ಶಾಸಕ ನಡಹಳ್ಳಿ ಜನರ ದಾರಿ ತಪ್ಪಿಸುತ್ತಿದ್ದಾರೆ: ಶಾಂತಗೌಡ
ಲೋಕದರ್ಶನವರದಿ
ಮುದ್ದೇಬಿಹಾಳ: ಮುಂಬರುವ ದಿನಗಳಲ್ಲಿ ನಾನು ಗೆದ್ದುಬಂದರೆ ಸುಮಾರು 10 ಸಾವಿರ ಉದ್ಯೋಗ ಸೃಷ್ಠಿ ಮಾಡುತ್ತೇವೆ ಪ್ರತಿ ಕುಟುಂಬದ ಮಹಿಳೆಗೆ ಒಂದು ಹಸು ಕೋಡುವುದರ ಮೂಲಕ ತಿಂಗಳಿಗೆ 30 ಸಾವಿರ ಸಂಪಾದನೆ ಮಾಡುವಂತೆ ಮಾಡುತ್ತೇನೆ ಎಂದು ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಹೇಳಿಕೆ ನೀಡುವ ಮೂಲಕ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ.
ನಾವೇ ಶಾಸಕರಿಗೊಂದು ಹಸು ಕೊಡಿಸುತ್ತೇವೆ ತಿಂಗಳಿಗೆ 30 ಸಾವಿರ ದುಡಿದು ತೋರಿಸಲಿ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ಸವಾಲೆಸೆದರು. ಪಟ್ಟಣದ ವಿಜಯಪುರ ರಸ್ತೆ ಮಾರ್ಗಮಧ್ಯ ಇರುವ ತಮ್ಮ ಕಚೇರಿಯಲ್ಲಿ ಮಾತನಾಡಿದರು.
ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಕೇವಲ ಸಿಸಿ ರಸ್ತೆಗಳನ್ನು ಮಾಡಿ ಅವುಗಳಿಗೆ ವಿದ್ಯುತ್ ದೀಪಗಳನ್ನು ಹಾಕಿದರೇ ನಿಜವಾದ ಅಭಿವೃದ್ಧಿಯಾಗುವುದಿಲ್ಲ 2018ರ ಚುನಾವಣೆಗಿಂತ ಪೂರ್ವದಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಮುಖ್ಯಮಂತ್ರಿಯಾಗಿದ್ದ ಸಿದ್ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಗಳ ಅನುದಾನ ತರುವ ಮೂಲಕ ಹಿಂದುಳಿದ ಜನಾಂಗದ ಎಸ್ ಸಿ, ಎಸ್ಟಿ ವಸತಿ ಕಾಲೇಜು, ಸರಕಾರಿ ಶಾಲೆಗಳನ್ನು, ವಿದ್ಯುತ್ ಸ್ಥಾವರಗಳು ಸೇರಿದಂತೆ ಹಲವಾರು ನಿರಾವರಿ, ರಸ್ತೆ ನಿರ್ಮಾಣಗಳು ಯೋಜನೆಗಳಲ್ಲಿ ಅಭಿವೃದ್ಧಿ ಪಡಿಸಿದ ಕೀರ್ತಿ ಮಾಜಿ ಸಚಿವ ಸಿ ಎಸ್ ನಾಡಗೌಡ ಅವರಿಗೆ ಸಲ್ಲುತ್ತದೆ ಆದರೇ ಹಿಂದಿ ಶಾಸಕರ ಸರಕಾರದ ಆಡಳಿತದಲ್ಲ; ಆದ ಕಾಮಗಾರಿಗಳಿಗೆ ನಡಹಳ್ಳಿಯವರು ತಾವು ಮಾಡಿದೆನೆಂದು ಜನರಲ್ಲಿ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು.
ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಕುಟುಂಬ ರಾಜಕಾರಣ, ದುರಾಡಳಿತ, ಅನೈತಿಕ ರಾಜಕಾರಣ ಮತ್ತು ಬಿಜೆಪಿ ಮೂಲ ಕಾರ್ಯಕರ್ತರ ಹಾಗೂ ಪ್ರಮುಖ ಮುಖಂಡರ ಕಡೆಗಣೆಗೆ ಸಾಕ್ಷೀಯೇ ತಾಳಿಕೋಟೆಯಲ್ಲಿ ನಡೆದ ಬಿಜೆಪಿಯ ವಿಜಯಸಂಕಲ್ಪ ಯಾತ್ರೆ ವಿಫಲಗೊಂಡಿದೆ ಮಾತ್ರವಲ್ಲದೇ ಬಿಜೆಪಿ ಪಕ್ಷಕ್ಕೆ ಅಪಮಾನಕ್ಕೆ ಎಡೆಕೊಟ್ಟಿದೆ. ಮಾತ್ರವಲ್ಲದೇ ತಾಲೂಕಿನ ನಾಲತವಾಡದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ವಿವಿಧ ಕಾಮಗಾರಿಗಳಿಗೆ ಯೋಜನೆಗಳಿಗೆ ಚಾಲನೇ ನೀಡುವ ಕಾರ್ಯಕ್ರಮದಲ್ಲಿಯೂ ಸಹ ಬಿಜೆಪಿ ಮೂಲ ಕಾರ್ಯಕರ್ತರು ಮುಖಂಡರು ಗೈರು ಉಳಿದು ವಿರೋಧದ ನಡೆದ ಪ್ರದರ್ಶಿಸುವ ಮೂಲಕ ಅತೃತ್ಪವನ್ನು ವ್ಯಕ್ತಪಡಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಈ ಬಾರಿ 2023ರ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಎ ಎಸ್ ಪಾಟೀಲ(ನಡಹಳ್ಳಿ)ಯವರಿಗೆ ಟಿಕೇಟ್ ಕೊಟ್ಟರೇ ಖಂಡಿತ ಸೋಲು ಕಟ್ಟಿಟ್ಟಂತೆ ಹಾಗಾಗಿ ಬಿಜೆಪಿ ವರಿಷ್ಠರು ನಡಹಳ್ಳಿಯವರಿಗೆ ಟಿಕೇಟ್ ನೀಡದೇ ಮೂಲ ಬಿಜೆಪಿ ಕಾರ್ಯಕರ್ತರತಿಗೆ ಯಾರಿಗೇ ಟಿಕೇಟ್ ಕೊಟ್ಟರೂ ಎಲ್ಲ ಒಗ್ಗಟ್ಟಾಗಿ ಮತ್ತೆ ಬಿಜೆಪಿ ಗೆಲ್ಲಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು.
ನಡಹಳ್ಳಿಯವರು ನಿಜವಾಗಲು ಅಭಿವೃದ್ಧಿ ಕಾರ್ಯ ಮಾಡಿದ್ದರೆ ಜನರ ಮನಸ್ಸಿನಲ್ಲಿದ್ದಿದ್ದರೆ ಕೇರಳದ ಹಾಗೂ ಇತರೇ ರಾಜ್ಯದ ಪ್ರಖ್ಯಾತ ಮಾಂತ್ರಿಕರನ್ನು, ಮಂತ್ರವಾದಿಗಳನ್ನು ಕರೆಯಿಸಿ ಮಾಟ ಮಂತ್ರ ಮಾಡಿಸಿ ಯಾಕೆ ಮನೆ ಮನೆಗೆ ಮಹಿಳೆಯರಿಗೆ ಸೀರೆ ಸೇರಿದಂತೆ ಮತ್ತಿತತರ ವಸ್ತುಗಳನ್ನು ವಿತರಿಸುವ ಮೂಲಕ ಆಸೆ ಆಮೀಶಗಳನ್ನು ನೀಡಿ ಮತದಾರರನ್ನು ಓಲೈಸಿಕೊಳ್ಳುತ್ತಿದ್ದಾರೆ ಹಾಗಾದರೇ ಸೋಲಿನ ಭಯ ಶುರವಾಗಿದೆ ಎಂದರ್ಥವಲ್ಲವೇ.? ಲೋಕ ಕಲ್ಯಾಣಕ್ಕಾಗಿ ಹೋಮ ಹವನ ಮಾಡಿಸುತ್ತಿದ್ದೇನೆ ಎಂದು ಹೇಳಿವ ಶಾಸಕರು ಕೋರೊನಾ ಸಂದರ್ಭದಲ್ಲಿ-್ಲ ಜನರು ಜನಜೀವನ ಅಸ್ಥವೆಂಸ್ತಗೊಂಡು ಸಾವು ನೋವುಗಳ ಮದ್ಯೆ ಸಂಕಷ್ಟದಲ್ಲಿದ್ದ ವೇಳೆ ಆಗ ಲೋಕದ ಜನರ ಕಲ್ಯಾಣ ನಿಮಗೇ ಬೇಕಾಗಲಿಲ್ಲವೇ.? ಈ ಬಾರಿ ದೈವ ಶಕ್ತಿ ಎದರು ನಿಮ್ಮ ಯಾವ ಮಾಟಮಂತ್ರವೂ ಏನೂ ಮಾಡಲು ಸಾಧ್ಯವಿಲ್ಲ. ಆಸೇ ಆಮೀಶಗಳನ್ನು ನೀಡಿ ಸೀರೇ ಇತ್ಯಾದಿ ವಸ್ತುಗಳನ್ನು ನೀಡಿ ವಾಮಮಾರ್ಗದಿಂದ ಮತದಾರರ ಓಲೈಸುವ ಕಾರ್ಯ ಭಾರತದ ನಿಜವಾದ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿದಂತಾಗುತ್ತದೆ ಮಾತ್ರವಲ್ಲದೇ ಯಾವೂದೇ ರಾಜಕಾರಿಣಿಗಳು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಅವರ ಘನತೆಗೆ ಯೋಗ್ಯವಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ.
ಬಬಲೇಶ್ವರ ಶಾಸಕ ಎಂಬಿ ಪಾಟೀಲರು ಹಿಂದಿನ ಸರಕಾರದ ಅವಧಿಯಲ್ಲಿ ನಿರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ವಿಜಯಪುರ ಜಿಲ್ಲೇ ಸಮಗ್ರ ನಿರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಆಧುನಿಕ ಭಗರಥ ಎಂದು ಕರೆಯಿಸಿಕೊಂಡರು. ಸುಮಾರು 750 ಕೋಟಿಗಳವರೆಗೆ ಬ್ರಷ್ಟಾಚಾರ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ಕೊಟ್ಟಿದ್ದರು. ಆದರೇ ಸಧ್ಯ ರಾಜ್ಯದಲ್ಲಿ ತಮ್ಮದೇ ಸರಕಾರವಿದೆ ತಾವೂ ಕೂಡ ಬಿಜೆಪಿ ಶಾಸಕರಿದ್ದಿರಿ ಯಾಕೇ ಅವರ ವಿರುದ್ಧ ಕ್ರಮ ಕೈಗೊಳ್ಳಲು ವಿಧಾನ ಸೌಧ ಅಧಿವೇಶನದಲ್ಲಿ ಧ್ವನಿ ಎತ್ತಲಿಲ್ಲ.? ಎಂದು ಪ್ರಶ್ನಿಸಿದರು.
ಮತಕ್ಷೇತ್ರದ ಯಾವೋಬ್ಬ ಗುತ್ತಿಗೆದಾರರಿಂದ ಒಂದು ನೈಯಾ ಪೈಸೆ ಹಣ ಕಮಿಷನ್ ಪಡೆದಿಲ್ಲ ಸುಮ್ಮನೆ ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಆದರೇ ಶಾಸಕ ನಡಹಳ್ಳಿಯವರು ಶೇಕಡಾ 10ರಿಂದ 15 ರಷ್ಟು ಕಮಿಷನ್ ಪಡೆದಿರುವ ದಾಖಲೆಗಳು ಮತ್ತು ನೀವು ಗುತ್ತಿಗೆದಾರರ ಬಳಿ ಹಣ ಪಡೆಯುತ್ತಿರುವ ವಿಡಿಯೋಗಳು ನನ್ನ ಹಾಗೂ ನಮ್ಮೇಲ್ಲ ಗುತ್ತಿಗೆದಾರರ ಬಳಿ ಇವೇ ನೀವು ಈಗಲೇ ಬಿಡುಗಡೆ ಮಾಡಿ ಎಂದರೇ ತಕ್ಷಣದಲ್ಲಿಯೇ ಎಲ್ಲ ಬ್ರಷ್ಠಾಚಾರದ ಬಗ್ಗೆ ಜನರಿಗೆ ತಿಳಿಯುವಂತೆ ಮಾಡುತ್ತೇವೆ. ಬ್ರಷ್ಠಾಚಾರದಿಂದಲೇ ಸುಮಾರು 350 ಕೋಟಿಗಳಷ್ಟು ಹಣ ಗಳಿಸಿದ್ದಾರೆ ಅದರಲ್ಲಿ ನನ್ನ ನೇತೃತ್ವದಲ್ಲಿಯೇ ಬಹುತೇಕ ಗುತ್ತಿಗೆದಾರರು 95 ಕೋಟಿಗಳವರೆಗೆ ಕಮಿಷನ್ ಕೋಟ್ಟಿದ್ದಾರೆ ಯಾಕೆ ಸುಮ್ಮನೆ ನಮ್ಮ ಸಹೋದರರಿದ್ದಿರಿ ಎನ್ನುವ ಕಾರಣಕ್ಕೆ ನಾನು ಮೌನ ವಹಿಸಿದ್ದೇನೆ ಎಂದರು.
ಸಧ್ಯ ತಮ್ಮ ನಾಟಕೀಯ ರಾಜಕಾರಣ ನಿಲ್ಲಿಸಬೇಕು ನಿಮ್ಮ ದುರಾಢಳಿತ, ಬ್ರಷ್ಟಾಚಾರ, ದೌರ್ಜನ್ಯದ ಆಡಳಿತವನ್ನು ಜನರು ಬೇಸತ್ತು ಹೋಗಿದ್ದಾರೆ ಅವರೇ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ಈ ವೇಳೆ ಹುಲಗಪ್ಪ ನಾಲಕಮಕ್ಕಳ ಅನೇಕರು ಇದ್ದರು.