ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಸೋಮನಗೌಡ
ತಾಳಿಕೋಟಿ: ತಾಲೂಕಿನ ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಗೊಟಖಂಡ್ಕಿ - ಪೀರಾಪೂರ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ವೀಕ್ಷಿಸಿದರು.
ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಲೊಕೋಪಯೋಗಿ ಇಲಾಖೆ ಉಪವಿಭಾಗ ಮುದ್ದೇಬಿಹಾಳ ಇದರ ರೂ. 4 ಕೋಟಿ ಮೊತ್ತದ ಡಾಂಬರೀಕರಣ ರಸ್ತೆ ಅಭಿವೃದ್ಧಿ ಕಾಮಗಾರಿಯು ಗೊಟಖಂಡ್ಕಿ - ಪೀರಾಪೂರ ಮಾರ್ಗವಾಗಿ ನಡೆಯುತ್ತಿದ್ದು ಪ್ರಗತಿಯ ಹಂತದಲ್ಲಿದೆ.
ಸದರಿ ರಸ್ತೆ ಕಾಮಗಾರಿಯು ಗುಣಮಟ್ಟದಿಂದ ಕೂಡಿದ್ದಾಗಿರಬೇಕೆಂಬ ಕಾರಣಕ್ಕೆ ಶಾಸಕ ಸೋಮನಗೌಡ ಪಾಟೀಲರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಅವರು ಸ್ಥಳದಲ್ಲಿದ್ದ ಇಲಾಖಾ ಅಭಿಯಂತರ ಡಿ.ಬಿ. ಕಲಬುರ್ಗಿ ಇವರಿಂದ ಕಾಮಗಾರಿಯ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಇಲ್ಲಿಯವರೆಗಿನ ಕಾಮಗಾರಿಯು ಉತ್ತಮ ರೀತಿಯಲ್ಲಿದ್ದು ಮುಂದೆಯು ಹೀಗೆ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಹಾಗೂ ಅಭಿಯಂತರ ಕಲಬುರ್ಗಿ ಗೆ ನಿರ್ದೇ ಶಿಸಿದರು.
ಮುಖಂಡರಾದ ಸಂಗನಗೌಡ ಹೆಗರಡ್ಡಿ, ಬಸನಗೌಡ ಬಿರಾದಾರ, ಶರಣಗೌಡ ಪಾಟೀಲ, ಅಭಿಯಂತರ ಡಿ.ಬಿ. ಕಲಬುರ್ಗಿ ಇದ್ದರು