ರಾಷ್ಟ್ರೀಯ

ಮುಂಬೈ; ಜನವರಿಯಲ್ಲಿ ಸಬ್ ಅರ್ಬನ್ ರೈಲು ಸಂಚಾರ ಆರಂಭ

ಮುಂಬೈ; ಜನವರಿಯಲ್ಲಿ ಸಬ್ ಅರ್ಬನ್ ರೈಲು ಸಂಚಾರ ಆರಂಭ

ಮುಂಬೈ (ಮಹಾರಾಷ್ಟ್ರ): ಡಿ 16:ದೇಶದ ವಾಣಿಜ್ಯ ನಗರಿ ಮುಂಬಯಿನಲ್ಲಿ  ಉಪ ನಗರ ರೈಲು ಸೇವೆಗಳನ್ನು ಜನವರಿ ಮೊದಲ ವಾರದಲ್ಲಿ ಪುನರಾರಂಭಿಸಲಾಗುವುದು ಎಂದು ಮಹಾರಾಷ್ಟ್ರ ಪುನರ್ವಸತಿ ಸಚಿವ ವಿಜಯ್ ವಾಡೆಟಿವಾರ್ ಹೇಳಿದ್ದಾರೆ. ಮುಂಬೈ ನಗರದಲ್ಲಿ   ಸಬ್ ಅರ್ಬನ್  ರೈಲುಗಳ ಓಡಾಟ  ಪುನರಾಂಭಿಸುವ ಸಂಬಂಧ ಮಹಾರಾಷ್ಟ್ರ ಸರ್ಕಾರ,  ರೈಲ್ವೆ ಸಚಿವಾಲಯದೊಂದಿಗೆ ಚರ್ಚೆ ನಡೆಸಿದೆ, ಇದು ಅಂತಿಮ ಹಂತದಲ್ಲಿದೆ  ಎಂದು  ಅವರು ಹೇಳಿದ್ದಾರೆ. "ಪ್ರಯಾಣಿಕರಿಗಾಗಿ ಸಬ್ ಅರ್ಬನ್  ರೈಲುಗಳನ್ನು ಓಡಿಸುವಂತೆ  ರೈಲ್ವೆ ಸಚಿವಾಲಯಕ್ಕೆ ನಾವು  ಪತ್ರ ಬರೆದಿದ್ದೇವೆ.. ಮುಂದಿನ ವರ್ಷ ಜನವರಿ ಆರಂಭದಿಂದ ಸಬ್ ಅರ್ಬನ್ ರೈಲು ಸಂಚಾರ ಆರಂಭವಾಗುವ ಸಾಧ್ಯತೆಯಿದೆ ಎಂದು  ಸಚಿವ ವಾಡೆಟಿವಾರ್  ಹೇಳಿದ್ದಾರೆ. ಪ್ರಸ್ತುತ ಉಪ ನಗರ ರೈಲುಗಳಲ್ಲಿ ತುರ್ತು ಸೇವಾ ಸಿಬ್ಬಂದಿ, ಮಹಿಳೆಯರು  ಸೇರಿದಂತೆ ಆಯ್ದ ಪ್ರಯಾಣಿಕರಿಗೆ ಮಾತ್ರ  ಪ್ರಯಾಣಿಸಲು  ಅನುಮತಿಸಲಾಗಿದೆ. ಮುಂಬೈನ  ಜೀವ ವಾಹಿನಿ ಎಂದೇ  ಕರೆಯುವ ಸಬ್ ಅರ್ಬನ್  ನೆಟ್ ವರ್ಕ್  ಕೊರೊನಾ ವೈರಸ್   ಹರಡುವುದಕ್ಕೂಮೊದಲು   ನಿತ್ಯ  70 ಲಕ್ಷ  ಮಂದಿ ಪ್ರಯಾಣಿಕರು ಸಂಚರಿಸುತ್ತಿದ್ದರು. ಕೊರೊನಾ  ಲಾಕ್ ಡೌನ್  ನಂತರ  ಕಳೆದ ಮಾರ್ಚ್  ನಿಂದ  ಉಪ ನಗರ ರೈಲುಗಳ   ಸಂಚಾರ ಸ್ಥಗಿತಗೊಳಿಸಲಾಗಿದೆ.

ಸುದ್ದಿ ಓದಿ