ಅನ್ನದಾತರ ಹಿತ ಕಾಪಾಡಲು ಸದಾಸಿದ್ಧ: ಸಂಸದ ಜೊಲ್ಲೆ.
ಚಿಕ್ಕೋಡಿ 07: ರೈತರು ದೇಶದ ಬೆನ್ನೆಲಬು ಆಗಿದ್ದಾನೆ.ರೈತರ ಹಿತಕ್ಕಾಗಿ ಪ್ರಧಾನಿ ಮೋದಿಯವರು ವಿವಿಧ ಯೋಜನೆಗಳನ್ನು ರೂಪಿಸಿ ಅವರ ಆರ್ಥಿಕ ಪ್ರಗತಿಗೆ ನಾಂದಿಹಾಡಿದ್ದಾರೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಬುಧುವಾರ ನಿಪ್ಪಾಣಿ ತಾಲೂಕಿನ ಭಿವಶಿ ಗ್ರಾಮದಲ್ಲಿ ರೆೃತ ಮೋರ್ಚಾದ ಪಧಾದಿಕಾರಿಗಳೊಂದಿಗೆ ಸಭೆ ನಡೆಸಿ ಅನ್ನದಾತರ ಸಮಸ್ಯೆಗಳನ್ನು ಆಲಿಸಿದ ಬಳಿಕ ನೂತನ ಕೃಷಿ ಕಾಯ್ದೆಗಳ ಬಗ್ಗೆ ರೆೃತರಿಗೆ ಮಾಹಿತಿ ನೀಡಿದರು. ಕಿಸಾನ ಸಮ್ಮಾನ ಯೋಜನೆ,ಪ್ರದಾನ ಮಂತ್ರಿ ಭೀಮಾ ಯೋಜನೆ, ಪಿ.ಎಂ.ಕಿಸಾನ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಅನುಷ್ಠಾನಗೋಳಿಸಿದ್ದಾರೆ. ಪ್ರತಿ ರೈತರ ಖಾತೆಗೆ ವಿಶೇಷ ಅನುದಾನ ನೀಡಿ ಅವರ ಸಂಕಷ್ಟ ಸಮಯದಲ್ಲಿ ಪ್ರಧಾನಿಯವರು ನೇರವು ನೀಡಿದ್ದಾರೆ. ಇಂತಹ ಅನ್ನದಾತರ ಹಿತ ಕಾಪಾಡಲು ನಾವು ಸದಾಸಿದ್ದ ಎಂದರು.
ರೆೃತ ಮೋರ್ಚಾದ ಉಪಾಧ್ಯಕ್ಷ ದುಂಡಪ್ಪಾ ಬೆಂಡವಾಡೆ, ಜಿಲ್ಲಾ ಪ್ರದಾಣ ಕಾರ್ಯದರ್ಶಿ ಮಹಾವೀರ ನಾಶಿಪುಡಿ, ಹಣಮಂತ ಇನಾಮದಾರ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಪವನ ಪಾಟೀಲ, ಕಿರಣ ಮಾನೆ, ಹಾಗೂ ರೆೃತ ಮುಖಂಡರು ಉಪಸ್ಥಿತರಿದ್ದರು.