ಶಾಸಕನು ನಿರಾಸಕ್ತನಾದರೆ ಅಭಿವೃದ್ದಿಗೆ ಹೊಡೆತ: ಶಾಸಕ ನಡಹಳ್ಳಿ
ಲೋಕದರ್ಶನ ವರದಿ
ತಾಳಿಕೋಟೆ 23: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕ ಸ್ಥಾನವೆಂಬುದ್ದಕ್ಕೆ ಬಹುದೊಡ್ಡ ಗೌರವವಿದೆ ಹಿಂದಿನ ರಾಜರ ಕಾಲವನ್ನು ಅಂತ್ಯಮಾಡಿ ಈ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾದ ಮೇಲೆ ಶಾಸಕನಾದವನು ಪ್ರಜೆಗಳ ಸೇವಕನಾಗಿ ಕೆಲಸ ಮಾಡಬೇಕಾಗುತ್ತದೆ ಶಾಸಕ ಸ್ಥಾನದಲ್ಲಿದ್ದಾಗ ಸ್ವಲ್ಪೇ ನಿರಾಸಕ್ತನಾದರೂ ಅಭಿವೃದ್ದಿಗೆ ಬಹುದೊಡ್ಡ ಹೊಡೆತ ಬಿಳ್ಳುತ್ತದೆ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ನುಡಿದರು.
ತಾಲೂಕಿನ ಹಿರೂರ ಗ್ರಾಮದಲ್ಲಿ ಕನರ್ಾಟಕ ಗ್ರಾಮೀಣ ವಿದ್ಯಾ ಅಭಿವೃದ್ದಿ ಸಂಘದ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವರ್ಗದವರಿಂದ ನೂತನವಾಗಿ ಆಯ್ಕೆಯಾದ ಶಾಸಕರುಗಳಿಗೆ ಏರ್ಪಡಿಸಲಾದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ಶಾಸಕ ಸ್ಥಾನವನ್ನು ಕಲ್ಪಿಸಿದ ಪ್ರಜೆಗಳ ಉಜ್ವಲ ಭವಿಷ್ಯದ ದೃಷ್ಠಿ ಇಟ್ಟುಕೊಂಡು ಕಳಿ ಕಳಿಯಿಂದ ಕೆಲಸ ಮಾಡಿದಾಗ ಶಾಸಕ ಸ್ಥಾನವನ್ನು ಕಲ್ಪಿಸಿಕೊಟ್ಟ ಜನರ ಋಣವನ್ನು ತೀರಿಸಿದಂತಾಗುತ್ತದೆ ಈ ಸಮಾಜದ ಋಣವನ್ನು ತೀರಿಸಬೇಕಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರಾದ ನಾವುಗಳು ಸಕರ್ಾರದ ಸೌಲಭ್ಯಗಳನ್ನು ಸಮಾಜದ ಕಟ್ಟೆ ಕಡೆಯ ಮನುಷ್ಯನಿಗೆ ತಲುಪಿಸುವಂತಹ ಕಾರ್ಯವಾಗಬೇಕು ರಾಜಕಾರಣಿಗಳಾದ ನಾವುಗಳು ಸ್ವಾರ್ಥದ ಉದ್ದೇಶವನ್ನಿಟ್ಟುಕೊಂಡು ಮುನ್ನಡೆದರೆ ಪ್ರಜೆಗಳ ನೀಡಿದ ಶಾಸಕ ಸ್ಥಾನದ ಗೌರವ ಕಳೆದುಕೊಳ್ಳಬೇಕಾಗುತ್ತದೆ ಎಂದರು. ಜಿಲ್ಲೆಯ ರೈತರು ಪ್ರತಿಭಟಿಸುವ ದೈರ್ಯವನ್ನು ತುಂಬಿಕೊಳ್ಳಬೇಕಾಗಿದೆ ಸಕರ್ಾರಕ್ಕೆ ಚಾಟಿ ಏಟು ನೀಡುವಂತಹ ಕಾರ್ಯವಾಗಬೇಕಿದೆ ಎಂದರು. ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಕುಡಿಯುವ ನೀರಿಗೆ ಹಾಗೂ ದನಕರುಗಳಿಗೆ ನೀರಿನ ಅಭಾವ ಆಗಬಾರದೆಂಬ ಉದ್ದೇಶದಿಂದ ಮುದ್ದೇಬಿಹಾಳ ತಾಲೂಕಿನಲ್ಲಿಯ 18 ಕೇರೆಗಳನ್ನು ಸಂಪೂರ್ಣ ತುಂಬಿಸಿದ್ದೇನೆ ಇನ್ನೂ ಕೆಲವು ಕೆರೆಗಳಿಗೆ ನೀರು ಹರಿಸಬೇಕಿದೆ ಕಾಲುವೆಗಳು ಪೂರ್ಣಗೊಂಡದ್ದರಿಂದ ನಿಂತಿವೆ ಆ ಕರೆಗಳನ್ನು ಕಾಲುವೆಗಳನ್ನು ಪೂರ್ಣಗೊಳಿಸಿ ತುಂಬಿಸುವಂತಹ ಕಾರ್ಯ ಮಾಡಲಾಗುವದು ಅದೇ ರೀತಿ ದೇವರ ಹಿಪ್ಪರಗಿ ಕ್ಷೇತ್ರಗಳ ಕರೆಗಳಿಗೆ ಕಾಲುವೆಗಳ ಅಪೂರ್ಣದಿಂದ ಕರೆ ತುಂಬುವದು ನಿಂತಿದೆ ಆ ಕೆರೆಗಳನ್ನು ತುಂಬಿಸಲು ಕ್ಷೇತ್ರದ ಶಾಸಕರಾದ ಸೋಮನಗೌಡ ಪಾಟೀಲರು ಮುಂದಾಗುತ್ತಿದ್ದಾರೆ ಆ ಕಾರ್ಯವೂ ಶೀಘ್ರದಲ್ಲಿ ನಡೆಯಲಿದೆ ಎಂದರು.
ಇನ್ನೋರ್ವ ಅತಿಥಿ ಸನ್ಮಾನ ಸ್ವಿಕರಿಸಿದ ದೇವರ ಹಿಪ್ಪರ ಮತಕ್ಷೇತ್ರ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಮಾತನಾಡಿ ದೇವರ ಹಿಪ್ಪರಗಿ ಮತ್ತು ಮುದ್ದೇಬಿಹಾಳ ಕ್ಷೇತ್ರಗಳು ಇಬ್ಬರು ಶಾಸಕರಿಗೆ ಎರಡು ಕಣ್ಣುಗಳಿದ್ದಂತೆ ಈ ಎರಡೂ ಕ್ಷೇತ್ರಗಳ ಅಭಿವೃದ್ದಿಗೆ ಜೋಡೆತ್ತುಗಳಂತೆ ಕೆಲಸ ಮಾಡುತ್ತೇವೆ ಕೆಜಿವ್ಹಿಎ ಸಂಘವನ್ನು ಕಟ್ಟಿ ಬೆಳೆಸಿದಂತಹ ಮಾಜಿ ಸಚಿವರಾದ ನಮ್ಮ ತಂದೆವರಾದ ದಿ.ಬಿ.ಎಸ್.ಪಾಟೀಲ(ಸಾಸನೂರ) ಅವರು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇಡೀ ರಾಜ್ಯದಲ್ಲಿಯೇ ಸಜ್ಜನ ರಾಜಕಾರಣಿ ಎಂಬ ಹೆಸರನ್ನು ಗಳಿಸಿದ್ದಾರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆಂದರು. ಹಿರೂರ ಅನ್ನದಾನೇಶ್ವರ ಮಠದ ಗುರುಜಯಸಿದ್ದೇಶ್ವರ ಮಹಾಸ್ವಾಮಿಗಳು ಸಾನಿದ್ಯವಹಿಸಿ ಆಶಿರ್ವಚನ ನೀಡಿದರು. ಶಿಕ್ಷಕ ಬಿ.ಕೆ.ಪಾಟೀಲ ಪ್ರಾಸ್ಥಾವಿಕ ಮಾತನಾಡಿದರು.
ಇದೇ ಸಮಯದಲ್ಲಿ ಕೆಜಿವ್ಹಿಎ ಸಂಘದ ವಿವಿಧ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವರ್ಗದವರಿಂದ ಶಾಸಕರಾದ ಸೋಮನಗೌಡ ಪಾಟೀಲ(ಸಾಸನೂರ) ಹಾಗೂ ಎ.ಎಸ್.ಪಾಟೀಲ(ನಡಹಳ್ಳಿ) ಅವರಿಗೆ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು. ಈ ಸಮಯಲ್ಲಿ ಕೆಜಿವ್ಹಿಎ ಸಂಘದ ಆಡಳಿತಾಧಿಕಾರಿ ಎಸ್.ಎಸ್.ಸಂಗನಗೌಡರ, ನಿದರ್ೇಶಕ ಡಾ.ಬಸವರಾಜ ಅಸ್ಕಿ, ಬಿ.ಎ.ಬಿರಾದಾರ, ಎಂ.ಕೆ.ಬಿರಾದಾರ, ಗ್ರಾಮದ ಗಣ್ಯರಾದ ಸಂಗಮೇಶ ಕೊಪ್ಪದ, ಜಿ.ಪಂ.ಸದಸ್ಯ ಕಲ್ಲಪ್ಪ ಮಡ್ಡಿ, ಗ್ರಾಂಪಂ ಅಧ್ಯಕ್ಷ ಚಂದ್ರಕಾಂತ ನಾಟೀಕಾರ, ಕೆಜಿವ್ಹಿಎ ಸಂಘದ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿವರಾದ ಎಸ್.ಎಂ.ಬಸಣ್ಣವರ, ಎ.ಎನ್.ನರಸರಡ್ಡಿ, ಆರ್.ಎಸ್.ಹಚಡದ, ಎಸ್.ಬಿ.ಗುಣಕಿ, ಆರ್.ಎಂ.ರಾಠೋಡ, ಎಸ್.ಸಿ.ಕುಂಟರಡ್ಡಿ, ಎ.ಬಿ.ಪುಲೇಸಿ, ಬಿ.ಎಸ್.ವಡಗೇರಿ, ಡಿ.ಡಿ.ಲಮಾಣೆ, ಬಿ.ಎಲ್.ಬ್ರೀಜೇಶಪೂರ, ಎಸ್.ಎ.ಕಾಮರಡ್ಡಿ, ಬಿ.ಕೆ.ಪಾಟೀಲ, ಬಿ.ಜಿ.ಬಿರಾದಾರ. ಮೊದಲಾದವರು. ಶಿಕ್ಷಕ ಎಸ್.ಆಯ್.ದೊಡಮನಿ ಸ್ವಾಗತಿಸಿದರು. ಎಸ್.ಬಿ.ಮಠ ನಿರೂಪಿಸಿದರು.