಯ, ನಡೆದಾಡುವ ಸಾಹಿತ್ಯ, ಹೀಗೆ ಒಟ್ಟಾರೆಯಾಗಿ ಅಖಂಡ ಪರಿಷತ್ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು. ಅದೇ ರೀತಿಯಾಗಿ ಸಮ್ಮೇಳನದಲ್ಲಿ ಒಟ್ಟು 8 ಗೋಷ್ಠಿಗಳು ನಡೆಯಲಿವೆ. ಜಿಲ್ಲೆಯ ಸಾಹಿತ್ಯ ಸಾಂಸ್ಕೃತಿಕ ವೈಶಿಷ್ಠ್ಯಗಳು, ಕನ್ನಡ ಸಾಹಿತ್ಯ ಪ್ರಕಾರಗಳು, 2 ಕವಿಗೋಷ್ಠಿ, ಅಖಂಡ ಬಳ್ಳಾರಿ ಜಿಲ್ಲೆಯ ಜ್ವಲಂತ ಸಮಸ್ಯೆಗಳು, ಜಿಲ್ಲೆಯ ಸಾಹಿತ್ಯ ಸಾಂಸ್ಕೃತಿಕ ವೈಶಿಷ್ಟ್ಯಗಳು, ಮಾಧ್ಯಮ ಮತ್ತು ಕನ್ನಡ, ಕನ್ನಡ ಸಾಹಿತ್ಯ ಪರಂಪರೆ ಕುರಿತು ಗೋಷ್ಠಿಗಳು ನಡೆಯಲಿವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನಿಷ್ಠೆ ರುದ್ರ್ಪ, ಹಾಗೂ ಶಿವಲಿಂಗಪ್ಪ. ಬಸವರಾಜ. ಕೆ ವಿ ನಾಗರಾಜ. ಚಂದ್ರಶೇಖರ್ ಆಚಾರ್. ನಾಜೀರ್ ಬಾಷಾ.ಪ್ರಭು, ದೊಡ್ಡ ಬಸಪ್ಪ, ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.