ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸೋಮನಗೌಡ ಚಾಲನೆ
ಅಭಿವೃದ್ಧಿ ಪಥದತ್ತ ದೇವರ ಹಿಪ್ಪರಗಿ
ತಾಳಿಕೋಟಿ: ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದೆ. ಹರಿಯುವ ನೀರಾದಾಗ ಮಾತ್ರ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. ಈ ಕಾರಣಕ್ಕಾಗಿಯೇ ಸಾಕಷ್ಟು ಅನುದಾನವನ್ನು ತಂದು ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಸೋಮಗೌಡ ಪಾಟೀಲ (ಸಾಸನೂರ) ಹೇಳಿದರು.
ತಾಲೂಕಿನ ಫತ್ತೇಪೂರ ಗ್ರಾಮದಲ್ಲಿ ರೂ. 1 ಕೋಟಿ ಮೊತ್ತದ ಸಿ.ಸಿ. ರಸ್ತೆ ಹಾಗೂ 10 ಲಕ್ಷ ಮೊತ್ತದ ಸಮುದಾಯ ಭವನ, ಶಳ್ಳಗಿಯಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ, ಬೇಲೂರು ಗ್ರಾಮದಲ್ಲಿ ರೂ. 63 ಲಕ್ಷದ ನಳ ಜೋಡಣೆ ಕಾಮಗಾರಿ ಹಾಗೂ ನಾವದಗಿಯಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮತಕ್ಷೇತ್ರದಲ್ಲಿರುವ 120 ಗ್ರಾಮ ಹಾಗೂ 29 ತಾಂಡಾಗಳಿಗೂ ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ, ಶಿಕ್ಷಣ, ಆರೋಗ್ಯ ಹಾಗೂ ವಿಶೇಷವಾಗಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ ಕೆಲಸ ಮಾಡಿದ್ದೇನೆ. ಬ.ಸಾಲವಾಡಗಿ ಜಿ.ಪಂ. ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಈಗಾಗಲೇ ರಸ್ತೆ, ಕುಡಿಯುವ ನೀರು, ಹಾಗೂ ಶಿಕ್ಷಣಕ್ಕೆ ಅನುದಾನ ಕೊಟ್ಟಿದ್ದೇನೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ತಂದು ಕೆಲಸ ಮಾಡುವ ಮೂಲಕ ಮತದಾರರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮುಖಂಡರಾದ ಸಂಗನಗೌಡ ಹೆಗರಡ್ಡಿ, ಪ್ರಶಾಂತ ಹಾವರಗಿ, ಮುತ್ತುಗೌಡ ಮಾಳಿ, ಗುರುಗೌಡ ಗುರಡ್ಡಿ, ಸಾಹೇಬಗೌಡ ರಾರಡ್ಡಿ, ಶಂಕರಗೌಡ ದೇಸಾಯಿ, ಸಾಹೇಬಣ್ಣ ಆಲ್ಯಾಳ, ಬಸನಗೌಡ ಬಿರಾದಾರ, ಸೋಮಗೌಡ ಹಾದಿಮನಿ, ಎಸ್.ಎಂ. ಸಜ್ಜನ (ಸರ್), ರಾಯಪ್ಪಗೌಡ ಪಾಟೀಲ (ನೀರಲಗಿ), ಭೀಮನಗೌಡ ಪಾಟೀಲ (ನಾವದಗಿ), ರಾಜುಗೌಡ ಇಬ್ರಾಹಿಂಪೂರ, ಶಿವನಗೌಡ ಗೊಟಖಂಡ್ಕಿ, ಬಿ.ಎಸ್. ಹಾವರಗಿ (ಬೇಲೂರ), ತುಂಬಗಿ ಗ್ರಾ.ಪಂ. ಅಧ್ಯಕ್ಷ ನಿಂಗನಗೌಡ ಚೌದ್ರಿ, ಗೌತಮ್ ಫತ್ತೇಪೂರ, ಗ್ರಾ.ಪಂ. ಸದಸ್ಯ ಬಸು ಏವೂರ, ಅಯ್ಯಾಜ ಮಕಾನದಾರ (ಫತ್ತೇಪೂರ), ಗ್ರಾ.ಪಂ. ಸದಸ್ಯ ಎಸ್.ಎಸ್. ಪಾಟೀಲ (ಪೀರಾಪೂರ), ರಮೇಶ ದೊಡಮನಿ, ಯಮನಪ್ಪ ಹೊನ್ನಳ್ಳಿ, ಎ.ಇ. ಸಿ.ಆರ್. ಹಿರೇಮಠ, ಜೆ.ಇ. ಸಜ್ಜನ ಇದ್ದರು.