ರಸ್ತೆ ಕಾಮಗಾರಿಗೆ ಶಾಸಕ ನಡಹಳ್ಳಿ ಭೂಮಿ ಪೂಜೆ
ಮುದ್ದೇಬಿಹಾಳ16: ಕಳೆದ ಇಪ್ಪತ್ತೈದು ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡ ಬಲದಿನ್ನಿ ಕಾರಕುರ ಗ್ರಾಮವನ್ನು ನಾನು ಶಾಸಕನಾದ ಮೇಲೆ ಅಭಿವೃದ್ಧಿ ಪಡಿಸುವ ಭಾಗ್ಯ ಸಿಕ್ಕಿತು ಎಂದು ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಹೇಳಿದರು.
ತಾಲೂಕಿನ ರಕ್ಕಸಗಿ, ಬಲದಿನ್ನಿ ಕಾರಕುರ,ಟಕ್ಕಳಕಿ ಇಂಗಳಗಿ ಗ್ರಾಮದಲ್ಲಿ ಕೃಷ್ಣ ಭಾಗ್ಯ ಜಲ ನಿಗಮದಿಂದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಮಾತನಾಡಿದರು.
ಕಾರಕುರ ಗ್ರಾಮಕ್ಕೆ ಅತಿ ಹೆಚ್ಚು ಅನುದಾನವನ್ನು ಕೊಟ್ಟು ಮುಖ್ಯವಾಗಿ ಮಕ್ಕಳೂ ಶಿಕ್ಷಣ ಕಲಿಯಲು ಹೊಸ ಶಾಲಾ ಕೊಠಡಿಗಳು ಹಾಗೂ ಎಸ್ ಸಿ ,ಎಸ್ಟಿ ಜನಾಂಗದವರಿಗೆ ಸಭಾ ಭವನ ನಿರ್ಮಾಣ ಮಾಡಿದ್ದೆವೆ ಅದರಂತೆ ಬಲದಿನ್ನಿ ಗ್ರಾಮವನ್ನು ಅಭಿವೃದ್ಧಿಗೊಳಿಸಿದ್ದೆನೆ ಬಡವರ ಸೇವೆ ದೇವರ ಪೂಜೆ ಅಂತ ನಂಬಿಕೆಯಿಂದ ಕೇಲಸ ಮಾಡಿದ್ದೇನೆ ಎಂದು ಮುಂದಿನ ದಿನಗಳಲ್ಲಿ ಉದ್ಶೋಗ ಸೃಷ್ಟಿಸಿ ಪ್ರತಿ ಗ್ರಾಮೀಣ ಭಾಗದ ಜನರ ಮನೆಯಲ್ಲಿ ಒಂದು ಹಸು ಇರಬೇಕು ಪ್ರತಿಯೊಬ್ಬ ಮಹಿಳೆಗೆ ಒಂದು ಹಸು ಕೊಡಿಸುವ ವ್ಯವಸ್ಥೆ ಅಗಬೇಕು ಪ್ರತಿ ಮಹಿಳೆ ಹೈಣುಗಾರಿಕೆ ಮಾಡಬೇಕು ಪ್ರತಿ ಗ್ರಾಮದಲ್ಲಿ ಕ್ಷೀರ ಕ್ರಾಂತಿ ಆಗಬೇಕು ಪ್ರತಿಯೊಬ್ಬರು ಆರ್ಥಿಕ ವಾಗಿ ಮುಂದೆ ಬರಬರಲು ಸಾಧ್ಯವಾಗುತ್ತದೆ ಎಂದರು. ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಏನು ಸಾಧ್ಯವೊ ಅದನ್ನು ಸರಕಾರದಿಂದ ಬರುವ ಯೋಜನೆಗಳನ್ನು ನಿಮಗೆ ನೂರಕ್ಕೆ ನೂರರಷ್ಟು ತಂದು ಕೊಡುತ್ತೇನೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದರ ಮಾತನಾಡಿ ಶಾಸಕರ ಮನೆಗೆ ಬಡವರು ಸಹಾಯ ಕೇಳಿಕೊಂಡು ಯಾರೇ ಹೋದರು ಅವರನ್ನು ಕರೆದು ಪ್ರೀತಿಯಿಂದ ಅವರ ಸಮಸ್ಯೆಗಳನ್ನು ಆಲಸಿ ಅವರ ಕೈಯಲ್ಲಿ ಆದಷ್ಟೂ ಸಹಾಯ ಮಾಡಿ ಕಳುಹಿಸುತ್ತಾರೆ ಮತಕ್ಷೇತ್ರದ ಜನರನ್ನು ಯಾವತ್ತೂ ಬರಿಗೈಲೆ ಕಳಿಸಿದ ಉದಾಹರಣೆ ಇಲ್ಲ ಬಡವರನ್ನು ದೇವರಂತೆ ಪೂಜಿಸುವ ಗುಣವುಳ್ಳವರು ನಮ್ಮ ಶಾಸಕರು ಎಂದು ಹೇಳಿದರು.
ಗೌರಮ್ಮ ಹುಣಗುಂದ ಮಾತನಾಡಿದರು ಇದಕ್ಕೂ ಮೊದಲು ಗ್ರಾಮದ ಮುತೈದಿಯರು ಶಾಸಕ ಎ ಎಸ್ ಪಾಟೀಲ ನಡಹಳ್ಳಿಯವರನ್ನು ಆರತಿ ಬೆಳಗುವ ಮೂಲಕ ಸ್ವಾಗತ ದರು ಗ್ರಾಮದ ಬಿಜೆಪಿಯ ಮುಖಂಡರು ಇದ್ದರು.