ತಾಳಿಕೋಟಿ

ಶಾಸಕ ನಡಹಳ್ಳಿಗೆ ಇಂಗಳಗೇರಿ ಗ್ರಾಮಸ್ಥರಿಂದ ಸನ್ಮಾನ

ಶಾಸಕ ನಡಹಳ್ಳಿಗೆ ಇಂಗಳಗೇರಿ ಗ್ರಾಮಸ್ಥರಿಂದ ಸನ್ಮಾನ

ತಾಳಿಕೋಟಿ: ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ (ನಡಹಳ್ಳಿ) ಇವರಿಗೆ ಇಂಗಳಗೇರಿ ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

ಇತ್ತೀಚೆಗೆ ಇಂಗಳಗೇರಿ ಗ್ರಾಮದಲ್ಲಿ ಸುಮಾರು ರೂ. 1 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿ ಸರಕಾರಿ ಶಾಲೆ ನೂತನ ಕಟ್ಟಡದ ಉದ್ಘಾಟನೆ ಹಾಗೂ ಬೀರಲಿಂಗೇಶ್ವರ ಕಲ್ಯಾಣ ಮಂಟಪ ಲೋಕಾರೆ​‍್ಣ ಮಾಡಲು ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಈ ಸನ್ಮಾನ ನೀಡಲಾಯಿತು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ನಡಹಳ್ಳಿ ಅವರು 25 ವರ್ಷಗಳವರೆಗೆ ನೀವು ಒಬ್ಬ ವ್ಯಕ್ತಿ ಹಾಗೂ ಒಂದೇ ಪಕ್ಷಕ್ಕೆ ಮತ ಹಾಕಿದ್ದೀರಿ. ತಮ್ಮ ಈ ಸುದೀರ್ಘವಾದ ಅವಧಿಯಲ್ಲಿ ಕ್ಷೇತ್ರಕ್ಕೆ ಏನು ಮಾಡಿದ್ದಾರೆಂಬುದು ನಿಮ್ಮ ಮುಂದೆಯೇ ಇದೆ. ನನಗೆ ಸಿಕ್ಕ ಕೇವಲ ನಾಲ್ಕು ವರ್ಷಗಳಲ್ಲಿ ಎಂತಹ ಅಭಿವೃದ್ಧಿ ಮಾಡಿ ತೋರಿಸಿದ್ದೇನೆ ಎಂದು ನೀವೇ ನೋಡುತ್ತಿದ್ದೀರಿ. ಯಾರು ಕೆಲಸ ಮಾಡುತ್ತಾರೋ ಜನ ಅವರಿಗೆ ಆಯ್ಕೆ ಮಾಡುತ್ತಾರೆ. ಅವರು ಕೆಲಸ ಮಾಡದಿರುವದರಿಂದಲೇ ಜನ ಅವರನ್ನು ತಿರಸ್ಕರಿಸಿದ್ದಾರೆ ಇದನ್ನು ಅವರು ತಿಳಿಯುವ ಅಗತ್ಯ ಇದೆ. ಇಲ್ಲದಿದ್ದರೆ ಮತ್ತೊಮ್ಮೆ ಜನರೇ ಅವರಿಗೆ ತಿಳಿಸಬೇಕಾಗುತ್ತದೆ. ಇವತ್ತು ಇಡೀ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಕೆಲಸ ಮಾಡುತ್ತಿದ್ದೇನೆ. ಇನ್ನೆರಡು ಅವಧಿಯಲ್ಲಿ ಉತ್ತರ ಕರ್ನಾಟಕದ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಇದಕ್ಕೆ ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದ ನನಗೆ ಬೇಕು ಎಂದು ಹೇಳಿದರು. 

ಈ ಸಮಯದಲ್ಲಿ ಗ್ರಾಪಂ ಅಧ್ಯಕ್ಷ ರಾಜುಗೌಡ ಕರಡ್ಡಿ, ನಿಂಗನಗೌಡ ಬಪ್ಪರಗಿ, ಗ್ರಾಪಂ ಸದಸ್ಯ ರಮೇಶ ಮುದ್ದೇಬಿಹಾಳ, ಎಸ್,ಡಿ.ಎಮ್‌.ಸಿ ಅಧ್ಯಕ್ಷ ರಮೇಶ ಸಾಸನೂರ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಮುತ್ತ್ಯಾ, ಬಸನಗೌಡ ಪಾಟೀಲ, ಮುತ್ತುರಾಜ ರಾಯಗೊಂಡ, ಸಿದ್ದನಗೌಡ ಪಾಟೀಲ, ಗುರಣ್ಣ ಕಟ್ಟಿ, ಸುರೇಶ ಹರನಾಳ, ಸೋಮನಗೌಡ ಮೇಟಿ, ಸಿದ್ದಣ್ಣ ಕುಂಟೋಜಿ, ನಿಂಗು ಕೋರಿ, ಎಇಇ ಜೆ.ಪಿ. ಶೆಟ್ಟಿ ಇದ್ದರು 


ಸುದ್ದಿ ಓದಿ