ಬಳ್ಳಾರಿ

ಫುಟ್‌ಪಾತ್, ಚರಂಡಿ ನಿರ್ಮಾಣಕ್ಕಾಗಿ ಶಾಸಕ ಸೋಮಶೇಖರರೆಡ್ಡಿ ಭೂಮಿಪೂಜೆ

ಫುಟ್‌ಪಾತ್, ಚರಂಡಿ ನಿರ್ಮಾಣಕ್ಕಾಗಿ ಶಾಸಕ ಸೋಮಶೇಖರರೆಡ್ಡಿ ಭೂಮಿಪೂಜೆ

ಲೋಕದರ್ಶನ ವರದಿ 

ಬಳ್ಳಾರಿ 25: ನಗರದ 15ನೇ ವಾರ್ಡ್‌ನ ರಾಘವೇಂದ್ರ ಚಿತ್ರಮಂದಿರದ ರಸ್ತೆಯಲ್ಲಿ ಸಂಗಮ ದರ್ಗಾದಿಂದ ರಾಘವೇಂದ್ರ ಚಿತ್ರಮಂದಿರ ರಸ್ತೆಯವರೆಗೆ ಸುಮಾರು 243 ಮೀಟರ್‌ಗಳ ಫುಟ್‌ಪಾತ್ ಹಾಗೂ ಚರಂಡಿ ನಿರ್ಮಾಣಕ್ಕಾಗಿ 15ನೇ ಹಣಕಾಸು ಯೋಜನೆಯಡಿಯಲ್ಲಿ ದಿ. 25ರಂದು ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಭೂಮಿಪೂಜೆ ನೆರವೇರಿಸಿದರು.   

ಈ ಸಂದರ್ಭದಲ್ಲಿ 15ನೇ ವಾರ್ಡ್‌ನ ಪಾಲಿಕೆ ಸದಸ್ಯ ನೂರ್ ಮಹಮ್ಮದ್‌. ಬರಾಕೊ ಹಾಲು ಒಕ್ಕೂಟದ ನಿರ್ದೇಶಕ ಜಿ.ವೀರಶೇಖರರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋತ್ಕರ್ ಶ್ರೀನಿವಾಸ್, 15ನೇ ವಾರ್ಡ್‌ನ ಬಿಜೆಪಿ ಮುಖಂಡ ಹಾಗೂ ಬಿಜೆಪಿ ನಗರ ಮಾಧ್ಯಮ ಸಂಚಾಲಕ ರಾಜೀವ್, ಪಾಲಕೆ ಮಾಜಿ ಸದಸ್ಯ ನಾಗಭೂಷಣ, ಬಿಜೆಪಿ ಮುಖಂಡರಾದ ಗೋಪಾಲ್, ಬದ್ರಿಕಾಂತ್, ರವೀಂದ್ರರೆಡ್ಡಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ