ಮುದ್ದೆಬಿಹಾಲ್

ಬಿಜೆಪಿ ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ ಶಾಸಕ ನಡಹಳ್ಳಿ: ದೇಸಾಯಿ

ಬಿಜೆಪಿ ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ ಶಾಸಕ ನಡಹಳ್ಳಿ: ದೇಸಾಯಿ

ಮುದ್ದೇಬಿಹಾಳ: ಬಿಜೆಪಿ ಪಕ್ಷದ ಪ್ರತಿಯೊಬ್ಬ  ಪರಿಶ್ರಮದಿಂದ ಗೆದ್ದು ಬಂದಿರುವ ಸ್ಥಳಿಯ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ಗೆದ್ದು ಬಂದಮೇಲೆ ಮೂಲ ಬಿಜೆಪಿ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಲ್ಲದೇ ಮತಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ ಹಿನ್ನೇಲೆಯಲ್ಲಿ ಬಿಜೆಪಿ ಪಕ್ಷ ಮತ್ತು ಸರಕಾರಕ್ಕೆ ತೀವ್ರ ಅಪಮಾನಕ್ಕಿಡಾಗುವಂತೆ ಮಾಡಿದ್ದಾರೆ ಕಾರಣ ನಡಹಳ್ಳಿ ಹಟಾವೋ ಬಿಜೆಪಿ ಬಚಾವೋ ಎನ್ನುವ ವಿನೂತ ಅಭಿಯಾನ ಹಮ್ಮಿಕೊಳ್ಳುವ ಮೂಲಕ ನಡಹಳ್ಳಿವರಿಗೆ ಬಿಜೆಪಿ ಟಿಕೇಟ ನೀಡದಂತೆ ವರಿಷ್ಠರಿಗೆ ಒತ್ತಾಯಿಸುತ್ತೇವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು. 

ಪಟ್ಟಣದ ಹಂಡರಗಲ್ಲ ರಸ್ತೆ ಮಾರ್ಗದಲ್ಲಿರುವ ದೇಸಾಯಿಯವರ ತೋಟದ ಮನೆಯಲ್ಲಿ ಮೂಲ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಕಳೇದ 27 ವರ್ಷಗಳಿಂದ ಮತಕ್ಷೇತ್ರದಲ್ಲಿ ಬಿಜೆಪಿ ಸಕ್ರೀಯ ಕಾರ್ಯಕರ್ತನಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಹಲವಾರು ಮುಖಂಡರಲ್ಲಿ ನಾನೂ ಕೂಡ ಒಬ್ಬನಿದ್ದೇನೆ. 2018ಕ್ಕಿಂತ ಮುಂಚೆ ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಅಧಿಕೃತ ಶಾಸಕರಾಗಿದ್ದರು ಆಗ ನಾನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷನಾಗಿದ್ದೇ ನನ್ನನ್ನು ರಾಜಕೀಯವಾಗಿ ತೇಜೋವಧೆ ಮಾಡುವ ಉದ್ದೇಶದಿಂದ ತಮ್ಮ ಆಪ್ತರ ಮೂಲಕ ನನ್ನ ಜಿಪಂ ಆಯ್ಕೆಯಲ್ಲಿ ಲೋಪವಿದೇ ಎಂದು ಬಣ್ಣಿಸಿ ನ್ಯಾಯಾಲದಲ್ಲಿ ಪ್ರಕರಣ ದಾಖಲಿಸಿದರು ಮುಂದೆ ನ್ಯಾಯಾಲಯ ನನಗೆ ನನ್ನ ಪರವಾಗಿ ತೀರ​‍್ು ನೀಡಿ ನಿಧೋಷಿ ಎಂದು ಆದೇಶ ಮಾಡಿತು ತದನಂತರ 2018ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ನಡಹಳ್ಳಿಯವರೇ ನಮ್ಮ ಬಿಜೆಪಿ ಪಕ್ಷವನ್ನು ಸೇರಿದರು.  

ಆಗ ನಮ್ಮ ಮೂಲ ಕಾರ್ಯಕರ್ತರಿಗೂ ಸ್ವಲ್ಪ ಅಸಮಾನ ವಿತ್ತು ಆಸಮಯದಲ್ಲಿ ಎ ಎಸ್ ಪಾಟೀಲ(ನಡಹಳ್ಳಿ)ಯವರ ಸಹೋದರ ಶಾಂತಗೌಡ ಪಾಟೀಲ ಮತ್ತು ಹಲವಾರು ಸ್ನೇಹಿರೊಂದಿಗೆ ನನ್ನ ಮನೆಗೆ ಬಂದು ಹಳೆ ವೈಷಮ್ಯಗಳನ್ನು ಮರೆತು ಇದೋಂದು ಸಲ ನಮ್ಮ ಸಹೋದರಿಗೆ ಬೆಂಬಲಿಸಿ ಗೆಲ್ಲಿಸಿ ನಿಮ್ಮ ಸಹಕಾರ ಅತ್ಯಗತ್ಯವಾಗಿದೆ ಎಂದು ಕಳಕಳಿಯಿಂದ ಕೆಳಿಕೊಂಡರು. ಹಾಗಾಗಿ ನಾನು ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹೇಮರಡ್ಡಿ ಮೇಟಿಯವರು ಸೇರಿದಂತೆ ಅನೇಕ ಮುಖಂಡರು ಹಾಗೂ ನನ್ನ ಜೊತೆಗಿರುವ ಸ್ನೇಹಿತರನ್ನು ಒಗ್ಗೂಡಿಸಿಕೊಂಡು ಎಲ್ಲವನ್ನು ಮರೇತು ನಡಹಳ್ಳಿಯವರನ್ನು ಗೆಲ್ಲಿಸಲು ಪ್ರಮಾಣಿಕವಾಗಿ ಪ್ರಯತ್ನಿಸಿ ಗೆಲ್ಲಿಸಿದೇವೂ ಇದು ಕೇವಲ ನನಗೊಬ್ಬನಿಗೆ ಮಾತ್ರವಲ್ಲಿ ಎಲ್ಲ ಕಾರ್ಯಕರ್ತರಿಗೂ ಈ ಕೀರ್ತಿ ಸಲ್ಲುತ್ತದೆ. 

ಮುಂದೆ ಗೆದ್ದ ನಂತರ ಎ ಎಸ್ ಪಾಟೀಲ(ನಡಹಳ್ಳಿ)ಯವರು ಮೂಲ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ವಿವಿಧ ಮುಖಂಡರಿಗೆ ಯಾವೂದೇ ಗೌರವವನ್ನು ಕೋಡದೇ ಯಾವೂದೇ ಸ್ವಾನ ಮಾನಗಳನ್ನು ನೀಡದೇ ಅಪಮಾನ ಮಾಡುತ್ತಲೇ ಬಂದರು ಈ ಬಗ್ಗೆ ಎಲ್ಲವೂ ಗೊತ್ತಿದ್ದರೂ ಇಂದಲ್ಲ ನಾಳೆ ಸುಧಾರಿಸಿಕೊಳ್ಳಬಹುದು ಎಂದು ಇಷ್ಟುದಿನ ಮೌನವಹಿಸಿದ್ದೇವು ಆದರೇ ತಮ್ಮ ತಪ್ಪು ತಾವೂ ಸರಿಪಡಿಸಿಕೊಳ್ಳಲೇ ಇಲ್ಲ ಜೊತೆಗೆ ನಮ್ಮ ಮೂಲ ಬಿಜೆಪಿ ಕಾರ್ಯಕರ್ತರ ಮೇಲೆ ಇಲ್ಲ ಸಲ್ಲದ ಪೋಲಿಸ್ ಪ್ರಕರಣ ದಾಖಲಿಸುವ ಮೂಲಕ ದುರಾಢಳಿತ ಮತ್ತು ಬ್ರಷ್ಟಾಚಾರ ನಡೆಸುತ್ತಲೇ ಬಂದರು. ಇದನ್ನು ಗಮನಿಸಿದ ನಾನು ಮತ್ತು ನಮ್ಮ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಅನಿವಾರ್ಯವಾಗಿ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಟಿಕೇಟ್ ನೀಡಬಾರದು ಎಂದು ವರಿಷ್ಠರಿಗೆ ಹಕ್ಕೋತ್ತಾಯ ಮಾಡುತ್ತಿದ್ದೇವೆ ವಿನಃ ನಾವ್ಯಾರು ಬಿಜೆಪಿ ಪಕ್ಷರ ಸರಕಾರದ ವಿರೋಧಿಗಳಲ್ಲ ಎಂದರು. 

ಸಧ್ಯ  ಈ ಬಾರಿ ಪಕ್ಷ ನನಗೆ ಟಿಕೇಟ ಕೊಟ್ಟರೇ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ ಇಲ್ಲದಿದ್ದರೇ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಕೆಲ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಅರಿಶಿಣ  ಕುಂಕುಮ ಹಚ್ಚಿ ಬಿಜೆಪಿ ಪಕ್ಷಕ್ಕೆ ಬನ್ನಿ ಎಂದು ಯಾರೂ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರನ್ನು ಕರೆದಿಲ್ಲ ಎಲ್ಲ ಲಾಭವಿರುತ್ತದೆ ಅಲ್ಲಿ ಹಲವಾರು ರೀತಿ ನಾಟಕ ಮಾಡಿ ವಲಸೆ ಹೋಗುವುದು ಚಾಳಿಯಾಗಿದೆ ಹಾಗಾಗಿ ತಾವೇ ಬಂದಿದ್ದಿರಿ ಇಲ್ಲಿಯೇ ಇರಬೇಕು ಎಂದು ಯಾರೂ ಕೂಡ ಒತ್ತಾಯ ಮಾಡುತ್ತಿಲ್ಲ. ಒಂದು ವೇಳೆ ಜನಬೆಂಬಲ ನಿಮಗಿದ್ದರೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬನ್ನಿ ನೋಡೋಣ ಎಂದು ಸವಾಲೇಸೆದರು. 

ಮತಕ್ಷೇತ್ರದಲ್ಲಿ ಈ ಹಿಂದೆ ನಡಹಳ್ಳಿಯವರು ಸಾಮಾಜಿಕ ಸೇವೆ ಹೆಸರಲ್ಲಿ ರಾಜಕೀಯಕ್ಕೆ ಬಂದರು. 2005 -06ರಲ್ಲಿ ಮಾರುತಿ ನಗರ ಬಡಾವಣೆಗೆ ಹೊಂದಿಕೊಂಡಿರುವ ತಮ್ಮ 16 ಎಕರೆ ಜಮೀನಿನಲ್ಲಿ ಬಡಹೆಣ್ಣುಮಕ್ಕಳ ಹೆರಿಗೆ ಆಸ್ಪತ್ರೆ ತೆರೆಯಲಾಗುವುದು ಎಂದು ಹೇಳಿ ತುಮಕೂರ ಸಿದ್ದಗಂಗಾ ಶ್ರೀಗಳನ್ನು ಕರೆಯಿಸಿ ಜನರಿಗೆ ನಂಬಿಸಿ ನಾಟಕ ಮಾಡಿದರು. ಆದರೇ ಸಧ್ಯ ಅದೇ ಜಮೀನಿನಲ್ಲಿ ಬಹುದೊಡ್ಡ ವಿಲಾಸಿ ಐಶಾರಾಮಿ ಮನೆ ನಿರ್ಮಿಸಿಕೊಂಡಿದ್ದಾರೆ ಆಸ್ಪತ್ರೆ ಯಾಕೆ  ನಿರ್ಮಿಸಲಿಲ್ಲ.? ಶಾಲಾ ಮಕ್ಕಳಿಗೆ ನೋಟ್ ಬುಕ್ ವಿರಿಸುವ ನೇಪದಲ್ಲಿ ಆಯಾ ಶಾಲಾ ಶಿಕ್ಷಕರಿಂದ ಖರ್ಚು ಮಾಡಿಸಿ ಶಾಲು ಸನ್ಮಾನ ಮಾಡಿಸಿಕೊಳ್ಳುವುದು ಪ್ರಚಾರ ಪಡೆದುಕೊಳ್ಳುವುದು ಖಯ್ಯಾಲಿ ಇವರದಾಗಿದೆ.  

ಎಲ್ಲ ಸರಕಾರಿ ಇಲಾಖೆ ಅಧಿಕಾರಿಗಳಿಂದ ಹಾಗೂ ವಿವಿಧ ಗುತ್ತಿಗೆದಾರರಿಂದ ಹಣವನ್ನು ಸುಲಿಗೆ ಮಾಡಿ ಕೋರೊನಾ ಸಂದರ್ಭದಲ್ಲಿ ಕೀಟ್ ವಿತರಣೆ ಮಾಡಿ ಎರಡುವರೆ ಮೂರು ಕೋಟಿ ಹಣವನ್ನು ಉಳಿತಾಯ ಮಾಡಿಕೊಂಡಿದ್ದಾರೆ ಎಂದು ನನಗೆ ಕೆಲ ಗುತ್ತಿಗೆದಾರರು ಸೂಕ್ಷ್ಮವಾಗಿ ತಿಳಿಸಿದರು. ನೋಟ್ ಬುಕ್ ಮೇಲೆ ಆಹಾರ ಕಿಟ್ಟ್‌ ಗಳ ಮೇಲೆ ಕೇವಲ ತಮ್ಮ ಮಗನ ಹಾಗೂ ತಮ್ಮ ಕುಟುಂಭದ ಫೋಟೋಗಳನ್ನು ಬಳಸಿಕೊಂಡರೇ ವಿನಃ ಬಿಜೆಪಿ ಪಕ್ಷದ್ದಾಗಲಿ ಅಥವಾ ಮುಖಂಡರದ್ದಾಗಲಿ, ಯಾವ ಫೋಟೋಗಳನ್ನು ಬಳಸಿಕೊಳ್ಳಲಿಲ್ಲ. ಟೀಮ್ ಎಎಸ್‌ಪಿ ಎನ್ನುವ ಕಾರ್ಯಕರ್ತರಿಗೇ ಮಾತ್ರ ಗೌರವಿಸಿ ಬಿಜೆಪಿ  ಪಕ್ಷ ನಿಷ್ಠೆ ಹಾಗೂ ಸಿದ್ದಾಂತ ಎನ್ನುವ ಕಾರ್ಯಕರ್ತರಿಗೆ ಸಂಪೂರ್ಣ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು. 

ರಾಜ್ಯದಲ್ಲಿ ಬಿಜೆಪಿ ಸರಕಾರ ಎಲ್ಲ ಮತಕ್ಷೇತ್ರಗಳಲ್ಲಿಯೂ ಗುಣಮಟ್ಟ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯ ವದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದೆ ಮಾತ್ರವಲ್ಲದೇ ಎಲ್ಲಡೆ ಸಿಸಿ ರಸ್ತೆಗಳನ್ನು ನಿರ್ಮಿಸಿದ ಕೀತಿ ಬಿಜೆಪಿ ಸರಕಾರಕ್ಕೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸಲ್ಲುತ್ತದೆ.  ಆದರೇ ನಡಹಳ್ಳಿಯವರು ನಾನು ಸಾವಿರಾರು ಕೋಟಿ ಅನುದಾನ ತಂದಿದ್ದೇನೆ ಮುಂದಿನ ದಿನಗಳಲ್ಲಿ ಮತ್ತೇ ನಾನು ಶಾಸಕನಾದರೇ ಮತಕ್ಷೇತ್ರದಲ್ಲಿ 10 ಸಾವಿರ ಉದ್ಯೋಗ ಸೃಷ್ಠಿ ಮಾಡುತ್ತೇನೆ ಎಂದು ಜನರಲ್ಲಿ ಸುಳ್ಳು ಭರವಸೆ ನೀಡುತ್ತಿದ್ದಾರೆ. ದೇವರ ಹಿಪ್ಪರಗಿಯಲ್ಲಿ ಎರಡು ಬಾರಿ ಶಾಸಕರಾಗಿದ್ದರು, ಸಧ್ಯ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 1 ಬಾರಿ ಅಂದರೆ 15 ವರ್ಷ ಶಾಸಕರಾಗಿದ್ದರೂ ಯಾಕೆ ಇಷ್ಟುದಿನ ಉದ್ಯೋಗ ಸೃಷ್ಠ ಮಾಡಲಿಲ್ಲ.? ಜನರಿಗೆ ಹೀಗೇ ದಿನಕ್ಕೊಂದು ಸುಳ್ಳು ಭರವಸೆ ನೀಡುತ್ತಲೇ ದುರಾಲೋಚನೆಯಿಂದ ಕುತಂತ್ರದಿಂದ ಗೆದ್ದು ಬಂದಿದ್ದಾರೆ ವಿನಃ ನಿಜವಾಗಿಯೂ ಗೌರವದಿಂದ ಗೆದ್ದಿಲ್ಲ ಎಂದರು. 

ಚುನಾವಣೆಗಳು ಬಂದಾಗ ಮಾತ್ರ ನಡಹಳ್ಳಿಯವರು ಜನರಿಗೆ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ಮರಳು ಮಾಡಿ ಶಾಸಕರಾಗಬೇಕು ಎನ್ನುವುದೊಂದೆ ಉದ್ದೇಶವಿದೇ ವಿನಃ ನಿಜವಾದ ಜನರ ಸೇವೆ ಮಾಡುವ ಯಾವೂದೇ ಮನೋಭಾವ ಭಾವವಾಗಲಿ ಅಥವಾ ಮನಸ್ಸು ಕೂಡ ಅವರದ್ದಿಲ್ಲ ಎಂಬುದು ಸ್ಪಷ್ಠವಾಗಿ ಗೋಚರಿಸುತ್ತದೆ. ಕಳೆದ 5 ವರ್ಷಗಳಿಂದ ಶಾಸಕರ ಮನೆಯೇ ಬಿಜೆಪಿ ಪಕ್ಷದ ಕಚೇರಿಯಾಗಿತ್ತು. ಸಧ್ಯ ಚುನಾವಣೆ ಸಮಿಸುತ್ತಿರುವ ಹಿನ್ನೇಲೆಯಲ್ಲಿಯೇ ಧೀಡೀರನೇ ಹೊರಗಡೆ ಪಕ್ಷದ ಕಚೇರಿ ಸ್ಥಾಪಿಸಲಾಗಿದೆ ಇದಕ್ಕಿಂತ ಗಿಮಿಕ್ ಬೇರೆ ಬೇಕಾ.? ಎಂದು ಪ್ರಶ್ನಿಸಿದರು. 

 ಸಧ್ಯ ಮತಕ್ಷೇತ್ರದಲ್ಲಿ ನಡೆದ ಬಹುತೇಕ ಎಲ್ಲ ಕಾಮಗಾರಿಗಳನ್ನು ಹೋರ ಜಿಲ್ಲೆ ಹಾಗೂ ಹೊರ ಮತಕ್ಷೇತ್ರದವರೇ ಕಾಮಗಾರಿ ನಡೆಸುವಂತೆ ಮಾಡಿದ್ದರಿಂದ ಮತಕ್ಷೇತ್ರದ ಬಹುತೇಕ ಎಲ್ಲ ಗುತ್ತಿಗೆದಾರರು ಯಾವೂದೇ ಟೆಂಡೆರ್ ಇಲ್ಲದೇ ಕೆಲಸವಿಲ್ಲದೇ ತೀವೃ ಸಂಕಷ್ಟದಲ್ಲಿದ್ದಾರೆ ಹೀಗೇ ಹಲವಾರು ದುರಾಢಳಿತದಿಂದಾಗಿ ಮೂಲ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲದೇ ಇತರೇ ಸಾಮಾನ್ಯ ಜನರು ಕೂಡ ಬಿಜೆಪಿ ಪಕ್ಷದ ಬಗ್ಗೆ ಇರುವ ಗೌರವ ಮತ್ತು ಅಭಿಮಾನ ಕಳೆದುಕೊಳ್ಳುತ್ತಿದ್ದಾರೆ ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಎ ಎಸ್ ಪಾಟೀಲ(ನಡಹಳ್ಳಿ)ಯವರಿಗೆ ಬಿಜೆಪಿ ಟಿಕೆಟ್ ನೀಡದೇ ಯಾವೂದೇ ಮೂಲ ಬಿಜೆಪಿ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೇ ಬಿಜೆಪಿ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು. 

ಈ ವೇಳೆ ಜಿಲ್ಲಾ ಪಂಚಾಯತ್ ನಮಾಜಿ ಸದಸ್ಯ ಹೇಮರಡ್ಡಿ ಮೇಟಿ, ಬಾಜಪ ಹಿರಿಯ ಮುಖಂಡರಾದ ಗೋಪಾಲ ಗದ್ದನಕೇರಿ, ತಾಳಿಕೋಟೆಯ ಮಂಜುನಾಥ ಶೆಟ್ಟಿ, ಬಿಜೆಪಿ ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ದೇವೇಂದ್ರ ವಾಲಿಕಾರ, ಢವಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶಗೌಡ ಪಾಟೀಲ, ರಾಘವೇಂದ್ರ ಪತ್ತಾರ, ತಾಳಿಕೋಟೆ ಬಸನಗೌಡ ಪಾಟೀಲ, ಸುರೇಶ ಹಜೇರಿ, ರಾಮಣ್ಣ ಜಗತಾಪ, ರವಿ ಕಟ್ಟಿಮನಿ, ಬಸವರಾಜ ಮಾಲಿಪಾಟೀಲ, ಗಣ್ಯ ಉದ್ಯಮಿಗಳಾ ಸುನೀಲ ಇಲ್ಲೂರ, ಶರಣು ಸಜ್ಜನ, ಬಾಪುಗೌಡ ಪಿರಾಪೂರ, ಶಿವು ದಡ್ಡಿ, ಮಹಾಂತೇಶ ಹಡಪದ ಸೇರಿದಂತೆ ಹಲವರು ಇದ್ದರು,  


ಸುದ್ದಿ ಓದಿ