ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸೋಮನಗೌಡ ಭೂಮಿ ಪೂಜೆ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಇಲ್ಲ
ತಾಳಿಕೋಟಿ: ದೇ. ಹಿಪ್ಪರಗಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ತಂದು ಕೆಲಸ ಮಾಡುತ್ತೀದ್ದೆನೆ ಇದರಲ್ಲಿ ಜಾತಿ ರಾಜಕಾರಣ ನಾನು ಮಾಡುವುದಿಲ್ಲ ಕ್ಷೇತ್ರದ ಎಲ್ಲ ವರ್ಗದ ಜನರ ಹಿತ ನನಗೆ ಮುಖ್ಯವಾಗಿದೆ ಎಂದು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ತಿಳಿಸಿದರು.
ಮತಕ್ಷೇತ್ರದ ನರಸಲಗಿ ತಾಂಡಾದಲ್ಲಿ ಬುಧುವಾರ ರೂ. 5 ಕೋಟಿ ವೆಚ್ಚದ 6.75 ಕಿ ಮೀ ನರಸಲಗಿ ತಾಂಡಾದಿಂದ ಬ. ಬಾಗೇವಾಡಿ ನಿಡಗುಂದಿ ಕೂಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿ ಅವರು ಮಾತನಾಡಿದರು.
ಎರಡು ವರ್ಷಗಳ ಹಿಂದೆಯೆ ಆಗಬೇಕಾದ ಈ ರಸ್ತೆ ಕಾರ್ಯ ಕೋವಿಡ್ನಿಂದಾಗಿ ಸಾಧ್ಯವಾಗಿರಲಿಲ್ಲ ಈಗ ರೂ. 5 ಕೋಟಿ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ರಸ್ತೆ ಆಗಲಿದೆ. ನರಸಲಗಿ ರಸ್ತೆಯ ಮೇಲೆ ನೀರು ಹರಿದು ಜನರಿಗೆ ತೊಂದರೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಅದನ್ನು ಆದಷ್ಟು ಬೇಗ ಸರಿ ಪಡಿಸಲು ಕ್ರಮ ವಹಿಸುತ್ತೇನೆ. ಕೊಡಗಾನೂರ ರಸ್ತೆ ಕಾಮಗಾರಿ ಈಗಾಗಲೆ ಪ್ರಗತಿ ಹಂತದಲ್ಲಿದೆ. ಈ ಭಾಗದ ಎಲ್ಲ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೀದ್ದೇನೆ ಇದಕ್ಕೆ ನಿಮ್ಮ ಸಹಕಾರ ಬೇಕು.
ಮತಕ್ಷೇತ್ರದಲ್ಲಿ ಸುಮಾರು 870 ಕೋಟಿ ವೆಚ್ಚದಲ್ಲಿ ಬೂದಿಹಾಳ-ಪೀರಾಪೂರ ನೀರಾವರಿ ಯೋಜನೆಯ ಕಾಮಗಾರಿ ನಡೆಯುತ್ತೀದೆ ಇದರ ಜೊತೆಗೆ ವಿಜಯಪೂರ ಮುಖ್ಯ ಕಾಲುವೆಯ ವಿತರಣಾ ಕಾಲುವೆಗಳ ನಿರ್ಮಾಣಕ್ಕಾಗಿ ರೂ. 680 ಕೋಟಿ ಅನುದಾನಕ್ಕೆ ಮುಖ್ಯ ಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ ಶೀಘ್ರದಲ್ಲಿಯೆ ಟೆಂಡರ ಕರೆದು ಕೆಲಸ ಆರಂಬಿಸಲಾಗುವುದು. ಇದರಿಂದ ಸುಮಾರು 1.20 ಲಕ್ಷ ಎಕರೆ ಜಮೀನು ನೀರಾವರಿಗೆ ಒಳಪಡುತ್ತದೆ ಎಂದರು.
ಈ ಸಂದರ್ಭದಲ್ಲಿ ವೇ.ಮೂ. ಸಂಗಯ್ಯ ಹಿರೇಮಠ, ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ಅನೀಲ ಲಮಾಣಿ, ಉಪಾದ್ಯಕ್ಷ ನಾಗೇಶ, ಶಾಂತಗೌಡ ಹೊಸಹಳ್ಳಿ, ಶ್ರೀಶೈಲಗೌಡ, ಬಿಇಒ ಸಂಗಮೇಶ ಪೂಜಾರಿ, ಎಇಇ ಪಿ ಬಿ ಧನವಾಡೆ, ಎಇ ವಿ ಎನ್ ಪಟ್ಟೇದ, ಗುತ್ತಿಗೆದಾರ ರಮೇಶ ಕವಲಗಿ, ಸೋಮನಗೌಡ ಪಾಟೀಲ, ಪಾಂಡುರಂಗ ದೊಡಮನಿ, ಚಂದ್ರಶೇಖರ ಬಿರಾದಾರ, ದೇವೇಂದ್ರ ಗೋನಾಳ ಇದ್ದರು.