ಸೇನೆಯ ಸೇವೆ ಮುಗಿಸಿ ಮನೆಗೆ ಮರಳಿದ ಎಂ ಎಸ್ ಧೋನಿ
ಲೇಹ್, ಆಗಸ್ಟ್ 17 ಪ್ಯಾರಾ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸಲು ತೆರಳಿದ್ದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ .... ಅದನ್ನು ಯಶಸ್ವಿಯಾಗಿ ಪೂರೈಸಿ ವಾಪಸ್ಸು ಬಂದಿದ್ದಾರೆ.
ದೆಹಲಿಗೆ ತೆರಳುವ ಸಂದರ್ಭದಲ್ಲಿ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಹೊಂದಿರುವ ಧೋನಿ, ಲಡಾಖ್ನ ಲೇಹ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಧೋನಿ ಭಾರತೀಯ ಸೇನೆಯ 106 ಟಿಎ ಪ್ಯಾರಾ ಬೆಟಾಲಿಯನ್ ನಲ್ಲಿ 15 ದಿನಗಳ ಕಾಲ ಸೇವೆ ಸಲ್ಲಿಸಿದರು. ಜುಲೈ 30ರಿಂದ ಸೇನಾ ಬೆಟಾಲಿಯನ್ ತರಬೇತಿ ಪಡೆಯುವ ಮೂಲಕ ಅಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಕಾಶ್ಮೀರ ಕಣಿವೆಯಲ್ಲಿ ಸೈನಿಕರೊಂದಿಗೆ ಪಹರೆ, ಕಾವಲು ಮತ್ತು ಹೊರ ಠಾಣೆಗಳ ಕಾವಲು ಕರ್ತವ್ಯಗಳನ್ನು ನಿರ್ವಹಿಸಿದ್ದರು. ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕ್ಟರ್ ಫೋರ್ಸ್ನ್ಲ್ಲಿಯೂ ಧೋನಿ ಸೇವೆ ಸಲ್ಲಿಸಿದ್ದರು. ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಹೊಂದಿರುವ ಧೋನಿ, ಯೋಧರೊಂದಿಗೆ ಕೆಲಕಾಲ ಕರ್ತವ್ಯ ನಿರ್ವಹಿಸಲು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳದೆ ಭಾರತೀಯ ತಂಡದಿಂದ ದೂರ ಉಳಿದಿದ್ದಾರೆ.
ಧೋನಿ ಮೊದಲ ಬಾರಿಗೆ 2015 ರಲ್ಲಿ ಆಗ್ರಾದಲ್ಲಿ ಸೇನಾ ಪ್ಯಾರಾ ಟ್ರೂಪರ್ ಆಗಿ ಒಂದು ತಿಂಗಳು ತರಬೇತಿ ಪಡೆದಿದ್ದರು. ವಿಮಾನಗಳಿಂದ ಪ್ಯಾರಾಚೂಟ್ ಮೂಲಕ ಕೆಳಗೆ ದುಮುಕುವಂತಹ ಕಠಿಣ ತರಬೇತಿಯನ್ನು ಪಡೆದುಕೊಂಡಿದ್ದರು. 1, 250 ಅಡಿ ಎತ್ತರದಲ್ಲಿರುವ ಎಎನ್ 32 ಸೇನಾ ವಿಮಾನದಿಂದ ಜಿಗಿದು ಸುರಕ್ಷಿತವಾಗಿ ನೆಲಕ್ಕೆ ಇಳಿದಿದ್ದ ಅವರು ಪ್ಯಾರಾಟ್ರೂಪರ್ ಆಗಿ ಅರ್ಹತೆ ಪಡೆದುಕೊಂಡವರಾಗಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 