ಶಾಸಕ ಸೋಮನಗೌಡ ಪಾಟೀಲಗೆ ಗ್ರಾಮಸ್ಥರಿಂದ ಸನ್ಮಾನ
ತಾಳಿಕೋಟಿ: ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಅವರನ್ನು ಗ್ರಾಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮತಕ್ಷೇತ್ರದ ಹುಲಬೆಂಚಿ ಗ್ರಾಮದಲ್ಲಿ ಸುಮಾರು ರೂ. 97 ಲಕ್ಷ ಮೊತ್ತದ ಮನೆ-ಮನೆಗೆ ನಳ ಜೋಡಣೆ ಹಾಗೂ ಸಿ.ಸಿ. ರಸ್ತೆ ಮತ್ತು ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲು ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಈ ಸನ್ಮಾನ ನೀಡಲಾಯಿತು.
ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸೋಮನಗೌಡ ಪಾಟೀಲರು ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿ ಹಾಗೂ ವಿಶ್ವಾಸಕ್ಕೆ ಋಣಿಯಾಗಿರುವೆ. ಈ ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ಅತಿ ಹೆಚ್ಚು ಅನುದಾನ ತಂದು ಶಕ್ತಿಮೀರಿ ಕೆಲಸ ಮಾಡಿದ್ದೇನೆ.
ಅಭಿವೃದ್ಧಿ ವಿಷಯದಲ್ಲಿ ನಾನೆಂದೂ ಜಾತಿರಾಜಕಾರಣ ಮಾಡಿಲ್ಲ ನನ್ನ ಮತಕ್ಷೇತ್ರದ ವ್ಯಾಪ್ತಿಗೆ ಬರುವ 120 ಗ್ರಾಮಗಳಿಗೂ ಮೂಲಸೌಕರ್ಯ ನೀಡಲು ಅನುದಾನ ಕೊಟ್ಟಿದ್ದೇನೆ ಇದರಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ನಮ್ಮ ರೈತರನ್ನು ಆರ್ಥಿಕವಾಗಿ ಸಬಲೀಕರಿಸಲು ಸಾಕಷ್ಟು ನೀರಾವರಿ ಯೋಜನೆಗಳನ್ನು ತಂದಿದ್ದೇನೆ. ಇದೆಲ್ಲವೂ ನಿಮ್ಮೆಲ್ಲರ ಸಹಕಾರದಿಂದಲೇ ಸಾಧ್ಯವಾಗಿದೆ. ಮುಂದೆಯೂ ನನಗೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದರು.
ಈ ಸಮಯದಲ್ಲಿ ಮುಖಂಡರಾದ ಡಾ. ಬಸವರಾಜ ಅಸ್ಕಿ (ಕೊಣ್ಣೂರ), ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ಅಪ್ಪು ಲಮಾಣಿ, ಸದಸ್ಯ ಶ್ರೀಶೈಲ ಸಾಸನೂರ, ಗಣ್ಯರಾದ ಬಾಪುಗೌಡ ಧನ್ನೂರ, ಮಾಂತಯ್ಯ ಹಿರೇಮಠ, ಸಿ.ಎಸ್. ಕಚನೂರ, ಬಸವರಾಜ ಶಿವಯೋಗಿ, ಜಿಪಂ ಮಾಜಿ ಸದಸ್ಯ ಸಾಹೇಬಣ್ಣ ಆಲ್ಯಾಳ, ಜಯಕರ್ನಾಟಕ ರಾಜ್ಯ ಕಾರ್ಯದರ್ಶಿ ಬಸಲಿಂಗಪ್ಪ ಇಂಗಳಗಿ, ಮಲ್ಲನಗೌಡ ನಾಡಗೌಡ, ರಾಮನಗೌಡ ಬಿರಾದಾರ ಇದ್ದರು.