ತಾಳಿಕೋಟಿ

ಶಾಸಕ ಸೋಮನಗೌಡಗೆ ಬೇಲೂರು ಗ್ರಾಮಸ್ಥರಿಂದ ಸನ್ಮಾನ

ಶಾಸಕ ಸೋಮನಗೌಡಗೆ ಬೇಲೂರು ಗ್ರಾಮಸ್ಥರಿಂದ ಸನ್ಮಾನ

ತಾಳಿಕೋಟಿ: ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮಗೌಡ ಪಾಟೀಲ (ಸಾಸನೂರ) ಅವರನ್ನು ಬೇಲೂರು ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ ಗೌರವ ಸಮರೆ​‍್ಣ ನೀಡಲಾಯಿತು. 

ಇತ್ತೀಚೆಗೆ ತಾಲೂಕಿನ ಬೇಲೂರು ಗ್ರಾಮಕ್ಕೆ ಸುಮಾರು 63 ಲಕ್ಷ ಮೊತ್ತದ ಮನೆ-ಮನೆಗೆ ನಳ ಜೋಡಣೆ ಯೋಜನೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 

ಸನ್ಮಾನಿಸಿ ಸ್ವೀಕರಿಸಿ ಮಾತನಾಡಿದ ಸೋಮನಗೌಡರು ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿರುವೆ. ನಿಮ್ಮ ವಿಶ್ವಾಸಕ್ಕೆ ಧಕ್ಕೆ ಬರದ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ನಾನು ನಿಮ್ಮ ಪ್ರತಿನಿಧಿ ಎಂದು ಕರೆಯಿಸಿಕೊಳ್ಳುವುದಕ್ಕಿಂತಲೂ ನಿಮ್ಮ ಸೇವಕನೆಂದು ಕರೆಯಿಸಿಕೊಳ್ಳಲು ಇಷ್ಟ ಪಡುತ್ತೇನೆ, ಮುಂದೆಯೂ ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ನನಗೆ ಬೇಕು ಎಂದರು. 

ಈ ಸಮಯದಲ್ಲಿ ಗ್ರಾಮದ ಗಣ್ಯರಾದ ಬಿ.ಎಸ್‌. ಹಾವರಗಿ, ಶರಣಬಸಯ್ಯ ಗದಗಿಮಠ, ಪ್ರಶಾಂತ ಹಾವರಗಿ, ಚನ್ನಯ್ಯ ಗದಗಿಮಠ, ಸಂಗನಗೌಡ ಹೆಗರಡ್ಡಿ (ಭಂಟನೂರ), ಮುತ್ತುಗೌಡ ಮಾಳಿ (ಬಿಳೇಭಾವಿ), ಬಸನಗೌಡ ಬಿರಾದಾರ (ಪೀರಾಪೂರ), ಶಂಕರಗೌಡ ದೇಸಾಯಿ (ಶಳ್ಳಗಿ), ಸೋಮಗೌಡ ಹಾದಿಮನಿ (ಹೊಸಳ್ಳಿ), ಸಾಹೇಬಣ್ಣ ಆಲ್ಯಾಳ (ಭಂಟನೂರ) ಇದ್ದರು. 


ಸುದ್ದಿ ಓದಿ