ಸವದತ್ತಿ ಮತಕ್ಷೇತ್ರದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ
ಯರಗಟ್ಟಿ 29 : ಮತಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗಾಗಿ ಸರ್ಕಾರದಿಂದ ಸಾಕಷ್ಟು ಹಣ ಮಂಜೂರಾಗಿದ್ದು ಅಧಿಕಾರಿಗಳು ಗುತ್ತಿಗೆದಾರರು ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಸೂಚಿಸಿದರು. ಅವರು ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ರವಿವಾರ ?5 ಕೋಟಿ ರೂ ವೆಚ್ಚದ ಹೆದ್ದಾರಿ-83ರ ಮುನವಳ್ಳಿ-ನಂದಿಹಾಳ ಮಾರ್ಗದ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ಸ್ಥಳೀಯರು ತಮ್ಮ ರಸ್ತೆಗಳು ಮಂಜೂರಾದಾಗ ಅವುಗಳು ಗುಣಮಟ್ಟದ ಕಾಮಗಾರಿ ಆಗುವಂತೆ ನಿಗಾ ವಹಿಸಬೇಕು ಅಂದಾಗ ಮಾತ್ರ ಗುಣಮಟ್ಟದ ಕಾಮಗಾರಿ ಆಗಲು ಸಾಧ್ಯ ಎಂದು ಹೇಳಿದರು. ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಗುತ್ತಿಗೆದಾರ ಬಿ. ಎಸ್. ಪಾಟೀಲ, ಮಾಜಿ ತಾ. ಪಂ. ಸದಸ್ಯ ರುದ್ರ್ಪ ರೇವಣ್ಣವರ, ಸ್ಥಳೀಯ ಮುಖಂಡರಾದ ಶ್ರೀಶೈಲ ಕುಸಲಿ, ಭೀಮಪ್ಪ ಹೊನಕುಪ್ಪಿ, ಮಹಾಂತೇಶ ಬಿಷ್ಠನ್ನವರ, ಬಸಪ್ಪ ಮರಚಪ್ಪನವರ, ಅಜ್ಜಪ್ಪ ಕುಸಲಿ, ಚನ್ನಬಸು ವೀರಶೆಟ್ಟಿ, ಈರ್ಪ ಬಿಷ್ಠಣ್ಣವರ, ರುದ್ರ್ಪ ರೇವಣ್ಣವರ ಸೇರಿದಂತೆ ಅನೇಕರು ಇದ್ದರು.