ವಿಜಯಪುರ

ಪತ್ರಕರ್ತರ ಸಂಘಕ್ಕೆ ಶಾಸಕ ಶಿವಾನಂದ ಪಾಟೀಲರಿಂದ ರೂ5 ಲಕ್ಷ ನೆರವು

ಪತ್ರಕರ್ತರ ಸಂಘಕ್ಕೆ ಶಾಸಕ ಶಿವಾನಂದ ಪಾಟೀಲರಿಂದ ರೂ5 ಲಕ್ಷ ನೆರವು
MLA Shivananda Patil provides ₹5 lakh aid to the Journalists' Association.

ಪತ್ರಕರ್ತರ ಸಂಘಕ್ಕೆ ಶಾಸಕ ಶಿವಾನಂದ ಪಾಟೀಲರಿಂದ ರೂ5 ಲಕ್ಷ ನೆರವು  

 ವಿಜಯಪುರ, ಸೆ.12:  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಅಭಿವೃದ್ಧಿ ಕಾರ್ಯಗಳಿಗೆ ಮಾಜಿ ಸಚಿವ ಹಾಗೂ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರು ವೈಯಕ್ತಿಕವಾಗಿ ?5 ಲಕ್ಷ ನೆರವು ನೀಡಿದರು.  

ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಅವರಿಗೆ ನೆರವಿನ ಮೊತ್ತವನ್ನು ಹಸ್ತಾಂತರಿಸಲಾಯಿತು. 2025ರ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಈ ನೆರವನ್ನು ನೀಡಿರುವುದಾಗಿ ಶಿವಾನಂದ ಪಾಟೀಲ ಹೇಳಿದರು.   

ಪತ್ರಕರ್ತರ ಹಿತ ಕಾಪಾಡುವ ಕಾರ್ಯಗಳಿಗೆ ಸಂಘದೊಂದಿಗೆ ಸದಾ ನಿಲ್ಲುವುದಾಗಿ ಭರವಸೆ ನೀಡಿದ ಅವರು, ಸಂಘದ ಚಟುವಟಿಕೆಗಳಿಗೆ ಅಗತ್ಯ ಸಹಾಯ-ಸಹಕಾರ ಮುಂದುವರಿಸುವುದಾಗಿ ತಿಳಿಸಿದರು.  

ಸಂಘದ ಆವರಣದಲ್ಲಿ ಕೊಳವೆಬಾವಿ ಕೊರೆಸಲಾಗಿದ್ದು, ಕಟ್ಟಡ ನವೀಕರಣ ಕಾಮಗಾರಿಗಳು ಶೀಘ್ರ ಆರಂಭವಾಗಲಿವೆ ಎಂದು ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಮಾಹಿತಿ ನೀಡಿದರು. 2023ರಲ್ಲಿ ವಿಜಯಪುರದಲ್ಲಿ ನಡೆದ ರಾಜ್ಯಮಟ್ಟದ 37ನೇ ಪತ್ರಕರ್ತರ ಸಮ್ಮೇಳನಕ್ಕೆ ಆಗಮಿಸಿದ್ದ ಪತ್ರಕರ್ತರಿಗೆ 3,000 ಬ್ಯಾಗ್‌ಗಳನ್ನು ವಿತರಿಸಿ ಶಾಸಕರು ಸಹಕಾರ ನೀಡಿದ್ದನ್ನು ಅವರು ಸ್ಮರಿಸಿದರು.  

ಹಿರಿಯ ಪತ್ರಕರ್ತರಾದ ಸೀತಾರಾಮ ಕುಲಕರ್ಣಿ, ರಾಜು ಕೊಂಡಗೂಳಿ, ಸಂಘಟನಾ ಕಾರ್ಯದರ್ಶಿಗಳಾದ ಮೋಹನ ಕುಲಕರ್ಣಿ, ದೇವೇಂದ್ರ ಹೆಳವರ, ಉಪಾಧ್ಯಕ್ಷ ಶಶಿಕಾಂತ ಮೆಂಡೆಗಾರ, ಸಮೀರ್ ಇನಾಂದಾರ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ