ಬಳ್ಳಾರಿ

ಅನ್ನದಾನ ಕಾರ್ಯಕ್ರಮಕ್ಕೆ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ

ಅನ್ನದಾನ ಕಾರ್ಯಕ್ರಮಕ್ಕೆ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ

ಬಳ್ಳಾರಿ:ಆ (31)ರಂದು ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರಾದ ಮಂಡ್ಲೂರು ಅನೂಪ್ ಕುಮಾರ್‌ರವರ ಜನ್ಮ ದಿನಾಚರಣೆ ಅಂಗವಾಗಿ ನಗರದ ವಿಮ್ಸ್‌ ಅಸ್ಪತ್ರೆ  ಆವರಣದಲ್ಲಿ ಇಂದು ಏರಿ​‍್ಡಸಿದ್ದ ಅನ್ನದಾನ ಕಾರ್ಯಕ್ರಮಕ್ಕೆ ನಗರ ಶಾಸಕ ನಾರಾ ಭರತ್ ರೆಡ್ಡಿ ಆಹಾರ ವಿತರಿಸುವುದರೊಂದಿಗೆ ಚಾಲನೆ ನೀಡಿದರು.  

ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಹಾಗೂ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ನಿರ್ದೇಶಕರಾದ ಎನ್‌.ಧನುಂಜಯ ಹಮಲ್‌ರವರು ತಮ್ಮ ಸ್ವಂತ ನೆರವಿನಿಂದ ಏರಿ​‍್ಡಸಿದ್ದ ಈ ಅನ್ನದಾನ ಕಾರ್ಯಕ್ರಮದಲ್ಲಿ ಕೇಸರಿ ಬಾತ್ ಹಾಗೂ ಪಲಾವ್‌ನ್ನು ಅಂದಾಜು 1000 ಕ್ಕೂ ಹೆಚ್ಚು ಜನರಿಗೆ ವಿತರಿಸಲಾಯಿತು.  

ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರಾದ ಮುಂಡ್ಲೂರು ಅನೂಪ್ ಕುಮಾರ್‌ರವರ ಪುತ್ರ ಶ್ರೀರಾಮ್‌ರವರಿಗೆ ಧನುಂಜಯ ಹಮಾಲ್‌ರವರು ಆತ್ಮೀಯವಾಗಿ ಸನ್ಮಾನಿಸಿ ಸತ್ಕರಿಸಿದರು. ನಂತರ  ಲೋಕೇಶ್ ಮತ್ತು ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಕಾರ್ಯಕರ್ತರು ಇತರರು ಭಾಗವಹಿಸಿದ್ದರು. 


ಸುದ್ದಿ ಓದಿ