ಹಗರಿಬೊಮ್ಮನಹಳ್ಳಿ

ಸಿದ್ದಲಿಂಗಯ್ಯನವರಿಗೆ ಶಾಸಕ ಎಸ್.ಭೀಮಾನಾಯ್ಕ್ ಸಂತಾಪ

ಸಿದ್ದಲಿಂಗಯ್ಯನವರಿಗೆ ಶಾಸಕ ಎಸ್.ಭೀಮಾನಾಯ್ಕ್ ಸಂತಾಪ

ಹಗರಿಬೊಮ್ಮನಹಳ್ಳಿ 12: ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಶನಿವಾರ ನಾಡಿನ ಹಿರಿಯ ಕವಿ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದಲಿಂಗಯ್ಯನವರಿಗೆ ಶಾಸಕ ಎಸ್.ಭೀಮಾನಾಯ್ಕ್ ಸಂತಾಪ ಸೂಚಿಸಿದರು. ನಾಡಿನ ಹಿರಿಯ ಸಾಹಿತ್ಯ ಮುತ್ಸದ್ದಿ, ಅಜಾತ ಶತ್ರು, ಸಾಹಿತ್ಯದಿಂದಲೇ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದ ಮಹಾನ್ ವ್ಯಕ್ತಿಯಾಗಿದ್ದರು ಅವರ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಈ ಸಂಧರ್ಭದಲ್ಲಿ ಬುಡ್ಡಿ ಬಸವರಾಜ್, ಚಿಂತ್ರಪಳ್ಳಿ ದೇವೇಂದ್ರಪ್ಪ, ಪವಾಡಿ ಹನುಮಂತಪ್ಪ,ಹೆಗ್ಡಾಳ್ ರಾಮಣ್ಣ, ಅಕ್ಕಿ ತೋಟೇಶ್ ಸೇರಿದಂತೆ ಕಾಂಗ್ರೇಸ್ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು 

ಸುದ್ದಿ ಓದಿ