ಬಳ್ಳಾರಿ

ಉಚಿತ ಆಂಬುಲೆನ್ಸ್‌ಗೆ ಶಾಸಕ ಸೋಮಶೇಖರ ರೆಡ್ಡಿ ಚಾಲನೆ

ಉಚಿತ ಆಂಬುಲೆನ್ಸ್‌ಗೆ  ಶಾಸಕ ಸೋಮಶೇಖರ ರೆಡ್ಡಿ ಚಾಲನೆ

ಬಳ್ಳಾರಿ 29: ಕೋವಿಡ್ -19 ಮಹಾಮಾರಿಯಿಂದ ರಾಜ್ಯದ ಜನತೆ ಕಷ್ಟಪಡುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಯಡಿಯೂರ​‍್ಪನವರು ಎಂ.ವೈ. ಸೇವೆ ತಂಡದ ವತಿಯಿಂದ ಒದಗಿಸಲಾದ ಉಚಿತ ಆಂಬುಲೆನ್ಸ್‌ಗೆ ದಿ. 29ರಂದು ಬಿಜೆಪಿ ಕಚೇರಿ ಎಸ್ಪಿ ಸರ್ಕಲ್‌ನಲ್ಲಿ ಬಳ್ಳಾರಿ ನಗರ  ಶಾಸಕ ಸೋಮಶೇಖರ ರೆಡ್ಡಿ ಅವರು ಚಾಲನೆ ನೀಡಿದರು.  

ಈ ಹಿಂದೆಯೂ ಸಹ ಉಚಿತ ಓಷಧಿ ವಿತರಣೆಯನ್ನು ಜಿಲ್ಲಾದ್ಯಂತ ವಿತರಿಸಲಾಗಿತ್ತು. ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಗುರುಲಿಂಗನಗೌಡ, ಸಫಾಯಿ ಕರ್ಮಚಾರಿ ನಿಗಮ ಮಂಡಳಿ ಅಧ್ಯಕ್ಷರಾದ ಹೆಚ್‌.ಹನುಮಂತಪ್ಪ, ಕೆಎಂಎಫ್ ನಿರ್ದೇಶಕರಾದ ವೀರಶೇಖರರೆಡ್ಡಿ, ಬಳ್ಳಾರಿ ನಗರ ಅಧ್ಯಕ್ಷರಾದ ಕೆ.ಬಿ.ವೆಂಕಟೇಶ್ವರ, ನಗರ ಪ್ರಧಾನ ಕಾರ್ಯದರ್ಶಿಗಳಾದ ರಾಮಾಂಜಿ, ಬಳ್ಳಾರಿ ನಗರ ಬಿಜೆಪಿ ಮಾಧ್ಯಮ ಸಂಚಾಲಕರಾದ ರಾಜೀವ್, ಮಾಜಿ ಕಾರ​‍್ೊರೇಟರ್ ಕಿಟ್ಟಿ, ಯುವ ಮೋರ್ಚಾ ಅಧ್ಯಕ್ಷರಾದ ಅರುಣ್ ಬಾಲಚಂದ್ರ, ಕೃಷ್ಣಾರೆಡ್ಡಿ, ಜೀವನ್‌ಕೃಷ್ಣಾ, ಮೋಹನ್, ಕುಮಾರಸ್ವಾಮಿ ಹಾಗೂ ಬಿಜೆಪಿಯ ಹಿರಿಯರು, ಮುಖಂಡರು ಉಪಸ್ಥಿತರಿದ್ದರು. ಉಚಿತ ಆ್ಯಂಬುಲೆನ್ಸ್‌ ಸೇವೆಗಾಗಿ ಓಂ ಪ್ರಕಾಶ್ 9060382926 ಇವರನ್ನು ಸಂಪರ್ಕಿಸಲು ಕೋರಲಾಗಿದೆ. 


ಸುದ್ದಿ ಓದಿ