ಬಳ್ಳಾರಿ

ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಸಂಸದ ದೇವೇಂದ್ರ​ಪ್ಪ ತಾಕೀತು

ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಸಂಸದ ದೇವೇಂದ್ರ​ಪ್ಪ ತಾಕೀತು

ಬಳ್ಳಾರಿ 06: ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮತ್ತು ಜವಾಬ್ದಾರಿಯುತವಾಗಿ ಕರ್ತವ್ಯನಿರ್ವಹಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು;ಅಂದಾಗ ಮಾತ್ರ ಸರಕಾರಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ ಎಂದು ಸಂಸದ ವೈ.ದೇವೇಂದ್ರ​‍್ಪ ಅವರು ಹೇಳಿದರು. 


ಬಳ್ಳಾರಿ ಜಿಪಂ ವತಿಯಿಂದ ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ದಿಶಾ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಯೋಜನೆಗಳನ್ನು ತಲುಪುವಂತ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಹೇಳಿದ ಸಂಸದ ವೈ.ದೇವೇಂದ್ರ​‍್ಪ ಅವರು ಏನಾದ್ರೂ ಕೇಳಿದ್ರೇ ಹೊಸದಾಗಿ ಬಂದಿದ್ದೇನೆ ಎನ್ಬೇಡಿ;ಸಭೆಯಲ್ಲಿ ಕೇಳಿದ್ದಕ್ಕೆ ಸಮರ​‍್ಕ ಮಾಹಿತಿ ಕೊಡುವ ಕೆಲಸ ಮಾಡಿ ಎಂದು ಹೇಳಿದರು. 


ಕೋವಿಡ್‌ನಲ್ಲಿ ಸಾವನ್ನಪ್ಪಿದವರ ಕುಟುಂಬದವರಿಗೆ ಸರಕಾರದ ವಿವಿಧ ಇಲಾಖೆಗಳಡಿ ಹೊರಗುತ್ತಿಗೆ ಅಡಿ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಆದ್ಯತೆ ನೀಡುವ ಮೂಲಕ ಆ ಕುಟುಂಬಗಳಿಗೆ ನೆರವಾಗುವ ಕೆಲಸವನ್ನು ಸರಕಾರ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟ ಸಂಸದ ವೈ.ದೇವೇಂದ್ರ​‍್ಪ ಅವರು ಈ ನಿಟ್ಟಿನಲ್ಲಿ ಸರಕಾರಕ್ಕೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 


ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿಕೇಂದ್ರಗಳಿಗೆ ಸಮೀಕ್ಷೆ ನಡೆಸಿ ಡೆಮಾಲಿಷ್‌: ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 1266 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು,ಅವುಗಳಲ್ಲಿ ಸ್ವಂತ-911, 283 ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 76 ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ.ನಿವೇಶನ ಲಭ್ಯವಿರುವ 58 ಕೇಂದ್ರಗಳಿಗೆ ಕಟ್ಟಡ ನಿರ್ಮಾಣ ಮಂಜೂರಾತಿಗಾಗಿ ಡಿಎಂಎಫ್ ಮತ್ತು ಕೆಕೆಆರ್‌ಡಿಬಿ ಯೋಜನೆ ಅಡಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ ಅವರು ಸಂಸದರಿಗೆ ವಿವರಿಸಿದರು. 


ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಮತ್ತು ಬಳಸಲು ಆಗದಂತ ಅಂಗನವಾಡಿ ಕೇಂದ್ರಗಳ ಸಮೀಕ್ಷೆ ನಡೆಸಲಾಗುವುದು ಮತ್ತು ಲೋಕೋಪಯೋಗಿ ಇಲಾಖೆಯಿಂದ ಫಿಟ್ನೇಸ್ ಸರ್ಟಿಫಿಕೆಟ್ ಪಡೆದುಕೊಂಡು ಅವುಗಳನ್ನು ಡೆಮಾಲಿಷ್ ಮಾಡಿ;ಹೊಸದಾಗಿ ನಿರ್ಮಿಸುವಂತೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಂಸದರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ನಗರ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಸಮಸ್ಯೆ ಇರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. 


ಮೋಕಾ ಬಳಿ 800ಎಂಎಲ್ ಸಾಮರ್ಥ್ಯದ ಕೆರೆ ನಿರ್ಮಾಣ: ತನಿಖೆಗೆ ಸಮಿತಿ ರಚನೆ: ಅಮೃತ್ ಯೋಜನೆ ಅಡಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬಳ್ಳಾರಿ ಸಮೀಪದ ಮೋಕಾ ಬಳಿ 800 ಎಂ.ಎಲ್ ಸಾಮರ್ಥ್ಯದ ಕೆರೆ ನಿರ್ಮಾಣ ನಿಗದಿಪಡಿಸಿದಷ್ಟು ಗುಣಮಟ್ಟದಾಗಿಲ್ಲ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸಂಸದ ವೈ.ದೇವೇಂದ್ರ​‍್ಪ ಅವರು ಈ ಕುರಿತ ತನಿಖೆಗೆ ಸಮಿತಿ ರಚಿಸಿ ಒಂದೂವರೆ ತಿಂಗಳಲ್ಲಿ ವರದಿ ನಿಡುವಂತೆ ಸೂಚನೆ ನೀಡಿದರು. 

ಮಹಾನಗರ ಪಾಲಿಕೆ ಆಯುಕ್ತರು ನೇತೃತ್ವದಲ್ಲಿ ನೀರಾವರಿ,ಲೋಕೋಪಯೋಗಿ ಎಂಜನಿಯರ್‌ಗಳು,ಜಿಪಂ ಅಧಿಕಾರಿಗಳು ಒಳಗೊಂಡಂತೆ ವಿವಿಧ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ತನಿಖೆ ನಡೆಸಿ ವರದಿ ನೀಡಿ ಎಂದು ಅವರು ಸೂಚಿಸಿದರು. 


ಮನೆಗಳು ಬ್ಲಾಕ್ ಆಗದಂತೆ ನೋಡಿಕೊಳ್ಳಿ: ಮನೆ/ನಿವೇಶನ ರಹಿತರಿಗೆ ಸೂರು ಒದಗಿಸಿ ಅವರ ಜೀವನದಲ್ಲಿ ನೆಮ್ಮದಿಯಿಂದ ಇರಲಿ ಎಂಬುವ ಸದುದ್ದೇಶದಿಂದಲೇ ಸರಕಾರ ವಿವಿಧ ಯೋಜನೆಗಳಡಿ ಮನೆಗಳನ್ನು ನಿರ್ಮಿಸಿಕೊಡುವ ಕೆಲಸ ಮಾಡುತ್ತಿದೆ; ಅನಿವಾರ್ಯ ಹಾಗೂ ವಿವಿಧ ಕಾರಣಗಳಿಂದ ಆಯ್ಕೆಯಾದ ಫಲಾನುಭವಿಗಳು ನಿಗದಿಪಡಿಸಿದ ಅವಧಿಯೊಳಗೆ ಮನೆನಿರ್ಮಿಸಿಕೊಳ್ಳದಿದ್ದಲ್ಲಿ ಬ್ಲಾಕ್ ಆಗುತ್ತವೆ; ಅದೇ ರೀತಿ ಜಿಲ್ಲೆಯಲ್ಲಿಯೂ ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾಮೀಣ)ಯಡಿ  

2016-17ರಿಂದ 2019-20ನೇ ಸಾಲಿನವರೆಗೆ 586 ಮನೆಗಳು ಬ್ಲಾಕ್ ಆಗಿರುವುದು ಅತ್ಯಂತ ಕಳವಳಕಾರಿ ಎಂದು ಸಂಸದ ವೈ.ದೇವೇಂದ್ರ​‍್ಪ ಅವರು ಹೇಳಿದರು. 



ಕೋವಿಡ್ ವ್ಯಾಕ್ಸಿನೇಷನ್ ಶೇ.109ರಷ್ಟು ಪ್ರಗತಿ: ಜಿಲ್ಲೆಯಲ್ಲಿ ಕೋವಿಡ್‌ನಿಂದ ಮರಣವನ್ನಿಪ್ಪಿದವರಿಗೆ ನಿಯಮಾನುಸಾರ ಪರಿಹಾರ ಒದಗಿಸಿ ಮತ್ತು ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಿ ಎಂದು ಸಂಸದ ವೈ.ದೇವೇಂದ್ರ​‍್ಪ ಅವರು ಹೇಳಿದರು. 


ಬಳ್ಳಾರಿ ಜಿಲ್ಲೆಗೆ ಒಟ್ಟು 10,14,074 - 18 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗ ಗುರಿ ನಿಗಧಿಯಾಗಿದ್ದು, 11,09,741 ಗುರಿ ಸಾಧಿಸಿ ಶೇ.109 ರಷ್ಟು ಮೊದಲನೇ ಡೋಸ್ ಪ್ರಗತಿಯನ್ನು ಸಾಧಿಸಲಾಗಿದ್ದು, 02 ನೇ ಡೋಸ್ ವ್ಯಾಕ್ಸಿನೇಷನ್ ಗೆ ಸಂಬಂಧಿಸಿದಂತೆ ಒಟ್ಟು 1110718 ವ್ಯಾಕ್ಸಿನೇಶನ್ ಮಾಡುವುದರ ಮೂಲಕ ಶೇ.109 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ನಂತರ ಬೂಸ್ಟರ್ ಡೋಸ್‌ಗೆ ಸಂಬಂಧಿಸಿದಂತೆ ಒಟ್ಟು 1,03,972 ರಷ್ಟು ಗುರಿ ಸಾಧಿಸಿ ಶೇ 11.06ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ನಂತರ ಒಟ್ಟು 66,435, 60 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಬೂಸ್ಟರ್ ಡೋಸ್ ವ್ಯಾಕ್ಸಿನೇಷನ್ ಗುರಿ ಸಾಧಿಸಿದ್ದು, ಶೇ.56.3 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಡಿಎಚ್‌ಒ ಡಾ. ಜನಾರ್ಧನ್ ಅವರು ತಿಳಿಸಿದರು. 

12 ರಿಂದ 14 ವರ್ಷದ ಮಕ್ಕಳ ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆ 66,150, ಮಕ್ಕಳ ಗುರಿ ಇದ್ದು ಅದರಲ್ಲಿ 57,326 ಗುರಿ ಸಾಧಿಸಿ ಶೇ.101 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. 02 ನೇ ಡೋಸ್ ವ್ಯಾಕ್ಸಿನೇಷನ್ ಗೆ ಸಂಬಂಧಿಸಿದಂತೆ ಒಟ್ಟು 58,795 ಗುರಿ ಸಾಧಿಸಿದ್ದು, ಶೇ.88.05 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದರು. 

15 ರಿಂದ 17 ವರ್ಷದೊಳಗಿನ 83,478 ಮಕ್ಕಳಿಗೆ ವ್ಯಾಕ್ಸಿನೇಶಷನ್ ನೀಡುವ ಗುರಿ ಇದ್ದು, ಅದರಲ್ಲಿ 79,626 ಗುರಿ ಸಾಧಿಸಿ ಶೇ.95.4 ರಷ್ಟು ಪ್ರಗತಿ ಸಾಧಿಸಲಾಗಿದೆ. 02 ನೇ ಡೋಸ್ ವ್ಯಾಕ್ಸಿನೇಷನ್ ಗೆ ಸಂಬಂಧಿಸಿದಂತೆ 73,988 ಗುರಿ ಸಾಧಿಸಿದ್ದು, ಶೇ.88.06 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. 

ಕೋವಿಡ್‌-19 ಪರಿಹಾರ ಮೊತ್ತಕ್ಕೆ ಸಂಬಂಧಿಸಿದಂತ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪರಿಹಾರ ಪೋರ್ಟ್‌ಲ್‌ನಲ್ಲಿ ನೊಂದಣಿಯಾದ ಕೋವಿಡ್ ಮರಣ ಪ್ರಕರಣಗಳಾದ 892 ಪ್ರಕರಣಗಳಿಗೆ ಪರಿಹಾರ ವಿತರಿಸಲಾಗಿದೆ. ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೋವಿಡ್‌ನಿಂದ ಮರಣ ಹೊಂದಿದವರಿಗೆ ಮಿಸ್ಡ್‌ ಕೋವಿಡ್‌-19 ಡೆತ್ ತಜ್ಞರ ಸಮಿತಿಯ ಪರೀಶೀಲನಾ ಅಭಿಪ್ರಾಯದಂತೆ ಒಟ್ಟು 848 ಪ್ರಕರಣಗಳಿಗೆ ಪರಿಹಾರ ವಿತರಿಸಲಾಗಿದೆ ಎಂದು ಅವರು ಸಭೆಗೆ ವಿವರಿಸಿದರು. 


ರಸಗೊಬ್ಬರ ಸಮರ​‍್ಕ ಸರಬರಾಜು: ಜಿಲ್ಲೆಯಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿಗೆ ರಸಗೊಬ್ಬರ ಬೇಡಿಕೆ 1,22,736 ಮೆಟ್ರಿಕ್ ಟನ್‌ಗಳು ನಿಗದಿಯಾಗಿದ್ದು,ಅದರಂತೆ ಆಗಸ್ಟ್‌ ಮಾಹೆಯಲ್ಲಿ 95,062 ಮೆಟ್ರಿಕ್ ಟನ್ ಬೇಡಿಕೆ ನಿಗದಿಯಾಗಿದ್ದು,ಇಲ್ಲಿಯವರೆಗೆ 1,00,589 ಮೆಟ್ರಿಕ್ ಟನ್ ವಿತರಣೆಯಾಗಿದೆ. ಉಳಿಕೆ 28,265.2 ಮೆಟ್ರಿಕ್ ಟನ್ ದಾಸ್ತಾನಿದೆ. ರಸಗೊಬ್ಬರ ಜಿಲ್ಲೆಗೆ ಬೇಡಿಕೆಗನುಗುಣವಾಗಿ ಸಮರ​‍್ಕವಾಗಿ ಸರಬರಾಜು ಆಗುತ್ತಿದ್ದು, ಯಾವುದೇ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸಭೆಗೆ ತಿಳಿಸಿದರು. 


ನರೇಗಾ ಶೇ.103.4ರಷ್ಟು ಸಾಧನೆ: 2022-23ನೇ ಸಾಲಿನಲ್ಲಿ  ನರೇಗಾ ಯೋಜನೆ ಅಡಿ 45ಲಕ್ಷ ಮಾನವ ದಿನಗಳ ಸೃಜನೆ ಗುರಿ ನೀಡಲಾಗಿತ್ತು;ಇದುವರೆಗೆ 46.37ಲಕ್ಷ ಮಾನವ ದಿನಗಳ ಸೃಜನೆ ಮಾಡುವುದರ ಮೂಲಕ ಶೇ.103.04ರಷ್ಟು ಸಾಧನೆ ಮಾಡಲಾಗಿದೆ ಎಂದು ಸಭೆಗೆ ಜಿಪಂ ಅಧಿಕಾರಿಯೊಬ್ಬರು ವಿವರಿಸಿದರು. ಜಿಲ್ಲೆಯಲ್ಲಿ 1.70ಲಕ್ಷ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದ್ದು,1.18ಲಕ್ಷ ಉದ್ಯೋಗ ಚೀಟಿಗಳು ಕ್ರಿಯಾಶೀಲವಾಗಿವೆ.1600 ಕುಟುಂಬಗಳು 100 ದಿನಗಳ ಉದ್ಯೋಗ ಪೂರೈಸಿವೆ ಎಂದು ವಿವರಿಸಿದ ಅವರು ಅದರಲ್ಲಿ ಶೇ.53.51ರಷ್ಟು ಮಹಿಳೆಯರು,ಶೇ.20.55 ಪರಿಶಿಷ್ಟ ಜಾತಿ ಮತ್ತು ಶೇ.29.90 ಪರಿಶಿಷ್ಟ ಪಂಗಡದವರು ಭಾಗವಹಿಸಿದ್ದಾರೆ ಎಂದರು. 


ಜಲಜೀವನ್ ಮಿಶನ್ ಯೋಜನೆಯ ಪ್ರಗತಿಯನ್ನು ಪರೀಶೀಲಿಸಿದ ಸಂಸದರು ಅಗತ್ಯ ಸಲಹೆ-ಸೂಚನೆಗಳನ್ನು ಇದೇ ಸಂದರ್ಭದಲ್ಲಿ ನೀಡಿದರು. 

ಕೇಂದ್ರ ಸರಕಾರದ ವಿವಿಧ ಯೋಜನೆಗಳ ಪ್ರಗತಿಯನ್ನು ಇದೇ ಸಂದರ್ಭದಲ್ಲಿ ಪರೀಶೀಲಿಸಿ ಅಗತ್ಯ ಸಲಹೆ-ಸೂಚನೆಗಳನ್ನು ಸಂಸದ ವೈ.ದೇವೇಂದ್ರ​‍್ಪ ಅವರು ನೀಡಿದರು. 


ಈ ಸಂದರ್ಭದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಜಿ.ಲಿಂಗಮೂರ್ತಿ,ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ,ಬಳ್ಳಾರಿ ಸಹಾಯಕ ಆಯುಕ್ತರಾದ ಡಾ.ಆಕಾಶ ಶಂಕರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು. 


ಸುದ್ದಿ ಓದಿ